ಮಹಾರಾಷ್ಟ್ರದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕರಾದ ನಾನಾ ಪಟೋಲೆ ಮತ್ತು ಸುಪ್ರಿಯಾ ಸುಳೆ ಬಿಟ್ ಕಾಯಿನ್ ಹಣವನ್ನು ಚುನಾವಣೆಗೆ ಬಳಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ಬಿಜೆಪಿ ಮಂಗಳವಾರ (ನ.19) ಆರೋಪಿಸಿತ್ತು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ನಿನ್ನೆ(ನ.20) ನಡೆದಿದೆ. ಅದರ ಮುನ್ನಾದಿನ ಮಂಗಳವಾರ (ನ.19) ರಾತ್ರಿ 10.58, 11.00, 11.02 ಮತ್ತು 11.04ಕ್ಕೆ ಬಿಜೆಪಿ ರಾಷ್ಟ್ರೀಯ ಸಮಿತಿಯ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ 4 ಆಡಿಯೋ ರೆಕಾರ್ಡಿಂಗ್ ಕ್ಲಿಪ್‌ಗಳನ್ನು ಅಪ್ಲೋಡ್ ಮಾಡಿತ್ತು.
ಈ ನಾಲ್ಕು ಆಡಿಯೋ ರೆಕಾರ್ಡಿಂಗ್‌ಗಳು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ತಂಡದ ಇನ್‌ಸ್ಪೆಕ್ಟರ್ ಜನರಲ್ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಸಾರಥಿ ಎಂಬ ಆಡಿಟ್ ಸಂಸ್ಥೆಯ ಉದ್ಯೋಗಿ ಗೌರವ್ ಮೆಹ್ತಾ ನಡುವಿನ ಸಂಭಾಷಣೆಯದ್ದು ಎಂದು ಬಿಜೆಪಿ ಆರೋಪಿಸಿತ್ತು.
ಇದಕ್ಕೂ ಮುನ್ನ ಮಂಗಳವಾರ ಪುಣೆಯ ಮಾಜಿ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪಾಟೀಲ್ ಅವರು, ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಅವರು 2018ರ ಕ್ರಿಪ್ಟೋ ಕರೆನ್ಸಿ ಹಗರಣ ಪ್ರಕರಣದ ಬಿಟ್ ಕಾಯಿನ್‌ಗಳನ್ನು ದುರುಪಯೋಗಪಡಿಸಿಕೊಂಡು, ಅದರ ಹಣವನ್ನು ರಾಜ್ಯ ಚುನಾವಣೆಗೆ ಬಳಸಿದ್ದಾರೆ ಎಂದು ಆರೋಪಿಸಿದ್ದರು.
ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ, ಸಾರಥಿ ಆಡಿಟ್ ಸಂಸ್ಥೆಯ ಉದ್ಯೋಗಿ ಗೌರವ್ ಮೆಹ್ತಾ, ಪ್ರಸ್ತುತ ಚಂದ್ರಾಪುರದಲ್ಲಿ ಮಹಾರಾಷ್ಟ್ರ ಮೀಸಲು ಪೊಲೀಸ್ ಪಡೆಯ ಎಸ್ಪಿಯಾಗಿರುವ ಐಪಿಎಸ್ ಅಧಿಕಾರಿ ಭಾಗ್ಯಶ್ರೀ ನವತಾಕೆ ವಿರುದ್ದ ಕೂಡ ರವೀಂದ್ರನಾಥ್ ಪಾಟೀಲ್ ಆರೋಪ ಹೊರಿಸಿದ್ದರು. ಇವರ ನಡುವಿನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ರವೀಂದ್ರನಾಥ್ ಪಾಟೀಲ್ ಆರೋಪ ಮಾಡಿದ ಬೆನ್ನಲ್ಲೇ, ಬಿಜೆಪಿ ನಾಲ್ಕು ಆಡಿಯೋ ಕ್ಲಿಪ್‌ಗಳನ್ನು ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿತ್ತು.
