ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಬೇರೆಯವರೊಬ್ಬರು ಬರೆದಿರುವ ಕವಿತೆಯನ್ನು ತನ್ನ ಪತ್ನಿ ಬರೆದಿದ್ದಾರೆಂದು ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿರೋಧ ಪಕ್ಷಗಳು ಅವರ ವಿರುದ್ದ “ಕೃತಿಚೌರ್ಯ” ಆರೋಪ ಹೊರಿಸಿದ್ದಾರೆ.
ಶಿವರಾಜ್ ಸಿಂಗ್ ಚೌಹಾನ್ ಅವರ ಮಾವ ನವೆಂಬರ್ 18 ರಂದು ನಿಧನರಾಗಿದ್ದರು, ಇದಾಗಿ ನಾಲ್ಕು ದಿನಗಳ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ’ಬಾವುಜಿ’ ಎಂಬ ಹಿಂದಿ ಕವಿತೆಯ ಕೆಲವು ಸಾಲುಗಳನ್ನು ಹಂಚಿಕೊಂಡು ಇದನ್ನು ತಮ್ಮ ಪತ್ನಿ ಸಾಧನಾ ಸಿಂಗ್ ಬರೆದಿದ್ದಾರೆ ಎಂದು ಹೇಳಿಕೊಂಡಿದ್ದರು.
मेरी धर्मपत्नी ने स्व. बाबू जी के पुण्य स्मरण और जीवटता को कुछ पंक्तियों में पिरोया है-
जिसके कंधे पर बैठकर घूमा करती थी, उसे कंधा देकर आयी हूँ।
उसके माथे को चूमकर, ज़िंदगी की नसीहतें लेकर आयी हूँ।— Shivraj Singh Chouhan (@ChouhanShivraj) November 22, 2020
बाबू जी बहुत सरल, सहज और विनम्र थे। मैंने इतने वर्षों में उनके चेहरे पर कभी गुस्सा नहीं देखा।
आज बाबू जी प्रत्यक्ष भले ही हमारे बीच नहीं हैं, लेकिन वे सदैव हमारे प्रेरणा के स्रोत रहेंगे। वे साधना और शिव की शक्ति रहेंगे और उनका आशीर्वाद और स्नेह सदैव परिवार पर बना रहेगा।
— Shivraj Singh Chouhan (@ChouhanShivraj) November 22, 2020
ಆದರೆ, ಮಧ್ಯಪ್ರದೇಶ ಮೂಲದ ಬರಹಗಾರ್ತಿ ಭೂಮಿಕಾ ಬಿರ್ಥಾರೆ, “ಇದು ನನ್ನ ಕವಿತೆ” ಎಂದು ಹೇಳಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ವಿವಾದವೇರ್ಪಟ್ಟಿದೆ. ಅವರು “ನಾನು ನಿಮ್ಮ ಸೋದರ ಸೊಸೆಯಂತೆ ಇದ್ದೇನೆ. ನನ್ನ ಕವನವನ್ನು ಕದಿಯುವ ಮೂಲಕ ನೀವು ಏನು ಪಡೆಯುತ್ತೀರಿ? ಈ ಕವಿತೆಯನ್ನು ನಾನು ಬರೆದಿದ್ದೇನೆ. ನನ್ನ ಹಕ್ಕುಗಳನ್ನು ನೀವು ಉಲ್ಲಂಘಿಸುವುದಿಲ್ಲ ಎಂದು ಭಾವಿಸುತ್ತೇವೆ. ಸೋದರ ಮಾವ ಇರುವುದು ಹಕ್ಕುಗಳನ್ನು ರಕ್ಷಿಸಲು ತಾನೆ” ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
सर भांजी हूँ आपकी मेरी कविता चुराकर आपको क्या मिलेगा??? ये कविता मेरे द्वारा लिखी गयी है ????उम्मीद है आप मेरे अधिकारों का हनन नहीं करेंगे. मामा तो अधिकारों की रक्षा के लिए हैं ना ?????? @RahulGandhi @ChouhanShivraj @CMMadhyaPradesh @OfficeOfKNath @narendramodi @PMOIndia pic.twitter.com/0EPWZXPk07
— Bhumika (@bhumikabirthare) November 30, 2020
“ದಯವಿಟ್ಟು ನನಗೆ ಮನ್ನಣೆ ನೀಡಿ ಸರ್. ಈ ಕವಿತೆಯನ್ನು ನಾನು ಬರೆದಿದ್ದೇನೆ ಮತ್ತು ಅದರ ಶೀರ್ಷಿಕೆ ’ಡ್ಯಾಡಿ’ ಎಂದಾಗಿದೆ. ’ಬಾವುಜಿ’ ಅಲ್ಲ. ನನ್ನ ತಂದೆಯ ಮೇಲಿನ ನನ್ನ ಭಾವನೆಗಳಿಗೆ ಅನ್ಯಾಯ ಮಾಡಬೇಡಿ” ಎಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ.
