ರಾಜ್ಯದ ಮೂಲಸೌಕರ್ಯ ಕಾಮಗಾರಿಗಳಿಗೆ 89,000 ಕೋಟಿ ರೂ. ಮೌಲ್ಯದ ಬಿಲ್‌ಗಳನ್ನು ಪಾವತಿಸದಿರುವ ರಾಜ್ಯ ಸರ್ಕಾರದ ವಿರುದ್ಧ ಮಹಾರಾಷ್ಟ್ರದ ಗುತ್ತಿಗೆದಾರರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ. ಮುಂಬೈ, ನಾಗ್ಪುರ ಮತ್ತು ಛತ್ರಪತಿ ಸಂಭಾಜಿನಗರದ ಹೈಕೋರ್ಟ್ ಪೀಠಗಳ ಮುಂದೆ ಅರ್ಜಿಗಳನ್ನು ಸಲ್ಲಿಸುವುದಾಗಿ ಗುತ್ತಿಗೆದಾರರ ಸಂಘಟನೆ ಹೇಳಿದೆ ಎಂದು ವರದಿಯಾಗಿದೆ.
“ಸರ್ಕಾರದಿಂದ ಬರಬೇಕಿದ್ದ ನಮ್ಮ ಬಾಕಿ ಸುಮಾರು 89,000 ಕೋಟಿ ರೂ.ಗಳಿರುವಾಗ, ರಾಜ್ಯ ಸರ್ಕಾರ ಕೇವಲ 4,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಿದೆ. ಮಹಾರಾಷ್ಟ್ರ ರಾಜ್ಯ ಗುತ್ತಿಗೆದಾರರ ಸಂಘ ಮತ್ತು ರಾಜ್ಯ ಎಂಜಿನಿಯರ್‌ಗಳ ಸಂಘವು ಥಾಣೆಯಲ್ಲಿ ರಾಜ್ಯಮಟ್ಟದ ಸಭೆ ನಡೆಸಿ ಸರ್ಕಾರವನ್ನು ನ್ಯಾಯಾಲಯಕ್ಕೆ ಎಳೆಯುವ ನಿರ್ಧಾರವನ್ನು ತೆಗೆದುಕೊಂಡಿತು” ಎಂದು ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಮಿಲಿಂಗ್ ಭೋಸ್ಲೆ ಹೇಳಿದ್ದಾರೆ. ಶುಕ್ರವಾರ ಥಾಣೆಯಲ್ಲಿ ಸಭೆ ನಡೆಯಿತು ಎಂದು ವರದಿಗಳು ಹೇಳಿವೆ.
ಕಳೆದ ವರ್ಷದಿಂದ ಎರಡೂ ಸಂಘಗಳು ಸರ್ಕಾರದಿಂದ ತಮ್ಮ ಬಾಕಿ ಹಣವನ್ನು ಕೇಳುತ್ತಿವೆ. ಫೆಬ್ರವರಿಯಲ್ಲಿ, ಅವರು ರಾಜ್ಯದ ಉನ್ನತ ನಾಯಕರಿಗೆ ಪತ್ರ ಬರೆದು, ಜುಲೈ 2024 ರಿಂದ ವಿವಿಧ ಇಲಾಖೆಗಳಿಂದ 89,000 ಕೋಟಿ ರೂ.ಗಳ ಪಾವತಿಗಳನ್ನು ಪಾವತಿಸದ ಕಾರಣ ನಡೆಯುತ್ತಿರುವ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದರು. ರಾಜ್ಯಾದ್ಯಂತ ಹಂತ ಹಂತವಾಗಿ ಕೆಲಸಗಳನ್ನು ನಿಲ್ಲಿಸಿದರೂ, ಗುತ್ತಿಗೆದಾರರಿಗೆ ಸರ್ಕಾರ ಇನ್ನೂ ಪಾವತಿ ಮಾಡಿಲ್ಲ ಎಂದು ವರದಿಯಾಗಿದೆ.
ಗುತ್ತಿಗೆದಾರರ “89,000 ಕೋಟಿ ರೂ. ಬಾಕಿ”ಯಲ್ಲಿ ರಾಜ್ಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಯಿಂದ 46,000 ಕೋಟಿ ರೂ.ಗಳು ಬಾಕಿಯಿದ್ದು, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಡಿಯಲ್ಲಿ ಜಲ ಜೀವನ್ ಮಿಷನ್ ನಿಂದ 18,000 ಕೋಟಿ ರೂ.ಗಳು ಬಾಕಿಯಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 8,600 ಕೋಟಿ ರೂ.ಗಳು, ನೀರಾವರಿ ಇಲಾಖೆಯಿಂದ 19,700 ಕೋಟಿ ರೂ.ಗಳು ಮತ್ತು ಡಿಪಿಡಿಸಿ, ಶಾಸಕರ ನಿಧಿ ಮತ್ತು ಸಂಸದರ ನಿಧಿಯಡಿಯಲ್ಲಿ ಮಾಡಿದ ಕಾಮಗಾರಿಗಳಿಗೆ 1,700 ಕೋಟಿ ರೂ.ಗಳನ್ನು ಸರ್ಕಾರ ಬಾಕಿಯಿಟ್ಟಿವೆ.
ಮಾರ್ಚ್‌ನಲ್ಲಿ ಬಿಡುಗಡೆಯಾದ 4,000 ಕೋಟಿ ರೂ.ಗಳು ಒಟ್ಟು ಬಾಕಿಯ ಕೇವಲ 5 ಪ್ರತಿಶತದಷ್ಟಿದ್ದು, ಗುತ್ತಿಗೆದಾರರು ಇಷ್ಟು ಸಣ್ಣ ಮೊತ್ತದ ಕಾಮಗಾರಿಗಳನ್ನು ಮುಂದುವರಿಸುವುದು ಅಸಾಧ್ಯ ಎಂದು ಮಿಲಿಂಗ್ ಭೋಸ್ಲೆ ಹೇಳಿದ್ದರೆ. “ಪರಿಣಾಮವಾಗಿ, ಬಿಲ್ ಮೊತ್ತವನ್ನು ಪಾವತಿಸದಿದ್ದರೆ, ಯಾವುದೇ ಗುತ್ತಿಗೆದಾರರು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಖಂಡಿತವಾಗಿಯೂ ಸ್ಥಗಿತಗೊಳ್ಳಲು ಕಾರಣವಾಗುತ್ತದೆ” ಎಂದು ಭೋಸ್ಲೆ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಭಾಲ್‌ನಲ್ಲಿ ಕಾಣಿಸಿಕೊಂಡ ‘ಫ್ರೀ ಗಾಜಾ, ಫ್ರೀ ಪ್ಯಾಲೆಸ್ತೀನ್’ ಪೋಸ್ಟರ್‌ಗಳು
ಸಂಭಾಲ್‌ನಲ್ಲಿ ಕಾಣಿಸಿಕೊಂಡ ‘ಫ್ರೀ ಗಾಜಾ, ಫ್ರೀ ಪ್ಯಾಲೆಸ್ತೀನ್’ ಪೋಸ್ಟರ್‌ಗಳು

