Homeಕರ್ನಾಟಕಹಲವಾರು ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧವೇ 'ಮಹಾಡ್ ಸತ್ಯಾಗ್ರಹ': ಬರಗೂರು ರಾಮಚಂದ್ರಪ್ಪ

ಹಲವಾರು ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧವೇ ‘ಮಹಾಡ್ ಸತ್ಯಾಗ್ರಹ’: ಬರಗೂರು ರಾಮಚಂದ್ರಪ್ಪ

- Advertisement -
- Advertisement -

“ಮಹಾಡ್ ಕೆರೆಯ ನೀರನ್ನ ಮುಟ್ಟಿದ್ದಕ್ಕಾಗಿ ಪ್ರತಿವರ್ಷ ಮಾರ್ಚ್‌ 20 ಅನ್ನು ‘ಸಾಮಾಜಿಕ ಸಬಲೀಕರಣ ದಿನ’ವನ್ನಾಗಿ ಆಚರಣೆ ಮಾಡಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಮಹಾಡ್ ಸತ್ಯಾಗ್ರಹ ಕೇವಲ ನೀರನ್ನ ಮುಟ್ಟಿದ್ದಕ್ಕಲ್ಲ, ಹಲವು ರೂಪದ ಅಸ್ಪ್ರಶ್ಯ ಆಚರಣೆಗಳಿಗೆ ಒಡ್ಡಿದ್ದ ಪ್ರತಿರೋಧವಾಗಿದೆ” ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

“ಭಾರತದಲ್ಲಿ ನಡೆದ ಅಸ್ಪ್ರಶ್ಯರ ಪರವಾದ ಮೊಟ್ಟ ಮೊದಲ ಚಳವಳಿ ಅಂದರೆ ಅದು ಮಹಾಡ್ ಸತ್ಯಾಗ್ರಹ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿರುವ ಮಹಾಡ್‌ನಲ್ಲಿ 1927 ಮಾರ್ಚ್‌ 20ರಂದು ಸಾರ್ವಜನಿಕವಾಗಿ ಕೆರೆ ನೀರನ್ನ ಮುಟ್ಟಿ ಕುಡಿಯುವುದರ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದನ್ನ ಅಂಬೇಡ್ಕರ್ ಅವರು ಹೇಳಿದ್ದರು. ಮಾನವ ಹಕ್ಕುಗಳನ್ನ ಎತ್ತಿ ಹಿಡಿಯುವ ಈ ಮೂಲಕ ಅಂಬೇಡ್ಕರ್ ಅವರು ಬೌದ್ಧಿಕ ಬದ್ಧತೆಯನ್ನ ತೋರಿಸಿದ್ದರು” ಎಂದು ಬಣ್ಣಿಸಿದರು.

