ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ದಕ್ಷಿಣ ಭಾಗದ ನಗರವಾದ ಲಾಸ್ ಏಂಜಲೀಸ್‌ನಲ್ಲಿ ಉಂಟಾಗಿರುವ ಕಾಡ್ಗಿಚ್ಚು ನಾಲ್ಕು ದಿನ ಕಳೆದರೂ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕಾಡು-ನಾಡು ಸುಟ್ಟು ಭಸ್ಮವಾಗಿದ್ದು, ಹೊಸ ವರ್ಷದ ಆರಂಭ ಮಹಾ ದುರಂತಕ್ಕೆ ಸಾಕ್ಷಿಯಾಗಿದೆ.
ಕಳೆದ ಮಂಗಳವಾರದಿಂದ (ಜ.7) ಹೊತ್ತಿ ಉರಿಯುತ್ತಿರುವ ಬೆಂಕಿ, ಗಂಟೆ ಗಂಟೆಗೂ ಹೊಸ ಪ್ರದೇಶಗಳನ್ನು ಆವರಿಸಿಕೊಂಡು ಮುನ್ನುಗ್ಗುತ್ತಿದೆ. ಇದರಿಂದ ಜನರ ಮನೆ, ವ್ಯವಹಾರ ಸಂಸ್ಥೆಗಳು ಸೇರಿದಂತೆ ಸಾವಿರಾರು ಕಟ್ಟಡಗಳು ಸುಟ್ಟು ಭಸ್ಮವಾದರೆ, ವನ್ಯ ಜೀವಿಗಳು ತಮ್ಮ ನೆಲೆಯನ್ನು ಕಳೆದುಕೊಂಡಿದೆ. ಈ ಮೂಲಕ ಲಕ್ಷಾಂತರ ಜೀವಗಳು ನಿರಾಶ್ರಿತರಾಗಿದ್ದಾರೆ.
He is a #Hero #LosAngelesfire #LAFires #fire #californiafire #LosAngeles #SantaMonica #Pasadena #California #PalisadesFire #SantaAna #wildfire #eatonfire #CaliforniaWildfires #LosAngelesWildfire pic.twitter.com/WOTavHA69t
— Cerda Juliet (@CerdaJuli711) January 8, 2025
ವರದಿಗಳ ಪ್ರಕಾರ, ನಿನ್ನೆ ಜ.9, ಗುರುವಾರ) ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 5 ಆಗಿತ್ತು. ಅದು ಇಂದು (ಜ.10, ಶುಕ್ರವಾರ) 8ಕ್ಕೆ ಏರಿಕೆಯಾಗಿದೆ. ಸುಮಾರು 1 ಲಕ್ಷದಷ್ಟು ಜನರನ್ನು ಸ್ಥಳಾಂತರ ಮಾಡಿರುವ ಕ್ಯಾಲಿಫೋರ್ನಿಯಾ ರಾಜ್ಯ ಸರ್ಕಾರ, ತುರ್ತು ಪರಿಸ್ಥಿತಿ ಘೋಷಿಸಿದೆ. ವನ್ಯ ಜೀವಿಗಳ ಸಾವು-ನೋವಿನ ಕುರಿತು ಮಾಹಿತಿ ದೊರೆತಿಲ್ಲ. ಅವುಗಳ ರಕ್ಷಣಾ ಕಾರ್ಯ ನಡೆದಿರುವ ಬಗ್ಗೆಯೂ ವರದಿ ಲಭ್ಯವಾಗಿಲ್ಲ.
I am kashmiri and I hate the American government for many reasons..
But I do not hate the American people, and I do not wish anything bad to happen to them
Our hearts are with you, people of Los Angeles and California #CaliforniaWildfires #LosAngeles #LosAngelesWildfires pic.twitter.com/rme68ppBZq— zahir Majeed (@thezahii) January 9, 2025
‘ಸಾಂತಾ ಅನಾ’ ಎಂದು ಕರೆಯಲ್ಪಡುವ ಬಲವಾದ ಒಣ ಗಾಳಿಯು ಬೆಂಕಿಯ ಕೆನ್ನಾಗಲಿಗೆಯನ್ನು ವಿಸ್ತರಣೆ ಮಾಡುತ್ತಿದೆ. ಈ ಗಾಳಿಯೇ ಬೆಂಕಿ ನಂದಿಸಲು ಅಡ್ಡಿಯಾಗಿದೆ. ಸುಮಾರು 8 ಸಾವಿರ ರಕ್ಷಣಾ ಸಿಬ್ಬಂದಿ ಅಗ್ನಿಶಾಮಕ ವಾಹನಗಳು, ಹೆಲಿಕಾಫ್ಟರ್ ಸೇರಿದಂತೆ ವಿವಿಧ ರೀತಿಯಲ್ಲಿ ನಿರಂತರ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಈ ನಡುವೆ ಕೊಂಚ ನೀರಿನ ಕೊರೆತೆಯೂ ಎದುರಾಗಿದೆ.
