ವಿದೇಶದಲ್ಲಿ ನೆಲೆಸಿರುವ ಭಾರತೀಯರು 2024ರ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಅಂಶವು ಬಹಿರಂಗಪಡಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 25.64% ಅನಿವಾಸಿ ಭಾರತೀಯರು ಮತದಾನ ಮಾಡಿದ್ದು, 2024 ರ ಲೋಕಸಭೆ ಚುನಾವಣೆಯಲ್ಲಿ ಇದು 2.47% ಕ್ಕೆ ಇಳಿದಿದೆ ಎಂದು ಆಯೋಗದ ವಿಶ್ಲೇಷಣೆ ಹೇಳಿದೆ. ಲೋಕಸಭೆ ಚುನಾವಣೆ 2024
ಈ ವರ್ಷದ ಲೋಕಸಭೆ ಚುನಾವಣೆಗೆ 1,19,374 ವಿದೇಶಿ ನೋಂದಾಯಿತ ಮತದಾರರಿದ್ದು, ಅವರಲ್ಲಿ 2,958 ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಅದು ಹೇಳಿದೆ. 2019 ರಲ್ಲಿ, ಸಾಗರೋತ್ತರ ನೋಂದಾಯಿತ ಮತದಾರರ ಸಂಖ್ಯೆ 99,844 ಆಗಿದ್ದು, ಅವರಲ್ಲಿ 25,606 ಮಂದಿ ಮತ ಚಲಾಯಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಶೇಷವೇನೆಂದರೆ, 2019 ಮತ್ತು 2024 ಎರಡರಲ್ಲೂ ವಿದೇಶದಲ್ಲಿ ವಾಸಿಸುವ ನೋಂದಾಯಿತ ಮತದಾರರಲ್ಲಿ ಹೆಚ್ಚಿನವರು ಕೇರಳದವರಾಗಿದ್ದಾರೆ.
2024 ರಲ್ಲಿ, ವಿದೇಶದಲ್ಲಿ ನೆಲೆಸಿರುವ ಕೇರಳದ 89,839 ಮತದಾರರಲ್ಲಿ ಕೇವಲ 2,670 ಜನರು ಅಥವಾ ಕೇವಲ 2.97% ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. 2019 ರಲ್ಲಿ ಕೇರಳ ಅನಿವಾಸಿ ಭಾರತೀಯ ಮತದಾರರ ಅಂಕಿ ಅಂಶವು 29.13% ರಷ್ಟಿತ್ತು, ಒಟ್ಟು 87,651 ಸಾಗರೋತ್ತರ ಮತದಾರರಲ್ಲಿ 25,534 ಜನರು ಮತ ಚಲಾಯಿಸಿದ್ದರು.
ಮತ್ತೊಂದೆಡೆ, ಆಂಧ್ರಪ್ರದೇಶದ ಸಾಗರೋತ್ತರ ಭಾರತೀಯರ ಮತದಾನದ ಪ್ರಮಾಣವು ಈ ವರ್ಷ ಸುಧಾರಿಸಿದೆ. 2024 ರ ಚುನಾವಣೆಯಲ್ಲಿ, 7,927 ರಲ್ಲಿ 195 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ, 2019 ರಲ್ಲಿ 5,090 ಮತದಾರಲ್ಲಿ ಮತ ಚಲಾಯಿಸಿದವರು ಕೇಲವ ಐವರು ಮಾತ್ರ. ಲೋಕಸಭೆ ಚುನಾವಣೆ 2024
ಅನಿವಾಸಿ ಮತದಾರರು ಭಾರತದಲ್ಲಿ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ. ಅವರು ಭಾರತದ ಪ್ರಜೆಗಳಾಗಿದ್ದರೆ, ಬೇರೆ ಯಾವುದೇ ದೇಶದ ಪೌರತ್ವವನ್ನು ಪಡೆದಿಲ್ಲವಾಗಿದ್ದರೆ ಅವರು ಮತ ಚಲಾವಣೆಗೆ ನೋಂದಾಯಿಸಲು ಅರ್ಹರಾಗಿರುತ್ತಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯು ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಗಣನೀಯ ಕಡಿಮೆ ಅಂತರದೊಂದಿಗೆ ಗೆದ್ದಿತ್ತು. ಮೈತ್ರಿಕೂಟವು 293 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಬಿಜೆಪಿ ಸ್ವಂತ ಬಲದಲ್ಲಿ ಬಹುಮತಕ್ಕೇರಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ವಿಪಕ್ಷಗಳ ಇಂಡಿಯಾ ಮೈತ್ರಿಯು 234 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ: ಮನುಸ್ಮೃತಿ ಸುಟ್ಟ ಆರೋಪ: 13 ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಂಧನ
ಮನುಸ್ಮೃತಿ ಸುಟ್ಟ ಆರೋಪ: 13 ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಂಧನ


