ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ 30 ವರ್ಷದ ದಲಿತ ವ್ಯಕ್ತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಅವರ ಕುಟುಂಬ ಸದಸ್ಯರು ಥಳಿಸಿ ಕೊಂದಿದ್ದಾರೆ ಪೊಲೀಸರು ಬುಧವಾರ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಪ್ರಕರಣದಲ್ಲಿ ಗ್ರಾಮದ ಸರಪಂಚ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಮಧ್ಯಪ್ರದೇಶ
ರಾಜ್ಯದ ಸುಭಾಷ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದರ್‌ಗಢ ಗ್ರಾಮದಲ್ಲಿ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಾದಿತ ಬೋರ್‌ವೆಲ್ ಕುರಿತು ಜಗಳ ನಡೆದ ನಂತರ ಗ್ರಾಮದ ಸರಪಂಚ್ ಪದಮ್ ಸಿಂಗ್ ಧಕಡ್ ಮತ್ತು ಅವರ ಕೆಲವು ಕುಟುಂಬ ಸದಸ್ಯರು ನಾರದ್ ಜಾತವ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆಗೀಡಾದ ನಾರದ್ ಅವರು ಗ್ವಾಲಿಯರ್ ಜಿಲ್ಲೆಯ ನಿವಾಸಿಯಾಗಿದ್ದು, ಅವರು ಇಂದರ್‌ಗಢದಲ್ಲಿರುವ ಅವರ ತಾಯಿಯ ಚಿಕ್ಕಪ್ಪ ವಿದ್ಯಾ ಜಾತವ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಮಧ್ಯಪ್ರದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಕರಣದಲ್ಲಿ ಪ್ರಧಾನ ಆರೋಪಿ ಪದಮ್ ಸಿಂಗ್ ಧಕಡ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ ಎಂದು ಶಿವಪುರಿ ಪೊಲೀಸ್ ಅಧೀಕ್ಷಕ ಅಮನ್ ಸಿಂಗ್ ರಾಥೋಡ್ ದಿ ಹಿಂದೂಗೆ ತಿಳಿಸಿದ್ದಾರೆ. “ತಲೆಮರೆಸಿಕೊಂಡಿರುವ ನಾಲ್ವರು ವ್ಯಕ್ತಿಗಳಿಗೆ ಬಹುಮಾನಗಳನ್ನು ಘೋಷಿಸಿದ್ದೇವೆ ಮತ್ತು ತಂಡಗಳು ಅವರನ್ನು ಹುಡುಕುತ್ತಿವೆ” ಎಂದು ಅವರು ಹೇಳಿದ್ದಾರೆ. ಒಟ್ಟು ಎಂಟು ಜನರ ವಿರುದ್ಧ ಕೊಲೆ ಆರೋಪ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ರಾಥೋಡ್ ಅವರು ಜಾತವ್ ಮತ್ತು ಧಾಕಡ್ ಕುಟುಂಬಗಳ ನಡುವೆ ನೀರಿನ ಮೂಲದ ಬಗ್ಗೆ ವಿವಾದ ನಡೆಯುತ್ತಿತ್ತು. ಬೋರ್‌ವೆಲ್‌ಗೆ ಹಣ ಕೂಡ ಹಾಕಿದ್ದರು ಎಂದು ಸಂತ್ರಸ್ತ ನಾರದ್ ಜಾತವ್ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. “ನೀರನ್ನು ಹೊಲಗಳಿಗೆ ಬಳಸಲು ಎರಡು ಕಡೆಯವರು ಮೌಖಿಕ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಮಂಗಳವಾರ ನಡೆದ ವಾಗ್ವಾದವು ಹಿಂಸಾಚಾರಕ್ಕೆ ಕಾರಣವಾಯಿತು” ಎಂದು ಎಸ್ಪಿ ಹೇಳಿದ್ದಾರೆ.
ಘಟನೆಯ ವೀಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ದಷ್ಕರ್ಮಿಗಳ ಗುಂಪು ನಾರದ್ ಜಾತವ್ ಅವರನ್ನು ದೊಣ್ಣೆಗಳು ಮತ್ತು ಲಾಠಿಗಳಿಂದ ಥಳಿಸುತ್ತಿರುವುದು ದಾಖಲಾಗಿದೆ. ಘಟನೆಯ ನಂತರ ಸಂತ್ರಸ್ತ ನಾರದ್ ಅವರನ್ನು ಶಿವಪುರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ನಾರದ್ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ನಡೆಸಲಾಯಿತು. ಶವಸಂಸ್ಕಾರದ ನಂತರ ಮಾತನಾಡಿದ ಮೃತನ ತಂದೆ ವಿಷ್ಣು ಜಾತವ್, ತನ್ನ ಮಗನನ್ನು ಆರೋಪಿಗಳು ಅಮಾನುಷವಾಗಿ ಥಳಿಸಿದ್ದಾರೆ ಎಂದು ಹೇಳಿದ್ದಾರೆ. “ಅವನು ಕೊಲ್ಲಲ್ಪಟ್ಟ ನಂತರ ನಾನು ಇಲ್ಲಿಗೆ ಬಂದೆ. ಅವನು ತನ್ನ ಚಿಕ್ಕಪ್ಪನನ್ನು ಭೇಟಿ ಮಾಡಲು ಮಾತ್ರ ಹೋಗಿದ್ದನು. ಅವರ ನಡುವಿನ ವಿವಾದ ಏನೆಂದು ನನಗೆ ತಿಳಿದಿಲ್ಲ. ಆದರೆ ಢಾಕಾಡ್ ಕುಟುಂಬಸ್ಥರು ಅವನನ್ನು ಹೊಡೆದು ಕೊಂದರು” ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, ಸ್ಥಳೀಯ ಪೊಲೀಸರು ಆರಂಭದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಷ್ಣು ಆರೋಪಿಸಿದ್ದಾರೆ. “ಘಟನೆಯ ಬಗ್ಗೆ ನನ್ನ ಸಂಬಂಧಿಕರು ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಆದರೆ ಅವರು ಅವರ ಮಾತನ್ನು ಕೇಳಲಿಲ್ಲ. (ನಾಲ್ವರು) ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಈಗ ಹೇಳುತ್ತಿದ್ದಾರೆ ಆದರೆ ಯಾರನ್ನೂ ಬಂಧಿಸಲಾಗಿಲ್ಲ. ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ, ”ಎಂದು ಅವರು ಆರೋಪಿಸಿದ್ದಾರೆ.


