ಮಧ್ಯಪ್ರದೇಶದ ಜಬಲ್ಪುರದಲ್ಲಿ ಇಬ್ಬರು ಕ್ಯಾಥೋಲಿಕ್ ಕ್ರಿಶ್ಚಿಯನ್ ಪಾದ್ರಿಗಳ ಮೇಲೆ ಬಿಜೆಪಿ ಪರ ಸಂಘಟನೆಯಾದ ಬಜರಂಗದಳ ಮತ್ತು ವಿಎಚ್‌ಪಿಯ ದುಷ್ಕರ್ಮಿಗಳು ಸೋಮವಾರ ದಾಳಿ ನಡೆಸಿರುವ ಘಟನೆ ನಡೆದಿದೆ. ಪೊಲೀಸರ ಮುಂದೆಯೆ ಈ ಹಲ್ಲೆ ನಡೆದಿದ್ದರೂ, ಪೊಲೀಸರು ಈ ದುಷ್ಕರ್ಮಿಗಳ ವಿರುದ್ಧ ಮೂರು ದಿನಗಳ ಎಫ್‌ಐಆರ್ ದಾಖಲಿಸಿದ್ದಾರೆ. ಅದಾಗ್ಯೂ, ಘಟನೆ ನಡೆದು 5 ದಿನಗಳಾದರೂ ಪ್ರಕರಣದಲ್ಲಿ ಪೊಲೀಸರು ಇಲ್ಲಿವರೆಗೆ ಯಾವುದೆ ದುಷ್ಕರ್ಮಿಗಳ ಬಂಧನ ಮಾಡಿಲ್ಲ ಎಂದು ವರದಿಯಾಗಿದೆ. ಮಧ್ಯಪ್ರದೇಶ
ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಿಂದ ಸುಮಾರು 50 ಕ್ರಿಶ್ಚಿಯನ್ ಯಾತ್ರಿಕರು ಸೋಮವಾರ ಒಂದು ದಿನದ ಚರ್ಚ್ ಭೇಟಿಗಾಗಿ ಜಬಲ್ಪುರ ತಲುಪಿದ್ದರು. ಈ ವೇಳೆ ಬಿಜೆಪಿ ಪರ ಸಂಘಟನೆಗಳ ದುಷ್ಕರ್ಮಿಗಳ ಗುಂಪು ಯಾತ್ರಿಕರ ಮೇಲೆ ಧಾರ್ಮಿಕ ಮತಾಂತರದ ಆರೋಪ ಹೊರಿಸಿ ಅವರು ಪ್ರಯಾಣಿಸುತ್ತಿದ್ದ ಬಸ್ ಅನ್ನು ತಡೆದು ಅವರನ್ನು ರಂಜಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮಧ್ಯಪ್ರದೇಶ
ಈ ವೇಳೆ ಅವರನ್ನು ಪೊಲೀಸ್ ಠಾಣೆಯಲ್ಲಿ ಆರು ಗಂಟೆಗಳ ಕಾಲ ಬಂಧಿಸಲಾಗಿತ್ತ. ಆದಾಗ್ಯೂ, ಜಬಲ್ಪುರ ಡಯೋಸಿಸ್‌ನ ವಿಕಾರ್ ಜನರಲ್ ಫಾದರ್ ಡೇವಿಸ್ ಜಾರ್ಜ್ ಮತ್ತು ಡಯೋಸಿಸ್‌ನ ಪ್ರೊಕ್ಯುರೇಟರ್ ಫಾದರ್ ಜಾರ್ಜ್ ಥಾಮಸ್ ಅವರು ಯಾತ್ರಿಕರಿಗೆ ಸಹಾಯ ಮಾಡಲು ಪೊಲೀಸ್ ಠಾಣೆಗೆ ತಲುಪಿದಾಗ, ಅವರ ಮೇಲೆ ಬಿಜೆಪಿ ಪರ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುವ ವೇಳೆ ದುಷ್ಕರ್ಮಿಗಳ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಡಾ ಕೂಗಿದ್ದಾರೆ.
