ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಎಸ್‌ಯುವಿ ಮತ್ತು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿ, 14 ಜನರು ಗಾಯಗೊಂಡಿದ್ದಾರೆ. ಸಿಧಿ-ಬಹ್ರಿ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಸೋಮವಾರ ಬೆಳಗಿನ ಜಾವ 2.30 ಕ್ಕೆ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಧ್ಯಪ್ರದೇಶದ ಮೈಹಾರ್‌ಗೆ ಪ್ರಯಾಣಿಸುತ್ತಿದ್ದ ಕುಟುಂಬವನ್ನು ಹೊತ್ತ ಟ್ಯಾಕ್ಸಿಯಾಗಿದ್ದ ಎಸ್‌ಯುವಿ, ಸಿಧಿಯಿಂದ ಬಹ್ರಿ ಕಡೆಗೆ ಹೋಗುತ್ತಿದ್ದ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಗಾಯತ್ರಿ ತಿವಾರಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲ ಏಳು ಜನರು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು. 14 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಂಬತ್ತು ಜನರನ್ನು ಚಿಕಿತ್ಸೆಗಾಗಿ ನೆರೆಯ ರೇವಾಕ್ಕೆ ಕಳುಹಿಸಲಾಗಿದೆ. ಉಳಿದವರನ್ನು ಸಿಧಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ಸೇರಿಸಲಾಗಿದೆ.
9 ರಾಜ್ಯಗಳಲ್ಲಿ ಹಬ್ಬಿದ ಹಕ್ಕಿ ಜ್ವರ; ಕೋಳಿ ಸಾಕಣೆ ಕೇಂದ್ರಗಳ ಪರಿಶೀಲನೆಗೆ ಕೇಂದ್ರದ ಆದೇಶ


