- Advertisement -
- Advertisement -
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾವಲ್‌ನಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸಣ್ಣ ಸೇತುವೆ ಭಾನುವಾರ ಕುಸಿದು ಬಿದ್ದ ನಂತರ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, ಕೆಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಮಧ್ಯಾಹ್ನ 03.30 ಗಂಟೆಯ ಸುಮಾರಿಗೆ ನಡೆದಿದೆ.
ಘಟನೆಯ ಸಮಯದಲ್ಲಿ ಸೇತುವೆಯಲ್ಲಿದ್ದ ಒಟ್ಟು 20 ರಿಂದ 25 ಜನರಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ.
“ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳುತ್ತಿವೆ. ಜನರನ್ನು ರಕ್ಷಿಸುವುದು ಆರಂಭಿಕ ಆದ್ಯತೆಯಾಗಿದೆ” ಎಂದು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಹೇಳಿದರು.
ಕುಂದಮಾಲ ಸೇತುವೆ ಎಂದು ಕರೆಯಲ್ಪಡುವ ಈ ಸೇತುವೆ ಇಂದ್ರಯಾಣಿ ನದಿಯ ಮೇಲೆ ಇದ್ದು, ಮಳೆಗಾಲದಲ್ಲಿ ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ.
ಪೊಲೀಸ್ ಕಲೆಕ್ಟರೇಟ್, ಪುಣೆ ಗ್ರಾಮೀಣ ಪೊಲೀಸ್, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪುಣೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.


