ತಾನು ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳಿದ ದಲಿತ ಮಹಿಳೆಯೊಬ್ಬರನ್ನು ಸರಪಂಚ ಪ್ರತಿನಿಧಿಯೊಬ್ಬರು ಅಮಾನವೀಯವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಛತರ್ಪುರದಲ್ಲಿ ನಡೆದಿದೆ.
ಈ ಘಟನೆ ಇತ್ತೀಚೆಗೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ವ್ಯಕ್ತಿಯ ಹಲ್ಲೆಯಿಂದ ಮಹಿಳೆ ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಆದರೆ ಆತ ಆಕೆಯ ಕೈಗಳನ್ನು ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯಿಂದ ನಿರಂತರವಾಗಿ ಹೊಡೆಯುತ್ತಿದ್ದಾನೆ.
ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಪೃಥ್ವಿಪುರ ಜನಪದ್ ವ್ಯಾಪ್ತಿಯ ಮನೆತ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಶಾಂತಿ ಅಹಿರ್ವರ್ ಎಂಬ ಮಹಿಳೆ ಸರ್ಕಾರಿ ವಸತಿ ಯೋಜನೆಯಡಿ ಮನೆ ಪಡೆಯಲು ಗ್ರಾಮದ ಸರಪಂಚನ ಪತಿ ಮತ್ತು ಪ್ರತಿನಿಧಿ ರಾಜ್‌ಕುಮಾರ್ ಸಾಹು ಅವರಿಗೆ ₹10,000 ನೀಡಿದ್ದಳು. ಆಕೆಗೆ ಮನೆ ಸಿಗದಿದ್ದಾಗ, ತನ್ನ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಳು; ಇದು ಜಗಳಕ್ಕೆ ಕಾರಣವಾಯಿತು. ನಂತರ ಸಾಹು ರಸ್ತೆಯ ಮಧ್ಯದಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದನೆಂದು ಆರೋಪಿಸಲಾಗಿದೆ.
ಸಂತ್ರಸ್ತ ಮಹಿಳೆಯು ಸ್ಥಳೀಯ ಅಧಿಕಾರಿಗಳಿಗೆ ಔಪಚಾರಿಕ ದೂರು ನೀಡಿದ್ದರೂ, ಆರೋಪಿಗಳ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರಪಂಚ ಪ್ರತಿನಿಧಿಯ ಹಿಂಸಾತ್ಮಕ ಮತ್ತು ನಿಂದನೀಯ ವರ್ತನೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅನೇಕ ಜನರು ಬಲವಾಗಿ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶ| ದೇವಸ್ಥಾನದ ಬಳಿ ‘ಆಕಸ್ಮಿಕವಾಗಿ’ ಮೂತ್ರ ವಿಸರ್ಜನೆ; ನೆಲ ನೆಕ್ಕುವಂತೆ ದಲಿತ ವೃದ್ದನಿಗೆ ಹಿಂಸೆ


