ಮಧ್ಯಪ್ರದೇಶದಲ್ಲಿ ಲೈಂಗಿಕ ಹಗರಣ ಆರೋಪಿಯೊಬ್ಬರ ಒಡೆತನದ ಕಾರ್ಖಾನೆಯು 2018ರಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದೆ ಎಂದು ಆರೋಪಿಸಿ ವಕೀಲ ಮನೋಹರ್ ದಲಾಲ್, ಮಧ್ಯಪ್ರದೇಶ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದಾರೆ.
ವಕೀಲ ಮನೋಹರ್, ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಮಧ್ಯಪ್ರದೇಶದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ. ಅಲ್ಲದೇ ಪ್ರಕರಣ ಕುರಿತ ಕೆಲ ದಾಖಲೆಗಳ ಪ್ರತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಎನ್ ಪಿಸಿಐ ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಉನ್ನತ ಮಟ್ಟದ ಉದ್ಯಮ. ಆರೋಪಿಯ ಕಾರ್ಖಾನೆಗೆ 10 ಲಕ್ಷ ರೂ. ಕಾಂಟ್ರ್ಯಾಕ್ಟ್ ನೀಡಲಾಗಿದ್ದು, ಕಾರ್ಖಾನೆ ಭೋಪಾಲ್ ನಲ್ಲಿದೆ. ಉತ್ತರ ಪ್ರದೇಶದ ನರೋರಾ ಪರಮಾಣು ವಿದ್ಯುತ್ ಕೇಂದ್ರಕ್ಕೆ ಫೋಮ್ ಟೇಪ್ ಮತ್ತು ಅಡೆಸಿವ್ ಟೇಪ್ ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದಾರೆ.
ಭೋಪಾಲ್ ಮೂಲದ ಕಾರ್ಖಾನೆ ಮಾಲೀಕ, ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಎಲೆಕ್ಟ್ರಿಕಲ್ ಮತ್ತು ಥರ್ಮಲ್ ಇನ್ ಸುಲೇಶನ್ ಉತ್ಪನ್ನಗಳನ್ನು ಇತ್ತೀಚೆಗೆ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಳಕೆ ಮಾಡಿದ್ದಾರೆ. ಪ್ರಭಾವಿ ವ್ಯಕ್ತಿಗಳನ್ನು ಆಕರ್ಷಿಸಲು ಮತ್ತು ಕಾಂಟ್ರ್ಯಾಕ್ಟ್ ಲಿಂಕ್ ಪಡೆದುಕೊಳ್ಳುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾಳೆ ಎಂದು ಮನೋಹರ್ ಹೇಳಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದಲ್ಲಿ ಈಗಾಗಲೇ ಐದು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ. ಲೈಂಗಿಕ ಸ್ಕ್ಯಾಂಡಲ್ ನಲ್ಲಿ ತೊಡಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಗಳು ಮತ್ತು ಇತರರು ಭಾಗಿಯಾಗಿರುವ ಸಾವಿರ ವಿಡಿಯೋ ಕ್ಲಿಪ್ ಗಳು ದೊರೆತಿವೆ . ಐವರು ಮಹಿಳೆಯರು ಹನಿಟ್ರ್ಯಾಪ್ ಮೂಲಕ ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಬಲೆ ಹಾಕಿ, ಹಣ ಪೀಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 39 ವರ್ಷದ ಬಿಜೆಪಿ ಎಂಎಲ್ ಎ ಬ್ರಿಜೇಂದ್ರ ಪ್ರತಾಪ್ ಸಿಂಗ್, ಪ್ರಕರಣದ ಮಾಸ್ಟರ್ ಮೈಂಡ್. ಪ್ರತಿ ಆರೋಪಿ ಮಹಿಳೆ ಸೆಕ್ಸ್ ವರ್ಕರ್ಸ್ ಗ್ಯಾಂಗ್ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.