ಭಾರತದ ಅಸ್ಪ್ರಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗುರುವಾರ ಆಯೋಜಿಸಿದ್ದ ‘ಶೋಷಿತರ ಸಂಘರ್ಷ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಭಾಷಣ ಆರಂಭಕ್ಕೂ ಮುನ್ನ ಸಣ್ಣ ಕತೆಯೊಂದನ್ನು ಹೇಳಿದ ಅವರು, “ಒಂದು ಊರಿನಲ್ಲಿ ಒಬ್ಬ ಗುರು ಶಿಷ್ಯರಿಗೆ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ವಿರುದ್ಧ ಭೋಧನೆ ಮಾಡುತ್ತಾರೆ. ಅಸ್ಪಶ್ಯತೆ ಮಾಡಬಾರದು; ಅಸ್ಪ್ರಶ್ಯರನ್ನ ಕೀಳಾಗಿ ಕಾಣುವುದು ತಪ್ಪು ಎಂದೆಲ್ಲಾ ಭಾಷಣ ಮಾಡಿ ಮುಂದಿನ ಊರಿಗೆ ತೆರಳುತ್ತಾರೆ. ಇನ್ನೊಂದು ಊರಿಗೆ ಹೋಗುವಾಗ ಅಲ್ಲಿನ ಬಾವಿಯಲ್ಲಿ ಕೈಕಾಲು ತೊಳೆದು ನೀರು ಕುಡಿಯುತ್ತಾರೆ. ನೀರು ಕುಡಿದ ಮೇಲೆ ಬರುವಾಗ ಯಾರೋ ಒಬ್ಬರು, ಇದು ಅಸ್ಪೃಶ್ಯರ ಬಾವಿ ಎಂದು ಹೇಳುತ್ತಾರೆ. ಆ ಬಳಿಕ ಗುರುವಿಗೆ ತಳಮಳ ಶುರುವಾಗಿ ಎಂತಹ ಪಾಪ ತಟ್ಟಿತ್ತು ನನಗೆ ಎಂದು ಹೇಳಿ ಒಬ್ಬ ಬುದ್ಧಿವಂತನ ಹತ್ತಿರ ಹೋಗಿ ಹೀಗೆ ಮಾಡಿದೆ, ಈ ಪಾಪ ಕಳೆದುಕೊಳ್ಳುವುದಕ್ಕೆ ಏನು ಮಾಡಲಿ ಹೇಳಿ ಎಂದು ಕೇಳುತ್ತಾನೆ. ಆ ಬುದ್ಧಿವಂತ ಬಾವಿ ನೀರು ಕುಡಿಯುವ ಸಂದರ್ಭದಲ್ಲಿ ಏನೇನೂ ಮಾಡಿದೆ ಕ್ರಮವಾಗಿ ಹೇಳು ಎಂದಾಗ; ಮೊದಲಿಗೆ ಬಾವಿ ಮೆಟ್ಟಿಲು ಇಳಿದು ಹೋಗಿ ಕೈಕಾಲು ತೊಳೆದು ಆಮೇಲೆ ನೀರು ಕುಡಿದೆ ಎಂದು ಗುರು ಹೇಳುತ್ತಾನೆ. ಆ ಬಳಿಕ ಬುದ್ದಿವಂತ, ನಿನಗೇನು ಆಗಲ್ಲ; ಏಕೆಂದರೆ, ಮೊದಲಿಗೆ ನೀನು ಕೈ-ಕಾಲು ತೊಳೆದಿದ್ದೀಯ. ನಿನ್ನ ಪಾದ ಸ್ಪರ್ಶದಿಂದ ಆ ಬಾವಿಯ ನೀರು ಪವಿತ್ರವಾಯಿತು. ಹಾಗಾಗಿ, ನಿನಗೆ ಏನು ಆಗಲ್ಲ ಎಂದು ಹೇಳಿದ್ನಂತೆ. ಇದು ಕಲ್ಪಿತ ಪ್ರಸಂಗ, ಆದರೂ ಇದರೊಳಗಡೆ ವಾಸ್ತವ ಇದೆ. ಅಂದರೆ, ಗುರು ಪತನಗೊಂಡ ಪ್ರಾಮಾಣಿಕತೆಯ ಸಂಕೇತ. ಈ ಬುದ್ಧಿವಂತ ಭ್ರಷ್ಟಗೊಂಡ ಬೌದ್ಧಿಕತೆಯ ಸಂಕೇತ. ಇವು ಯಾವತ್ತಿಗೂ ಕೂಡ ಒಂದೇ. ಇವು ದೇಶವನ್ನ ಉದ್ಧಾರ ಮಾಡುವುದಿಲ್ಲ. ದೊಡ್ಡ ದೊಡ್ಡ ಹೆಸರು ಇಟ್ಟುಕೊಂಡಿರುವವರಿಗೆ ಪ್ರಾಮಾಣಿಕತೆ ಇರೋದಿಲ್ಲ. ಆ ಗುರು ಪ್ರಾಮಾಣಿಕನಾಗಿದ್ದರೇ ಅಸ್ಪ್ರಶ್ಯರ ಬಾವಿ ನೀರು ಕುಡಿದೆ ಎಂದು ಸಂಭ್ರಮಿಸಬೇಕಿತ್ತು. ಇನ್ನು ಆತ ನಿಜವಾದ ಬುದ್ಧಿವಂತನೇ ಆಗಿದ್ದರೇ, ಆ ಗುರುವನ್ನ ಬೈದು ಕಳಿಸಬೇಕಿತ್ತು” ಎಂದು ವಿವರಿಸಿದರು.