ಬಿಜೆಪಿ ಹಂಚಿಕೊಂಡ ಆಡಿಯೋದಲ್ಲಿ ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಎನ್ನಲಾದ ವ್ಯಕ್ತಿಗಳು ನಾಲ್ಕು ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಸಂಗ್ರಹವಾಗಿರುವ ಬಿಟ್‌ಕಾಯಿನ್‌ಗಳಿಗೆ ಬದಲಾಗಿ ಹಣ ಕೇಳುವುದು ಮತ್ತು ಈ ವಿಷಯದಲ್ಲಿ ಯಾವುದೇ ತನಿಖೆ ನಡೆಯುವುದಿಲ್ಲ ಎಂದು ಭರವಸೆ ಕೊಡುವುದು ಇದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಬುಧವಾರ (ನ.20) ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ವಿರುದ್ದ ಗಂಭೀರ ಆರೋಪ ಮಾಡಿದ್ದರು. “ತನಿಖೆ ನಡೆದರೆ ಎಲ್ಲಾ ಹಗರಣ ಹೊರ ಬರಲಿದೆ. ಪ್ರತಿಪಕ್ಷಗಳ ಮೈತ್ರಿಕೂಟ ‘ಎಂವಿಎ ಗೋಡೆ ಮೇಲೆ ಬರೆದ ಬರಹದಂತೆ ತಮ್ಮ ಸೋಲನ್ನು ಎದುರು ನೋಡುತ್ತಿದೆ” ಎಂದಿದ್ದರು.
ಫ್ಯಾಕ್ಟ್‌ಚೆಕ್ : ಪ್ರಮುಖ ಫ್ಯಾಕ್ಟ್‌ಚೆಕ್ ಸುದ್ದಿ ಸಂಸ್ಥೆಯಾದ boomlive.in ಬಿಜೆಪಿ ಹಂಚಿಕೊಂಡಿರುವ ಆಡಿಯೋ ಕ್ಲಿಪ್‌ಗಳು ನಕಲಿ ಎಂದು ಹೇಳಿವೆ. ನಾನಾ ಪಟೋಲೆ, ಸುಪ್ರಿಯಾ ಸುಳೆ ಹಾಗೂ ಮತ್ತಿರರ ಹೆಸರಿನಲ್ಲಿ ಬಿಜೆಪಿ ಹಂಚಿಕೊಂಡಿರುವ ಆಡಿಯೋ ಕ್ಲಿಪ್‌ಗಳನ್ನು ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದಿದೆ. ಪತ್ರಕರ್ತರು ಮತ್ತು ಸಂಶೋಧಕರಿಗೆ ಲಭ್ಯವಿರುವ TrueMedia.org ಡೀಪ್‌ಫೇಕ್ ಪತ್ತೆ ಸಾಧನ ಬಳಸಿಕೊಂಡು ನಾವು ಆಡಿಯೊ ಕ್ಲಿಪ್‌ಗಳನ್ನು ಪರೀಕ್ಷಿಸಿದ್ದೇವೆ ಎಂದು ತಿಳಿಸಿದೆ.
ಬಿಜೆಪಿ ಹಂಚಿಕೊಂಡಿರುವ ನಾಲ್ಕು ಆಡಿಯೋಗಳ ಪೈಕಿ ಮೂರು ಎಐ ಬಳಸಿ ಸೃಷ್ಟಿಸಿರುವುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ಒಂದು ಆಡಿಯೋ ಮಾತ್ರ ಎಐ ಎಂಬುವುದನ್ನು ಸಂಪೂರ್ಣವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ. ಅದು ಕೇವಲ ಐದು ಸೆಕೆಂಡ್‌ಗಳಿವೆ. ಆ ಕ್ಲಿಪ್ ತುಂಬಾ ಚಿಕ್ಕದಾಗಿರುವುದರಿಂದ ಪರೀಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ.
ನಾವು ಸುಪ್ರಿಯಾ ಸುಳೆ, ನಾನಾ ಪಟೋಲೆ ಮತ್ತು ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರ ಅಸಲಿ ಧ್ವನಿಯನ್ನು ಯೂಟ್ಯೂಬ್ ಸಂದರ್ಶನಗಳಿಂದ ಆಲಿಸಿದ್ದೇವೆ. ಬಿಜೆಪಿ ಹಂಚಿಕೊಂಡಿರುವ ಆಡಿಯೋಗಳಿಗೂ ಈ ಮೂವರ ಅಸಲಿ ಧ್ವನಿಗೂ ಸಾಮ್ಯತೆ ಕಂಡು ಬಂದಿಲ್ಲ ಎಂದು ಬೂಮ್ ತಿಳಿಸಿದೆ.
