ಕೊರೊನಾ ವೈರಸ್ ಹೊಡೆತಕ್ಕೆ ಒಳಗಾದ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು ಒಂದು ತಿಂಗಳ ಸಂಬಳವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ಏಕಾಏಕಿ ಉಂಟಾದ ಸ್ಥಗಿತದಿಂದಾಗಿ ತಮ್ಮ ಗಳಿಕೆಯನ್ನು ಕಳೆದುಕೊಂಡಿರಬಹುದಾದವರಿಗೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯ ಮಾಡಲು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು ತಮ್ಮ ಒಂದು ತಿಂಗಳ ಸಂಬಳವನ್ನು ನಿರ್ಧರಿಸಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
“COVID-19 ಕಾರಣದಿಂದಾಗಿ ಗಳಿಕೆಯನ್ನು ಕಳೆದುಕೊಂಡಿರುವ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು ತಮ್ಮ ಒಂದು ತಿಂಗಳ ವೇತನವಾದ ರೂ 2.25 ಲಕ್ಷ ರೂಗಳನ್ನು ನೀಡಲಿದ್ದಾರೆ. ಅವರು ಇಂದು ಚೆಕ್ ಅನ್ನು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಸ್ತಾಂತರಿಸುತ್ತಾರೆ ಎಂದು ಮೊಹಮ್ಮದ್ ಇಮ್ರಾನುಲ್ಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ, ನ್ಯಾಯಮೂರ್ತಿಗಳಾದ ಎನ್. ಕಿರುಬಕಾರನ್ ಮತ್ತು ಆರ್ ಹೇಮಲತಾ ಅವರ ನ್ಯಾಯಪೀಠವು ಮತ್ತಷ್ಟು ವೈರಸ್ ಹರಡುವಿಕೆಯಿಂದ ರಕ್ಷಿಸಲು ನಿರ್ಬಂಧಗಳನ್ನು ಜಾರಿಗೊಳಿಸುವುದರಿಂದ ಜನರಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ ಎಂದು ಕಾಳಜಿ ವ್ಯಕ್ತಪಡಿಸಿದೆ.
ನಾಳೆ ನಡೆಯಲಿರುವ 14 ಗಂಟೆಗಳ “ಜನತಾ ಕರ್ಫ್ಯೂ” ಸಮಯದಲ್ಲಿ ಬಡ ಕಾರ್ಮಿಕರು ಮತ್ತು ಆಶ್ರಯವಿಲ್ಲದ ಜನರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುವಂತೆ ಸರ್ಕಾರವು ಖಚಿತಪಡಿಸಿಕೊಳ್ಳಬೇಕೆಂದು ಶುಕ್ರವಾರ ನ್ಯಾಯಪೀಠ ನಿರ್ದೇಶಿಸಿದೆ.


