ಮರಾಠಿಯಲ್ಲಿ ಮಾತನಾಡುವ ಬದಲು “ಎಕ್ಸ್‌ಕ್ಯೂಸ್‌ಮಿ” ಎಂದು ಹೇಳಿದ್ದಕ್ಕಾಗಿ ಇಬ್ಬರು ಮಹಿಳೆಯರ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ ನಗರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ದುಷ್ಕರ್ಮಿಗಳು ಮಹಿಳೆಯರಿಬ್ಬರ ಮೇಲೆ ಹಲ್ಲೆ ನಡೆಸುವಾಗ, ಮಹಿಳೆಯ ಕೈಯಲ್ಲಿ ಮಗು ಇತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಮಂಗಳವಾರ ವರದಿ ಮಾಡಿದೆ. ಮಹಾರಾಷ್ಟ್ರ
ಡೊಂಬಿವ್ಲಿಯಲ್ಲಿರುವ ಹೌಸಿಂಗ್ ಸೊಸೈಟಿಯ ಪ್ರವೇಶದ್ವಾರಕ್ಕೆ ಹೋಗುವ ದಾರಿಯ ಅಡ್ಡವಿದ್ದ ವ್ಯಕ್ತಿಯನ್ನು ಬೈಕ್‌ನಲ್ಲಿದ್ದ ಮಹಿಳೆಯರು ದಾಟಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎಂದು ವರದಿ ಹೇಳಿದೆ. ಮಹಿಳೆಯರಲ್ಲಿ ಒಬ್ಬರು “ಎಕ್ಸ್‌ಕ್ಯೂಸ್‌ಮಿ” ಎಂದು ಹೇಳಿದ್ದು, ಈ ವೇಳೆ ವ್ಯಕ್ತಿಯು ಕೋಪಗೊಂಡಿದ್ದು ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದರು. ಇದು ಜಗಲಕ್ಕೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ವೇಳೆ ಹೆಚ್ಚಿನ ಜನರು ಸಂಘರ್ಷಕ್ಕೆ ಇಳಿದಿದ್ದು ವಾಗ್ವಾದ ಉಲ್ಬಣಗೊಂಡಿದ್ದು ಮತ್ತು ಮಹಿಳೆಯರನ್ನು ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ. ಎಫ್‌ಐಆರ್ ಬದಲಾಗಿ ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಬೇರೆ ಯಾವುದೇ ಕಾರಣದಿಂದ ವಾಗ್ವಾದ ನಡೆದಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
Two Women Beaten Up in Dombivli For Saying "Excuse Me" Instead of Speaking in Marathi!!#DombivliIncident #LanguageIssue #Marathi #ExcuseMe #Violence #WomenBeaten #LanguageDebate #CulturalSensitivity #SocialIssue
(Dombivli, women, beaten up, excuse me, Marathi language,… pic.twitter.com/PZEBYuObFQ
— Pune Mirror (@ThePuneMirror) April 8, 2025
ರಾಜ್ಯದಲ್ಲಿರುವ ಬ್ಯಾಂಕ್ ನೌಕರರು ಗ್ರಾಹಕರೊಂದಿಗೆ ಮರಾಠಿಯಲ್ಲಿ ಮಾತನಾಡಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ನಡೆಸಿದ ಅಭಿಯಾನದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಏಪ್ರಿಲ್ 1 ರಂದು ಮುಂಬೈನ ಪೊವೈ ಪ್ರದೇಶದಲ್ಲಿ ಮರಾಠಿಯಲ್ಲಿ ಮಾತನಾಡದ ಕಾರಣಕ್ಕಾಗಿ ಸೆಕ್ಯೂರಿಟಿ ಗಾರ್ಡ್‌ಗೆ ಥಳಿಸಿದ ಆರೋಪದ ಮೇಲೆ ಪಕ್ಷದ ಮೂವರು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ನಗರದ ಮತ್ತೊಂದು ಬ್ಯಾಂಕಿನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ, ಅಲ್ಲಿ ಮರಾಠಿಯಲ್ಲಿ ಮಾತನಾಡದಿದ್ದಕ್ಕಾಗಿ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಏಪ್ರಿಲ್ 5 ರಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ ತಮ್ಮ ಆಂದೋಲನವನ್ನು ನಿಲ್ಲಿಸುವಂತೆ ಹೇಳಿದ್ದರು. ಜೊತೆಗೆ, ರಾಜ್ಯಾದ್ಯಂತ ಸಂಸ್ಥೆಗಳಲ್ಲಿ ಮರಾಠಿ ಬಳಸುವ ಕಾನೂನುಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಮಹಾರಾಷ್ಟ್ರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಮೃತ್ ಯೋಜನೆಯಲ್ಲಿ ₹17 ಸಾವಿರ ಕೋಟಿ ಹಣ ದುರುಪಯೋಗ: ಎನ್.ಆರ್. ರಮೇಶ್ ಆರೋಪ
ಅಮೃತ್ ಯೋಜನೆಯಲ್ಲಿ ₹17 ಸಾವಿರ ಕೋಟಿ ಹಣ ದುರುಪಯೋಗ: ಎನ್.ಆರ್. ರಮೇಶ್ ಆರೋಪ

