ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೇನಾ ಅಧಿಕಾರಿಯನ್ನು ಇಂದೋರ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಯು ಸೇನೆಯ ನಾಯಕ್ ಶ್ರೇಣಿಯ ಅಧಿಕಾರಿಯಾಗಿದ್ದು, ಮಹಿಳೆ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಮಧ್ಯಪ್ರದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಂದೋರ್ ಮಹಿಳಾ ಠಾಣೆಯ ತಂಡವು ಎಂಐಜಿ ಪ್ರದೇಶದ ಐಷಾರಾಮಿ ಹೋಟೆಲ್‌ನಿಂದ ಅಧಿಕಾರಿಯನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದೋರ್‌ನಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರ ಪತ್ನಿಯಾಗಿರುವ ಮಹಿಳೆ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಪ್ರತಿಭಟನಾನಿರತ ವೈದ್ಯರ ಮೇಲೆ ಹಲ್ಲೆಗೆ ಸಂಚು ಎಂದು ಟಿಎಂಸಿ ಆರೋಪಿಸಿದ ನಂತರ ಸಿಪಿಐ(ಎಂ) ಮುಖಂಡ ಸೇರಿ ಇಬ್ಬರ ಬಂಧನ!
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸ್ ತಂಡವು ಹೋಟೆಲ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾಗಿ ಇಂದೋರ್ ಮಹಿಳಾ ಠಾಣಾ ಉಸ್ತುವಾರಿ ಕೌಶಲ್ಯ ಚೌಹಾಣ್ ಹೇಳಿದ್ದಾರೆ. ಪೂರ್ವ ಯುಪಿ ಮೂಲದ ಸೇನಾಧಿಕಾರಿಯನ್ನು ಕಳೆದ ವರ್ಷ ಇಂದೋರ್ ಜಿಲ್ಲೆಯ ಮೊವ್ ಕಂಟೋನ್ಮೆಂಟ್ ಪಟ್ಟಣದಲ್ಲಿ ನಿಯೋಜಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಧ್ಯಪ್ರದೇಶ
ಇಂದೋರ್‌ನಲ್ಲಿ ನಿಯೋಜನೆಯಾಗಿದ್ದ ವೇಳೆ ವಿವಾಹಿತ ಮಹಿಳೆಯನ್ನು ಭೇಟಿಯಾಗಿದ್ದ ಸೇನಾ ಅಧಿಕಾರಿ ಸ್ನೇಹ ಸಂಪಾದಿಸಿದ್ದರು. ಅದಾಗ್ಯೂ, ಆರೋಪಿಯು ತನ್ನ ಆಕ್ಷೇಪಾರ್ಹ ವಿಡಿಯೋ ಹೊಂದಿದ್ದು, ಅದನ್ನು ಬಳಸಿ ಬಲವಂತವಾಗಿ ದೈಹಿಕ ಸಂಬಂಧ ಒತ್ತಾಯಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಶುಕ್ರವಾರ, ಇಂದೋರ್‌ನ ಹೋಟೆಲ್‌ಗೆ ಬರುವಂತೆ ಹೇಳಿ ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆಯ ಖಾಸಗಿ ಜಾಗದಲ್ಲಿ ಗ್ಲಾಸ್ ತೂರಿಸಲು ಯತ್ನಿಸಿದ್ದಾನೆ ಎಂದು ಮಹಿಳಾ ಠಾಣಾ ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಆರೋಪಿಯು ಆರೋಪಗಳನ್ನು ನಿರಾಕರಿಸಿದ್ದು, ತಾನು ಮತ್ತು ಮಹಿಳೆ ಸಮ್ಮತಿಯ ಲೈಂಗಿಕ ಸಂಬಂಧವನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾನೆ.
ವೀಡಿಯೊನೋಡಿ: ಬಹಳ ಚೆಂದ ಹಾಡಿದ್ದೀರಿ ಮತ್ತು ಜೀವ ತುಂಬಿದ್ದೀರಿ ನಿಮಗೆ ಶರಣು ರಮೇಶ್ ಗಬ್ಬೂರ್ ಸರ್