ಆಡಿಯೋ-1 ಆಡಿಟ್ ಸಂಸ್ಥೆ ಉದ್ಯೋಗಿ ಗೌರವ್ ಮೆಹ್ತಾ ಮತ್ತು ಐಪಿಎಸ್ ಅಧಿಕಾರಿ ಅಮಿತಾಬ್ ಮೆಹ್ತಾ ನಡುವಿನ ಸಂಭಾಷಣೆ
ಈ ಆಡಿಯೋದಲ್ಲಿ ಆಡಿಟ್ ಸಂಸ್ಥೆ ಸಾರಥಿ ಅಸೋಸಿಯೇಟ್ಸ್‌ನ ಉದ್ಯೋಗಿ ಗೌರವ್ ಮೆಹ್ತಾ, ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರೊಂದಿಗೆ ಮಾತನಾಡುತ್ತಿರುವುದು ಎನ್ನಲಾಗಿದೆ.
ಬ್ಲೂಮ್ TrueMedia ದ AI ಡೀಪ್‌ಫೇಕ್ ಪತ್ತೆ ಸಾಧನವನ್ನು ಬಳಸಿಕೊಂಡು ಈ ಆಡಿಯೋ ಕ್ಲಿಪ್ ಅನ್ನು ಪರೀಕ್ಷಿಸಿದೆ. ಇದರಲ್ಲಿ ಆಡಿಯೋವನ್ನು ಎಐ ಮೂಲಕ ಸೃಷ್ಟಿಸಿದ್ದು ಎನ್ನುವುದಕ್ಕೆ ಹಲವು ಪುರಾವೆಗಳು ದೊರೆತಿವೆ..ಅದು ಇಲ್ಲಿದೆ.
“We had made 4 crypto wallets under the names of Patil and Ghode (Patil's colleague) and the transactions were done from these wallets. If any investigation occurs, it can be attributed to those two individuals (Patil and Ghode). No one can trace it back to us…”
Gaurav Mehta,… pic.twitter.com/Whi6lYaZiL
— BJP (@BJP4India) November 19, 2024
ಆಡಿಯೋ-2 ಎನ್‌ಸಿಪಿ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆ
ಈ ಆಡಿಯೋದಲ್ಲಿ ಸುಳೆ ಅವರು “ತನಿಖೆಯ ಬಗ್ಗೆ ಚಿಂತಿಸಬೇಡಿ, ಬಿಟ್‌ಕಾಯಿನ್‌ಗಳಿಗೆ ಬದಲಾಗಿ ಹಣ ಕೊಡಿ” ಎಂದು ಗೌರವ ಮೆಹ್ತಾ ಬಳಿ ಕೇಳುತ್ತಿರುವುದು ಎನ್ನಲಾಗಿದೆ.
ಬೂಮ್ ಸಂಸ್ಥೆ, 2023ರಲ್ಲಿ ಸಮ್ದೀಶ್ ಭಾಟಿಯಾ ಅವರ ವಿಡಿಯೋ ಪಾಡ್‌ಕಾಸ್ಟ್ ‘ಅನ್‌ಫಿಲ್ಟರ್ಡ್ ಬೈ ಸಮ್ದೀಶ್’ ಸಂದರ್ಶನಲ್ಲಿ ಸುಪ್ರಿಯಾ ಸುಳೆ ಮಾತನಾಡಿರುವ ಧ್ವನಿ ಜೊತೆ ಈ ಆಡಿಯೋವನ್ನು ಹೋಲಿಸಿ ನೋಡಿದೆ. ಈ ವೇಳೆ ಎರಡೂ ಧ್ವನಿಗಳು ಸಂಪೂರ್ಣ ಭಿನ್ನವಾಗಿ ಕಂಡು ಬಂದಿದೆ. ಸಮ್ದೀಶ್ ಭಾಟಿಯಾ ಪಾಡ್‌ಕಾಸ್ಟ್‌ನಲ್ಲಿ ಸುಪ್ರಿಯಾ ಸುಳೆ ಮಾತನಾಡಿರುವುದು ಇಲ್ಲಿದೆ.
