2018-2021ರ ನಡುವೆ ಮಧ್ಯಪ್ರದೇಶದಲ್ಲಿ ಟೇಕ್ ಹೋಮ್ ರೇಷನ್ (ಟಿಎಚ್‌ಆರ್) ಯೋಜನೆಯಲ್ಲಿ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಸುಮಾರು 428 ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳನ್ನು ಪತ್ತೆಹಚ್ಚಿದೆ ಎಂದು ವರದಿ ಹೇಳಿದೆ. ಯೋಜನೆಯಲ್ಲಿ ಅಕ್ರಮಗಳು ಪತ್ತೆಯಾಗಿರುವ ಅವಧಿಯಲ್ಲಿ ರಾಜ್ಯದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಆಡಳಿತ ನಡೆಸಿತ್ತು ಎಂದು ವರದಿ ಉಲ್ಲೇಖಿಸಿದೆ. ಮಧ್ಯಪ್ರದೇಶ
ಟಿಎಚ್‌ಆರ್ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದ ಘಟಕಗಳಲ್ಲಿ ಒಂದಾಗಿದ್ದು, ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಭಾಗವಾಗಿದೆ. ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಮತ್ತು 11 ಮತ್ತು 14 ವರ್ಷದೊಳಗಿನ ಶಾಲೆಯಿಂದ ಹೊರಗಿರುವ ಹದಿಹರೆಯದ ಹುಡುಗಿಯರ (OOSAG ಗಳು) ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುವುದು ಯೋಜನೆಯ ಮುಖ್ಯ ಗುರಿಯಾಗಿದೆ.ಮಧ್ಯಪ್ರದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಫಲಾನುಭವಿಗಳ ಗುರುತಿಸುವಿಕೆ, ಉತ್ಪಾದನೆ, ಸಾಗಣೆ, ವಿತರಣೆ ಮತ್ತು ಟಿಎಚ್‌ಆರ್‌ನ ಗುಣಮಟ್ಟ ನಿಯಂತ್ರಣದಲ್ಲಿ ಗಂಭೀರ ಅಕ್ರಮಗಳನ್ನು ಆಡಿಟ್ ವರದಿಗಳು ಸ್ಪಷ್ಟವಾಗಿ ಸೂಚಿಸುತ್ತವೆ… ಆದ್ದರಿಂದ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಡಿಟ್ ಜನರಲ್ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಮಾರ್ಚ್ 31, 2021 ರಂದು ವಿಧಾನಸಭೆಯಲ್ಲಿ ಮಂಡಿಸಲಾದ ವರ್ಷದ ವರದಿಯು ಹೇಳಿದೆ.
ಈ ಬಗ್ಗೆ ಎರಡು ವರ್ಷಗಳ ಹಿಂದೆಯೆ ಆರೋಪ ಬಂದಿದ್ದರೂ, ಮಧ್ಯಪ್ರದೇಶ ಸರ್ಕಾರ ಅದನ್ನು ತಳ್ಳಿಹಾಕಿತ್ತು. ಆದರೆ ಎರಡು ವರ್ಷಗಳ ನಂತರ ಸಿಎಜಿ ಇದನ್ನು ದೃಢಪಡಿಸಿದೆ. ನಕಲಿ ಫಲಾನುಭವಿಗಳು, ಮೋಸದ ಸಾರಿಗೆ ಪ್ರತಿಪಾದನೆ ಮತ್ತು ಭ್ರಷ್ಟಾಚಾರ ಯೋಜನೆಯ ಪ್ರತಿಯೊಂದು ಹಂತಕ್ಕೂ ನುಗ್ಗಿದೆ ಎಂದು ವರದಿ ಹೇಳಿದೆ.
ಪಡಿತರಕ್ಕೆ ಅರ್ಹರಾಗಿರುವ ಹದಿಹರೆಯದ ಹೆಣ್ಣುಮಕ್ಕಳ ಸಂಖ್ಯೆಯನ್ನು 9,000 ಆಗಿದ್ದು, ಆದರೆ ಇದನ್ನು 36 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ₹ 110 ಕೋಟಿ ನಷ್ಟವಾಗಿದೆ. ಜೊತೆಗೆ, ಪೌಷ್ಟಿಕಾಂಶ ಪಡಿತರ ಸಾಗಿಸಿದ್ದು ಟ್ರಕ್‌ಗಳು, ಮೋಟಾರ್‌ಸೈಕಲ್‌ಗಳು, ಆಟೊಗಳು ಮತ್ತು ಟ್ಯಾಂಕರ್‌ಗಳಾಗಿವೆ. ಆದರೆ ಸಿಎಜಿ ವರದಿಯು ಇದರಲ್ಲಿ ಅಕ್ರಮಗಳನ್ನು ಎತ್ತಿತೋರಿಸಿದ್ದು, 400 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಸಾಗಿಸಲಾಗಿಲ್ಲ ಎಂದು ವರದಿ ತಿಳಿಸಿದೆ. 96,000 ಮೆಟ್ರಿಕ್ ಟನ್‌ಗೂ ಹೆಚ್ಚು ಪಡಿತರ ದಾಸ್ತಾನು ಇದ್ದರೂ, 86,000 ಮೆಟ್ರಿಕ್ ಟನ್ ಮಾತ್ರ ಅಂಗನವಾಡಿ ಕೇಂದ್ರಗಳಿಗೆ ತಲುಪಿದ್ದು, 10,000 ಮೆಟ್ರಿಕ್ ಟನ್ ಆಹಾರ ಪತ್ತೆಯಾಗಿಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಚಿಕ್ಕಮಗಳೂರು | ದೇವಾಲಯ ಪ್ರವೇಶಿಸಿದ ದಲಿತರಿಗೆ 2.50 ಲಕ್ಷ ರೂ. ದಂಡ ವಿಧಿಸಿದ ಸವರ್ಣೀಯರು!
ಚಿಕ್ಕಮಗಳೂರು | ದೇವಾಲಯ ಪ್ರವೇಶಿಸಿದ ದಲಿತರಿಗೆ 2.50 ಲಕ್ಷ ರೂ. ದಂಡ ವಿಧಿಸಿದ ಸವರ್ಣೀಯರು!