A Catholic priest, Dr. Fr. Davis George, Vicar General of Jabalpur in India’s Madhya Pradesh, was brutally assaulted along with other priests and lay pilgrims during a Jubilee 2025 pilgrimage. The attack, carried out by extremist groups in the presence of officials, has been… pic.twitter.com/2fNm0nBuiY
— Sachin Jose (@Sachinettiyil) April 1, 2025
ಈ ಪ್ರಕರಣದಲ್ಲಿ ಯಾವುದೇ ಬಂಧನಗಳನ್ನು ನಡೆದಿಲ್ಲವಾದರೂ, ಕೇರಳದ ಇಬ್ಬರು ಸಂಸತ್ ಸದಸ್ಯರಾದ ಕೋಡಿಕುನ್ನಿಲ್ ಸುರೇಶ್ ಮತ್ತು ದೀನ್ ಕುರಿಯಾಕೋಸ್ ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಪೊಲೀಸರು ಏಪ್ರಿಲ್ 3 ರಂದು ಎಫ್‌ಐಆರ್ ದಾಖಲಿಸಿದ್ದರು.
ಪೊಲೀಸರಿಗೆ ಹಲ್ಲೆಯನ್ನು ತಡೆಯಲು, ಎಫ್‌ಐಆರ್ ಅನ್ನು ಬೇಗ ದಾಖಲಿಸಲು ಮತ್ತು ದಾಳಿಕೋರರನ್ನು ಬಂಧಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ನ್ಯೂಸ್ ಲಾಂಡ್ರಿ ಜಬಲ್ಪುರ್ ಪ್ರಶ್ನೆಗೆ ಉತ್ತರಿಸಿರುವ ರಂಜಿ ಪ್ರದೇಶದ ನಗರ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಸಾಹು, “ನಾವು ಮಧ್ಯಪ್ರವೇಶಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಶೀಘ್ರದಲ್ಲೇ ನಾವು ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಿದ್ದೇವೆ” ಎಂದು ಹೇಳಿದ್ದಾರೆ.
ಆಪಾದಿತ ದಾಳಿಯ ಸಮಯದಲ್ಲಿ ಪೊಲೀಸರು ಇದ್ದರು ಆದರೆ ಅವರ ಹಸ್ತಕ್ಷೇಪ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿತ್ತು ಎಂದು ತನಗೆ ತಿಳಿದಿಲ್ಲ ಎಂದು ಫಾದರ್ ಜಾರ್ಜ್ ನ್ಯೂಸ್ ಲಾಂಡ್ರಿಗೆ ತಿಳಿಸಿದ್ದಾರೆ. “ಪೊಲೀಸ್ ಹಸ್ತಕ್ಷೇಪ ಹೆಚ್ಚು ಪರಿಣಾಮಕಾರಿಯಾಗಿರಬೇಕಿತ್ತು. ಇಲ್ಲದಿದ್ದರೆ ಅವರು ನಮ್ಮ ಮೇಲೆ ಹೇಗೆ ಹಲ್ಲೆ ನಡೆಸಲು ಸಾಧ್ಯ” ಎಂದು ಫಾದರ್ ಜಾರ್ಜ್ ಹೇಳಿದ್ದಾರೆ.
മധ്യപ്രദേശിലെ ജബൽപൂരിൽ ഹിന്ദുത്വ തീവ്രവാദികൾ കത്തോലിക്കാ പുരോഹിതർക്കും അൽമായർക്കും നേരെ നടത്തിയ ക്രൂരമായ ആക്രമണം ഇന്ന് ലോക്സഭയിൽ ഉന്നയിച്ചു.#Jabalpur #MadhyaPradesh #CatholicPriests #ReligiousFreedom #HindutvaViolence #LokSabha #AttackOnMinorities #India pic.twitter.com/WoT34Wf0Yb
— Kodikunnil Suresh (@kodikunnilMP) April 3, 2025