TrueMedia AI ಡೀಪ್‌ಫೇಕ್ ಪತ್ತೆ ಸಾಧನವು ಈ ಆಡಿಯೋ ಕೃತವಾಗಿ ಸೃಷ್ಟಿಸಿದ್ದು ಎಂಬುವುದಕ್ಕೆ ಹಲವು ಪುರಾವೆಗಳನ್ನು ಕಂಡು ಹಿಡಿದಿದೆ. ಅದರ ಫಲಿತಾಂಶ ಇಲ್ಲಿದೆ
“Need cash in exchange of bitcoins…You need not to worry about inquiry… We will handle it when we come to power…”
NCP (Sharad Pawar) leader Supriya Sule to Gaurav Mehta, the employee of audit firm Sarathi Associates.
(3 voice notes) pic.twitter.com/Pulphd6Oki
— BJP (@BJP4India) November 19, 2024
ಆಡಿಯೋ-3 ಕಾಂಗ್ರೆಸ್ ನಾಯಕ ನಾನಾ ಪಟೋಲೆ ಮತ್ತು ಐಪಿಎಲ್ ಅಧಿಕಾರಿ ಅಮಿತಾಬ್ ಗುಪ್ತಾ ನಡುವಿನ ಸಂಭಾಷಣೆ
ಈ ಆಡಿಯೋ ಪಟೋಲೆ ಅವರು ಬಿಟ್‌ಕಾಯಿನ್ ಅನ್ನು ನಗದು ರೂಪದಲ್ಲಿ ಪರಿವರ್ತಿಸುವಂತೆ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರಿಗೆ ಬೆದರಿಕೆ ಹಾಕುತ್ತಿರುವುದು ಎಂದು ಆರೋಪಿಸಲಾಗಿದೆ.
TrueMedia.org ಈ ಆಡಿಯೋ ಎಐ ಎಂಬುವುದನ್ನು ನಿರ್ಧಿರಿಸಲು ಕೆಲವೊಂದು ಪುರಾವೆಗಳು ಇವೆ ಎಂದಿವೆ. ಅದರ ಫಲಿತಾಂಶ ಇಲ್ಲಿದೆ. ಆದರೆ, ಈ ಆಡಿಯೋ ಕೇವಲ 5 ಸೆಕೆಂಡ್ ಇರುವುದರಿಂದ ಈಗ ಲಭ್ಯವಿರುವ ಸಾಧನಗಳನ್ನು ಬಳಸಿಕೊಂಡು ಇದರ ಸತ್ಯಾಸತ್ಯತೆ ಕಂಡು ಖಚಿತಪಡಿಸುವುದು ಸಾಧ್ಯವಿಲ್ಲ ಎಂದು ಬೂಮ್ ಹೇಳಿದೆ.
ನಾವು ಆಡಿಯೋ ರೆಕಾರ್ಡಿಂಗ್‌ನಲ್ಲಿರುವ ಪಟೋಲೆ ಅವರ ಧ್ವನಿಯನ್ನು ನವೆಂಬರ್ 19,2024 ರಂದು ಯುಟ್ಯೂಬ್ ಚಾನೆಲ್ ಜಿಸ್ಟ್‌ನ್ಯೂಸ್‌ನಲ್ಲಿ ಪ್ರಕಟಿಸಿದ ಪಟೋಲೆ ಅವರ ಸಂದರ್ಶನದ ಧ್ವನಿಯೊಂದಿಗೆ ಹೋಲಿಕೆ ಮಾಡಿದ್ದೇವೆ. ಈ ವೇಳೆ ಎರಡು ಧ್ವನಿಗಳು ಹೋಲಿಕೆಯಾಗಿಲ್ಲ ಎಂದು ಬ್ಲೂಮ್ ತಿಳಿಸಿದೆ. ಜಿಸ್ಟ್‌ನ್ಯೂಸ್ ಜೊತೆಗಿನ ನಾನಾ ಪಟೋಲೆ ಅವರ ಸಂದರ್ಶನದ ವಿಡಿಯೋ ಇಲ್ಲಿದೆ.