Kindly give the credit to me sir @ChouhanShivraj . The poem is written by me .And its title is “Daddy “
..not baauji ?Don’t do injustice to my feelings for my father ?@PMOIndia @OfficeOfKNath @CMMadhyaPradesh @narendramodi @aajtak @DainikBhaskar @AmitShah https://t.co/RH00Akxdxw— Bhumika (@bhumikabirthare) December 1, 2020
“ನಾನು ನನ್ನ ತಂದೆಯ ಕೊನೆಯ ವಿಧಿಗಳನ್ನು ನಿರ್ವಹಿಸುತ್ತಿದ್ದಾಗ, ನನ್ನ ಫೋನ್‌ನ ನೋಟ್‌ಪ್ಯಾಡ್ ಅನ್ನು ಬಳಸಿ ಇದನ್ನು ಬರೆದಿದ್ದೇನೆ. ಬರೆದಾಗ ದಿನಾಂಕ ಮತ್ತು ಸಮಯವನ್ನು ಉಲ್ಲೇಖಿಸಿದ್ದೇನೆ. ನಂತರ ಅದನ್ನು ನನ್ನ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದೇನೆ” ಎಂದು ಭೂಮಿಕಾ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
“ನವೆಂಬರ್ 21 ರಂದು ನಾನು ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೇನೆ. ಮುಖ್ಯಮಂತ್ರಿಯ ಪತ್ನಿ ಸಾಧನಾ ಸಿಂಗ್ ಅವರು ವಾಟ್ಸಾಪ್ ಗುಂಪಿನಲ್ಲಿ ಕವಿತೆಯನ್ನು ಹಂಚಿಕೊಂಡಿದ್ದಾರೆ ಎಂದು ನನ್ನ ಸ್ನೇಹಿತ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದ. ಆದರೆ ಅದರ ನಂತರ ಮುಖ್ಯಮಂತ್ರಿಯವರು ತಮ್ಮ ಹೆಂಡತಿಗೆ ಮನ್ನಣೆ ನೀಡಿ ಕವಿತೆಯನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನನಗೆ ತೀವ್ರ ಆಕ್ಷೇಪವಿದೆ… ನೀವು ನನ್ನ ಸೋದರ ಮಾವ ಇದ್ದಂತೆ, ನನ್ನ ನೆಚ್ಚಿನವರು. ಇದನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ. ನನಗೆ ಬೇಕಾಗಿರುವುದು ನಾನು ಬರೆದದ್ದಕ್ಕೆ ಮನ್ನಣೆ ಮಾತ್ರ” ಎಂದು ಅವರು ಹೇಳಿದ್ದಾರೆ.
ಶಿವರಾಜ್ ಸಿಂಗ್ ಅವರು ಈ ಕೃತ್ಯವನ್ನು ಕಾಂಗ್ರೆಸ್ ಹಿರಿಯ ನಾಯಕ ಅರುಣ್ ಯಾದವ್ ಅವರು ಟೀಕಿಸಿದ್ದು, “ಬಿಜೆಪಿಗರು ಹೆಸರುಗಳನ್ನು ಬದಲಾಯಿಸುವಲ್ಲಿ ಪರಿಣಿತರು. ಈ ಹಿಂದೆ ಅವರು ಕಾಂಗ್ರೆಸ್ ಆಡಳಿತವು ಪರಿಚಯಿಸಿದ ಯೋಜನೆಗಳ ಹೆಸರನ್ನು ಬದಲಾಯಿಸುತ್ತಿದ್ದರು, ಆದರೆ ಈಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಬೇರೊಬ್ಬರು ಬರೆದ ಕವಿತೆಯನ್ನು ಅವರ ಹೆಂಡತಿ ಬರೆದಿದ್ದು ಎಂದು ಹೇಳುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
भाजपा नाम बदलने में माहिर है यह बात एक बार फिर उजागर हो गई,
पहले कांग्रेस की योजनाओं के नाम बदलते थे, फिर शहरों के नाम बदलने लगे और अब तो मुख्यमंत्री शिवराज सिंह जी दूसरों की लिखी हुई कविताओं को भी अपनी धर्मपत्नी की लिखी हुई कविता बताने लगे है ।
वाह शिवराज जी वाह ।#शर्मराज pic.twitter.com/iTB0aEnTIc— Arun Yadav ?? (@MPArunYadav) November 30, 2020
ವಿವಾದದ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯ ಬಿಜೆಪಿ ಘಟಕ ನಿರಾಕರಿಸಿದ್ದು, ಇದು ಅವರ ವೈಯಕ್ತಿಕ ವಿಷಯ ಎಂದು ಹೇಳಿದೆ ಎಂದು NDTV ವರದಿ ಮಾಡಿದೆ.