ಬಿಜೆಪಿ ಪರ ದುಷ್ಕರ್ಮಿಗಳ ಸಂಘಟನೆಯಾದ ವಿಎಚ್‌ಪಿಯ ನಾಯಕ ಘಟನೆಯನ್ನು ಸಮರ್ಥಿಸಿಕೊಂಡಿದ್ದು, ಧಾರ್ಮಿಕ ಮತಾಂತರಕ್ಕಾಗಿ ಬುಡಕಟ್ಟು ಜನರನ್ನು ಜಬಲ್ಪುರಕ್ಕೆ ಕರೆತರಲಾಗುತ್ತಿದೆ ಎಂಬ ಮಾಹಿತಿ ತಮಗೆ ಬಂದಿದೆ ಎಂದು ಹೇಳಿದ್ದಾರೆ. “ಬುಡಕಟ್ಟು ಜನರನ್ನು ಬೆದರಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವಂತೆ ಪ್ರಚೋದಿಸಲಾಯಿತು. ಇದರ ನಂತರ, ವಿಎಚ್‌ಪಿ ಮತ್ತು ಬಜರಂಗದಳ ಸದಸ್ಯರು ಮಧ್ಯಪ್ರವೇಶಿಸಿ ಯಾತ್ರಿಕರನ್ನು ಪೊಲೀಸ್ ಠಾಣೆಗೆ ಕರೆತಂದರು” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಯಾತ್ರಿಕರು ಈ ಹೇಳಿಕೆಯನ್ನು ನಿರಾಕರಿಸಿದ್ದು, ದುಷ್ಕರ್ಮಿಗಳು ಯಾವುದೇ ಕಾರಣವಿಲ್ಲದೆ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ. “ಯಾತ್ರಿಕರ ಭೇಟಿಯ ಸಮಯದಲ್ಲಿ ಯಾವುದೇ ಮತಾಂತರ ನಡೆಯುತ್ತಿರಲಿಲ್ಲ. ನನ್ನ ಪೋಷಕರು ಕ್ರಿಶ್ಚಿಯನ್ನರು, ಮತ್ತು ನಾನು ಹುಟ್ಟಿನಿಂದಲೇ ಕ್ರಿಶ್ಚಿಯನ್ ಆಗಿದ್ದೇನೆ. ಧಾರ್ಮಿಕ ಪ್ರವಾಸದ ಭಾಗವಾಗಿ ನಾವು ಜಬಲ್ಪುರದ ಚರ್ಚ್‌ಗಳಿಗೆ ಭೇಟಿ ನೀಡಲು ಬಂದಿದ್ದೇವೆ. ಆದರೆ ಈ ದುಷ್ಕರ್ಮಿಗಳು ಕಥೆಗಳನ್ನು ಹೆಣೆದು, ನಮ್ಮನ್ನು ಮತಾಂತರಕ್ಕಾಗಿ ಇಲ್ಲಿಗೆ ಕರೆತರಲಾಗಿದೆ ಎಂದು ಹೇಳಿದ್ದಾರೆ. ಅವರು ಪೊಲೀಸರ ಸಹಾಯದಿಂದ ನಮ್ಮನ್ನು ತಡೆದು ರಂಝಿ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ನಮ್ಮನ್ನು ಗಂಟೆಗಟ್ಟಲೆ ಬಂಧಿಸಲಾಯಿತು.” ಎಂದು ಯಾತ್ರಿಕರೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ಯಾತ್ರಿಕರು ಮಾತನಾಡಿ, “ನನ್ನ ಕುಟುಂಬವು ಮೂರು ತಲೆಮಾರುಗಳಿಂದ ಕ್ರಿಶ್ಚಿಯನ್ ಆಗಿದೆ. ನಾನು ಹುಟ್ಟಿನಿಂದ ಕ್ರಿಶ್ಚಿಯನ್. ಪರಿಸ್ಥಿತಿ ಹೀಗಿರುವಾಗ ನನ್ನನ್ನು ಮತ್ತೆ ಹೇಗೆ ಮತಾಂತರಿಸಲು ಸಾಧ್ಯ? ನಮ್ಮಲ್ಲಿ ಸುಮಾರು 50 ಜನರು ಮಾಂಡ್ಲಾದಿಂದ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಲು ಬಂದಿದ್ದೇವೆ. ಪೊಲೀಸರು ನಮ್ಮ ಹೆಸರುಗಳನ್ನು ಬರೆದುಕೊಂಡು ಜಬಲ್‌ಪುರಕ್ಕೆ ಏಕೆ ಬಂದಿದ್ದೇವೆ ಎಂದು ಕೇಳಿದ್ದಾರೆ. ಇದು ಕಿರುಕುಳ ಅಲ್ಲದೆ ಇನ್ನೇನೂ ಅಲ್ಲ” ಎಂದು ಹೇಳಿದ್ದಾರೆ. ಮಧ್ಯಪ್ರದೇಶ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ: ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ವಿರುದ್ಧ ಎಫ್‌ಐಆರ್
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ: ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ವಿರುದ್ಧ ಎಫ್‌ಐಆರ್