ಲಾಸ್ ಏಂಜಲೀಸ್‌ನ ಪೆಸಿಫಿಕ್ ಪ್ಯಾಲಿಸೈಡ್ಸ್, ಪ್ಯಾಸಡೀನಾದ ಈಟನ್ ಕೆಯಾನ್, ಹಾಲಿವುಡ್ ಹಿಲ್ಸ್, ಲಿಡಿಯಾ ಪ್ರದೇಶ ವ್ಯಾಪ್ತಿಯಲ್ಲಿ ಗುರುವಾರ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಇದರ ಪರಿಣಾಮ ಹಾಲಿವುಡ್ ಹಿಲ್ಸ್‌ನಲ್ಲಿ ನೆಲೆಸಿರುವ ಕೋಟಿ ಕೋಟಿ ವೆಚ್ಚದ ಹಾಲಿವುಡ್‌ನ ಹಲವು ಸಿನಿ ತಾರೆಯರ ಮನೆಗಳು ಸುಟ್ಟು ಭಸ್ಮವಾಗಿವೆ. ನೂರಾರು ಸಿನಿ ತಾರೆಯರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಹಾಗೇ ಹಾಲಿವುಡ್ ಸಿನಿ ರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ವರದಿಗಳು ಹೇಳಿವೆ.
LOS ANGELES is looking like a war zone, similar to Gaza. May Allah have mercy 🙏 #LosAngeles #LosAngelesFire #LosAngelesWildfires pic.twitter.com/NOHt7XIqiN
— Huzaifa (@Huzaifa_Says11) January 9, 2025
ಹಾಲಿವುಡ್ ತಾರೆಯರಾದ ನಟ ಪ್ಯಾರಿಸ್ ಹಿಲ್ಟನ್, ಆಸ್ಕರ್ ವಿಜೇತ ನಟ ಆ್ಯಂಟನಿ ಹಾಪ್ಕಿನ್ಸ್, ಮತ್ತೊಬ್ಬ ಆಸ್ಕರ್ ವಿಜೇತ ನಟ ಜೆಫ್ ಬ್ರಿಡ್ಜಸ್, ನಟ ಬಿಲ್ಲಿ ಕ್ರಿಸ್ಟಲ್, ‘ಅಮೆರಿಕನ್ ಪೈ’ ನಟ ಯುಜಿನ್ ಲೆವಿ, ‘ರೋಸಾನ್’ ಸಿನಿಮಾದ ನಟ ಜಾನ್ ಗುಡ್‌ಮನ್, ‘ಸ್ಟಾರ್ ವಾರ್ಸ್’ ಚಿತ್ರದ ನಟ ಮಾರ್ಕ್ ಹ್ಯಾಮಿಲ್, ಇತರ ನಟರಾದ ಜೆನ್ನಿಫರ್ ಗ್ರೆ, ಕ್ಯಾರಿ ಎಲ್ವೆಸ್, ಆ್ಯಡಂ ಬ್ರೋಡಿ ಸೇರಿದಂತೆ ಹಲವರ ಮನೆ ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಇವರೆಲ್ಲರೂ ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ.
Prayers for Los Angeles 🙏🏽 It’s like a real life apocalypse 👀#la #fires #losangeles #lafire pic.twitter.com/zsyw1Jm2Ch
— Jevon "Jerzey" Goldson (@TheOnlyJerzey) January 10, 2025
ನಿರಂತರ ಹೊತ್ತಿ ಉರಿಯುತ್ತಿರುವ ಬೆಂಕಿಯಿಂದ ಲಾಸ್ ಏಂಜಲೀಸ್‌ನಲ್ಲಿ ಆಕಾಶವೇ ಕಿತ್ತಲೆ ಬಣ್ಣಕ್ಕೆ ತಿರುಗಿದೆ ಎಂದು ದುರಂತದ ಭೀಕರತೆಯನ್ನು ವರದಿಗಳು ಬಣ್ಣಿಸಿದೆ.
ಇದನ್ನೂ ಓದಿ : ಕಿರುಕುಳ ಕೊಡಬೇಡಿ ಎಂದು ಎಬಿವಿಪಿ ಕಾರ್ಯಕರ್ತರನ್ನು ಬೇಡಿದ ಉಪನ್ಯಾಸಕಿ