“Amitabh, what happened to the money I had asked for yesterday…?
Don’t mess with me…”
Congress Maharashtra President Nana Patole is heard pressurising Police Commissioner Amitabh Gupta for money. pic.twitter.com/6FmgcJqmOJ
— BJP (@BJP4India) November 19, 2024
ಆಡಿಯೋ-4 ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆ
ಇದು ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆಯ ಆಡಿಯೋ ಎನ್ನಲಾಗಿದೆ. ಇದರಲ್ಲಿ ನಾನಾ ಪಟೋಲೆ ಮತ್ತು ಸುಪ್ರಿಯಾ ಸುಳೆ ಹೇಳಿದಂತೆ ಬಿಟ್ ಕಾಯಿನ್ ಅನ್ನು ನಗದಾಗಿ ಪರಿವರ್ತಿಸುವ ಕುರಿತು ಇದೆ.
ಯೂಟ್ಯೂಬ್‌ನಲ್ಲಿ ಐಪಿಎಸ್ ಗುಪ್ತಾ ಅವರ ಹಲವಾರು ಸಂದರ್ಶನಗಳನ್ನು ನಾವು ಗಮನಿಸಿದ್ದೇವೆ. ಅವುಗಳಲ್ಲಿ ಯಾವುದೇ ಸಂದರ್ಶನದ ಧ್ವನಿ ಬಿಜೆಪಿ ಪೋಸ್ಟ್ ಮಾಡಿರುವ ಆಡಿಯೋ ರೆಕಾರ್ಡಿಂಗ್‌ಗೆ ಹೋಲಿಕೆಯಾಗಿಲ್ಲ ಎಂದು ಬೂಮ್ ತಿಳಿಸಿದೆ. ಮಾರ್ಚ್ 15, 2024 ರ ಸಂದರ್ಶನದಲ್ಲಿ ಗುಪ್ತಾ ಅವರು ಮಾತನಾಡಿರುವ ಮೂಲ ಧ್ವನಿಯನ್ನು ಇಲ್ಲಿ ಕೇಳಬಹುದು
ಬಿಜೆಪಿ ಹಂಚಿಕೊಂಡಿರುವ ಆಡಿಯೋ ಎಐ ಸೃಷ್ಟಿತ ಎಂಬುವುದಕ್ಕೆ ಪುರಾವೆಗಳು ದೊರೆತಿದೆ ಎಂದು TrueMedia AI ದೃಢಪಡಿಸಿದೆ ಎಂದು ಬೂಮ್ ಹೇಳಿದೆ. ಫಲಿತಾಂಶ ಇಲ್ಲಿ ನೋಡಬಹುದು.
“Gaurav, we need to ensure 50 crore by next week. It must be delivered to somebody in Dubai. Please ask your friend to have cash ready…”
Amitabh Gupta, Police Commissioner, in a conversation with Gaurav Mehta, an employee of audit firm Sarathi Associates, reveals a deeper… pic.twitter.com/T3s1ONWLW3
— BJP (@BJP4India) November 19, 2024
ಇವಿಷ್ಟೆ ಅಲ್ಲದೆ ಇನ್ನೂ ಕೆಲ ಎಐ ಪತ್ತೆ ಸಾಧನಗಳ ಮೂಲಕ ಬೂಮ್ ಸಂಸ್ಥೆ ಬಿಜೆಪಿ ಹಂಚಿಕೊಂಡಿರುವ ಆಡಿಯೋ ನಕಲಿ ಎಂದು ಹೇಳಿದೆ.
ಇದನ್ನೂ ಓದಿ | FACT CHECK : ಮುಂಬೈ ಸಿದ್ದಿ ವಿನಾಯಕ ದೇವಸ್ಥಾನದ ಜಾಗ ತನ್ನದೆಂದ ವಕ್ಫ್ ಬೋರ್ಡ್..ವೈರಲ್ ಸುದ್ದಿಯ ಅಸಲಿಯತ್ತೇನು?