“ಇಂದು ನಾವು ಸಹ ಪತನಗೊಂಡಿರುವ ಪ್ರಾಮಾಣಿಕತೆಯ, ಭ್ರಷ್ಟಗೊಂಡಿರುವ ಬೌದ್ಧಿಕ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನೈತಿಕ ಶಕ್ತಿ, ಸಂಘಟನಾ ಶಕ್ತಿ, ವಿಚಾರ ಶಕ್ತಿ ಸೇರಿ ಒಂದು ಬೌದ್ದಿಕ ಬದ್ದತೆ ಬೇಕು. ಇವತ್ತು ಸಹ ಅಸ್ಪಶ್ಯರಿಗೆ ಹಿಂಸೆ ನೀಡುವ ಘಟನೆ ನಡೆಯುತ್ತಿವೆ. ಆಗ ಅಂಬೇಡ್ಕರ್ ಅವರು ಅದಕ್ಕೊಂದು ದೊಡ್ಡ ಪ್ರತಿರೋಧ ಒಡ್ಡಿದ್ದರು. ಅಂಬೇಡ್ಕರ್ ಅವರು ಒಡ್ಡಿದ ಈ ಪ್ರತಿರೋಧದ ಚಳವಳಿಯಲ್ಲಿ ಅನೇಕ ಸವರ್ಣೀಯರು ಭಾಗವಹಿಸುತ್ತಾರೆ. ಸವರ್ಣೀಯರಲ್ಲಿನ ಪ್ರಗತಿಪರರು ಎಲ್ಲರೂ ಭಾಗವಹಿಸಿದ್ದರು. ಕೆರೆಯ ನೀರನ್ನ ಮುಟ್ಟಿದ್ದಕ್ಕಾಗಿ ಪ್ರತಿವರ್ಷ ಮಾರ್ಚ್‌ 20 ಅನ್ನು ಸಾಮಾಜಿಕ ಸಬಲೀಕರಣ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಮಹಾಡ್ ಸತ್ಯಾಗ್ರಹ ಕೇವಲ ನೀರನ್ನ ಮುಟ್ಟಿದ್ದಲ್ಲ, ಹಲವು ರೂಪದ ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧ ಆಗಿದೆ” ಎಂದು ತಿಳಿಸಿದರು.

“ಶೋಷಿತ ಸಮುದಾಯಗಳು ಪಂಚಭೂತ ವಂಚಿತ ಸಮುದಾಯಗಳು ಈ ಸಮುದಾಯಗಳು ಗಾಳಿಯಿಂದ ವಂಚಿತರಾಗುತ್ತಾರೆ. ಭೂಮಿಯಿಂದ ವಂಚಿತರಾಗಿದ್ದಾರೆ. ಆಕಾಶ ಕನಸಿನ ಸಂಕೇತ ಅವರಿಗೆ ಕನಸು ಕಾಣೋದಕ್ಕೆ ಆಗುವುದಿಲ್ಲ. ನೀರು ಮುಟ್ಟೋದಕ್ಕೆ ಬಿಡೋದಿಲ್ಲ. ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ಒಟ್ಟಿನಲ್ಲಿ ಈ ಶೋಷಿತ ಸಮುದಾಯಗಳು ಈ ಪಂಚಭೂತಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಸರಿಯಾದ ನೀರು, ಗಾಳಿ, ಬೆಂಕಿ, ಭೂಮಿ ಇವ್ಯಾವುದನ್ನೂ ಕೊಡಲಿಲ್ಲ ಅಂದರೆ, ಇವು ಪಂಚಭೂತ ವಂಚಿತ ಸಮುದಾಯಗಳು” ಎಂದು ಹೇಳಿದರು.

