ಲೋಕಸಭೆ ಚುನಾವಣೆಯಲ್ಲಿ ಗಮನ ಸೆಳೆದಿರುವ ಕೇರಳದ ವಡಗರ ಕ್ಷೇತ್ರದಲ್ಲಿ ಕಾಂಗ್ರೆಸ್ (ಯುಡಿಎಫ್) ಅಭ್ಯರ್ಥಿ ಶಾಫಿ ಪರಂಬಿಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇವರ ಪ್ರತಿಸ್ಪರ್ಧಿ ಸಿಪಿಐ (ಎಂ) ನ ಕೆ.ಕೆ ಶೈಲಜಾ ಟೀಚರ್ ಹಿನ್ನಡೆ ಅನುಭವಿಸಿದ್ದಾರೆ.
ಬೆಳಿಗ್ಗೆ 11:30ರ ಸುಮಾರಿಗೆ ಶಾಫಿ 2,25,230 ಮತಗಳನ್ನು ಪಡೆದರೆ, ಶೈಲಜಾ ಟೀಚರ್ 1,84,986 ಮತಗಳನ್ನು ಪಡೆದಿದ್ದರು. ಬಿಜೆಪಿಯ ಪ್ರಪುಲ್ ಕೃಷ್ಣನ್ ಅವರು 41,365 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಶಾಫಿ ಮತ್ತು ಶೈಲಜಾ ಟೀಚರ್ ನಡುವಿನ ಅಂತರ 40, 244 ಮತಗಳಷ್ಟಿತ್ತು.
ಯುವ ನಾಯಕ ಶಾಫಿ ಮತ್ತು ಆಡಳಿತರೂಢ ಸಿಪಿಐ (ಎಂ) ಪಕ್ಷದ ನಾಯಕಿ ಶೈಲಜಾ ಟೀಚರ್ ನಡುವಿನ ಕದನದಿಂದ ಎಲ್ಲರ ಚಿತ್ತ ವಡಗರದತ್ತ ನೆಟ್ಟಿದೆ. ಇಬ್ಬರು ಬಹಳ ಪ್ರಸಿದ್ದ ರಾಜಕೀಯ ನಾಯಕರಾಗಿರಾಗಿದ್ದಾರೆ.
ಪ್ರಸ್ತುತ ಪಾಲಕ್ಕಾಡ್‌ನ ಶಾಸಕರಾಗಿರುವ ಶಾಫಿ ಅವರಿಗೆ ವಡಗರದ ಲೋಕಸಭೆ ಟಿಕೆಟ್ ನೀಡಲಾಗಿದೆ. ಇತ್ತ ಮಾಟನ್ನೂರು ಕ್ಷೇತ್ರದ ಶಾಸಕಿಯಾಗಿರುವ ಶೈಲಜಾ ಟೀಚರ್ ಅವರನ್ನು ಸಿಪಿಐ(ಎಂ) ವಡಗರದಿಂದ ಕಣಕ್ಕಿಳಿಸಿದೆ. ಈ ಹಿಂದೆ ಕೇರಳ ಸರ್ಕಾರದಲ್ಲಿ ಸಚಿವರಾಗಿದ್ದ ಶೈಲಜಾ ಟೀಚರ್, ಕೋವಿಡ್ ಬಂದಾಗ ಸಮರ್ಥವಾಗಿ ನಿಭಾಯಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ : ಕೊಯಮತ್ತೂರು: ಬಿಜೆಪಿಯ ಅಣ್ಣಾಮಲೈಗೆ ಹಿನ್ನಡೆ


