ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಿಂದ ಅಪ್ರಾಪ್ತ ವಯಸ್ಕರು ಸೇರಿದಂತೆ 69 ಜೀತ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದು, ಸಂತ್ರಸ್ತರನ್ನು ಶೋಷಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಕಲ್ಲು ಹೊಡೆಯುವ, ಕುರಿ ಸಾಕಣೆ ಕೇಂದ್ರಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲ್ಪಟ್ಟ ಬಲಿಪಶುಗಳನ್ನು ಸಾಮಾಜಿಕ ಕಾರ್ಯಕರ್ತರ ಸುಳಿವು ನೀಡಿದ ನಂತರ ಗುರುವಾರ ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ಜೀತ ಮಾಡುತ್ತಿದ್ದವರನ್ನು ಪಾಲ್ಘರ್ ಜಿಲ್ಲೆಯ ಅವರ ಹಳ್ಳಿಗಳಿಗೆ ಹಿಂತಿರುಗಿಸಲಾಗಿದೆ.
ಜೀತ ಕಾರ್ಮಿಕರು ಎಂದರೆ ಸಾಲವನ್ನು ಮರುಪಾವತಿಸಲು ಅಥವಾ ಕೆಲವು ಆರ್ಥಿಕ ಸಹಾಯಕ್ಕಾಗಿ ಕೆಲಸ ಮಾಡಲು ಒತ್ತಾಯಿಸಲ್ಪಡುವ ಜನರು. ಇವರು ಆಗಾಗ್ಗೆ ಶೋಷಣೆ ಅಥವಾ ನಿಂದನೀಯ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದರು. ಜೀತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯಡಿಯಲ್ಲಿ, ಈ ಪದ್ಧತಿಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಅಹಲ್ಯಾನಗರ ಜಿಲ್ಲೆಯ ಕಾರ್ಮಿಕ ಅಧಿಕಾರಿ ಸಂದೀಪ್ ಹರ್ಮಲ್ಕರ್, ಅವರು ಮೊದಲು ಕೆಲವು ಸ್ಥಳಗಳ ಮೇಲೆ ದಾಳಿ ಮಾಡಿ 16 ಜೀತ ಕಾರ್ಮಿಕರನ್ನು ರಕ್ಷಿಸಿದರು ಎಂದು ಹೇಳಿದರು. “ಈ ಆರಂಭಿಕ ರಕ್ಷಣೆ ಒಟ್ಟು 69 ವ್ಯಕ್ತಿಗಳನ್ನು ಸೆರೆಹಿಡಿದವರಿಂದ ಬಿಡುಗಡೆ ಮಾಡಿದ ದೊಡ್ಡ ಗುಂಪಿನ ಭಾಗವಾಗಿತ್ತು” ಎಂದು ಅವರು ಹೇಳಿದರು.
ಅಹಲ್ಯಾನಗರ ಜಿಲ್ಲೆಯ ಸಂಗಮ್ನೇರ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ. ಕುನಾಲ್ ಸೋನಾವಾನೆ ಮಾತನಾಡಿ, ಆರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. “ಇತರ ಮೂವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಅವರು ಹೇಳಿದರು.
ಎಫ್‌ಐಆರ್ ಪ್ರಕಾರ, ಆರೋಪಿಗಳು ಜೀತದಾಳುಗಳನ್ನು ಮತ್ತು ಅವರ ಮಕ್ಕಳನ್ನು ಸಹ ಕಠಿಣ ಕುರಿ ಸಾಕಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕಲ್ಲುಗಳನ್ನು ಕಡಿಯುವಂತೆ ಒತ್ತಾಯಿಸುತ್ತಿದ್ದರು. ಈ ಮಕ್ಕಳನ್ನು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಪಡಿಸಲಾಯಿತು. ಅವರ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟರ್ಕಿ ಯೂನಿವರ್ಸಿಟಿ ಜೊತೆಗಿನ ಶೈಕ್ಷಣಿಕ ಒಪ್ಪಂದ ಅಮಾನತಿಗೆ ವಿದ್ಯಾರ್ಥಿ ಸಂಘಟನೆ ಆಕ್ರೋಶ