“1949ರಲ್ಲಿ ಪ್ರಜಾಪ್ರಭುತ್ವವನ್ನ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜಾಪ್ರಭುತ್ವ ಎಂದು ಅಂಬೇಡ್ಕರ್ ವಿವರಿಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಇದ್ದರೆ ಇದು ಸಾಮಾಜಿಕ ಪ್ರಜಾಪ್ರಭುತ್ವ ಆಗುತ್ತದೆ. ಆದರೆ, ಈಗ ದ್ವೇಷದ ರಾಜಕಾರಣ ನಡೆಯುತ್ತದೆ. ಪ್ರಜಾಪ್ರಭುತ್ವ ಸಮಾನತೆ ಸಹೋದರತೆ ಜತೆಗೆ ಎಲ್ಲರೂ ತಾರತಮ್ಯ ಮೀರಿ ಸಮಾಜವನ್ನ ಕಟ್ಟಬೇಕು. ಅರ್ಧಕ್ಕೂ ಹೆಚ್ಚು ಸಂಪತ್ತು ಕೆಲವೇ ಜನರ ಬಳಿ‌ ಇದೆ. ಸ್ವಾತಂತ್ರ್ಯ ಕೊಟ್ಟಿರುವ ಹಕ್ಕಿನಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅನೇಕ ಚಳುವಳಿಗಳ ಕಾರಣಕ್ಕಾಗಿ ಅನೇಕ ಮುನ್ನಡೆಗಳು ನಡೆಯುತ್ತಿವೆ. ಈ ಮುನ್ನಡೆಗಳ ನಡುವೆ ಹಲವು ಸಮಸ್ಯೆಗಳು ಇದೆ. ಇನ್ನೂ ಅಸ್ಪ್ರಶ್ಯತೆ ಇದೆ. ಸಾಮಾಜಿಕ ಪ್ರಜಾಪ್ರಭುತ್ವ ನೆಲೆಯೂರಿದರೆ ಆಗ ಸ್ವಾತಂತ್ರ್ಯ ಸಮಾನತೆ‌ ಬರುತ್ತದೆ” ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಇಂದಿರಾ ಕೃಷ್ಣಪ್ಪ ಮಾತನಾಡಿ, “ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಈ ದಿನಾಚರಣೆಯನ್ನ ನಡೆಸುತ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಮಹಾಡ್ ಸತ್ಯಾಗ್ರಹದ ಅರಿವು ಮೂಡಲಿ ಎಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಏಕಕಾಲದಲ್ಲಿ ಆಚರಣೆ ಮಾಡಲಾಗುತ್ತಿದೆ” ಎಂದರು.

“ಪ್ರಯಾಗರಾಜ್‌ಗೆ ಹೋಗಿ ಕುಂಭಮೇಳದಲ್ಲಿ ಜನರು ಮುಳುಗಿ ಪವಿತ್ರರಾಗಿದ್ದೀವಿ ಎಂದು ಹೇಳಿಕೊಂಡರು. ಅಲ್ಲಿನ ಜೀವಜಲವನ್ನ ಕೊಳಕು ಮಾಡಿದ್ದಾರೆ; ಇದು ಸಾಮಾನ್ಯ ಜ್ಞಾನ ಎಲ್ಲರಿಗೂ ಗೊತ್ತಾಗುವ ವಿಚಾರ. ನೀರನ್ನು ಹಾಳು ಮಾಡಿ, ಮಲಿನ ಮಾಡಿದ್ದಾರೆ. ಸರ್ಕಾರ ಆ ಪ್ರದೇಶ, ನೀರನ್ನ ಸ್ವಚ್ಛ ಮಾಡಲು ನಮ್ಮ ತೆರಿಗೆ ಹಣದಲ್ಲಿ ನೂರಾರು ಕೋಟಿ ಹಣ ಖರ್ಚು ಮಾಡಿದೆ. ಎಷ್ಟು ಹಣ ವೆಚ್ಚ ಆಗಿದೆ ಎಂದು ಯಾರಾದರೂ ಯೋಚನೆ ಮಾಡಿದ್ದೀರಾ? ಅಂಬೇಡ್ಕರ್ ಮಾಡಿದ್ದ ಸತ್ಯಾಗ್ರಹಕ್ಕೂ ಈಗ ಸರ್ಕಾರವೇ ಏರ್ಪಡಿಸುವ ಇಂತಹ ಕಾರ್ಯಕ್ರಮಗಳಿಗೂ ಎಲ್ಲಿಯ ಸಾಮ್ಯತೆ? ಮೌಢ್ಯದ ವಿರೋಧದ ಬಗ್ಗೆ ಮಾತನಾಡಬೇಕಾದ ಕರ್ನಾಟಕ ಸರ್ಕಾರ ಇಲ್ಲಿಯೂ ಕೂಡ ಹಾಗೆಯೇ ಮಾಡಿತ್ತು. ಈ ಬಗ್ಗೆ ಎಲ್ಲರೂ ಪ್ರಶ್ನೆಗಳನ್ನ ಎತ್ತಿ ಹಿಡಿಯಬೇಕು” ಎಂದು ಹೇಳಿದರು.

“ಈ ಚಳವಳಿ ನಡೆದು ಇಂದಿಗೆ 98 ವರ್ಷಗಳು ಕಳೆದರು ಕೂಡ ನೀರಿನ ವಿಷಯದಲ್ಲಿ, ಬಟ್ಟೆಯ ವಿಷಯದಲ್ಲಿ, ದಲಿತರ ಅಭಿರುಚಿಯ ವಿಷಯದಲ್ಲಿ ದಿನನಿತ್ಯ ಕೊಲೆ, ಸುಲಿಗೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚಿಗೆ ರಾಜಸ್ತಾನದ ಶಾಲೆಯೊಂದರಲ್ಲಿ ಏಳನೇ ತರಗತಿಯ ಬಾಲಕನೊಬ್ಬ ನೀರು ಕುಡಿದನೆಂದು ಹೊಡೆದು ಸಾಯಿಸಿದರು. ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಸಾರ್ವಜನಿಕ ಬಾವಿಯೊಂದರ ನೀರನ್ನು ಮುಟ್ಟಿದ ಕಾರಣಕ್ಕೆ ಕೊಲೆಮಾಡಲಾಯಿತು. ಹೀಗೆ, ಪ್ರತಿದಿನ ಸವರ್ಣಿಯರು ತಮ್ಮ ಬಾವಿಯಲ್ಲಿ ನೀರು ಸೇದಿದರು ಎಂದು. ಕೆರೆಯ ನೀರನ್ನು ಬಳಸಿದರು ಎಂದು ನಿರಂತರವಾಗಿ ಹಲ್ಲೆಗಳನ್ನು ದೇಶಾದ್ಯಂತ ನಡೆಸುತ್ತಲೇ ಇದ್ದಾರೆ. ಇದು ದೇಶ ಸಮಾನತೆಯ ಕಡೆಗೆ ನಡೆಯದೆ ಅಮಾನುಷ ದ್ವೇಷ ಮತ್ತು ವಿಕೃತಿಯ ಕಡೆಗೆ ನಡೆಯುತ್ತಿರುವುದನ್ನು ಮತ್ತೆ ಮತ್ತೆ ಖಚಿತಪಡಿಸುತ್ತಿದೆ” ಎಂದು ತಿಳಿಸಿದರು.

ದಲಿತ ಚಳವಳಿ ಘನತೆಯ ಬದುಕು ಕೊಟ್ಟಿದೆ, ಹಂಚಿಕೊಂಡು ತಿನ್ನೋಣ: ಮಾವಳ್ಳಿ ಶಂಕರ್ ಅಭಿಮತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...