ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಾತ್ರಿ ರಚನೆಯಾಗಿದೆ, ರಾತ್ರಿಯೇ ಪತನವಾಗಲಿದೆ ಎಂದು ಎನ್.ಸಿ.ಪಿ ನಾಯಕ ಜಯಂತ್ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು ದೇವೇಂದ್ರ ಫಡ್ನಾವೀಸ್ ಮತ್ತು ಅಜಿತ್ ಪವಾರ್ ಇಬ್ಬರೇ ಸರ್ಕಾರವೇ ಎಂದು ಗೇಲಿ ಮಾಡಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಭೆ ನಡೆಸಿ, ಇಬ್ಬರೂ ಪರಸ್ಪರ ಖಾತೆಗಳನ್ನು ಹಂಚಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮತ್ತೊಂದೆಡೆ ಅಜಿತ್ ಪವಾರ್ ಜೊತೆ ಗುರುತಿಸಿಕೊಂಡಿದ್ದ ಶಾಸಕರಾದ ಅನಿಲ್ ಪಾಟೀಲ್ ಮತ್ತು ದೌಲತ್ ದರೋದಾ ಇಬ್ಬರೂ ಕೂಡ ವಾಪಸ್ ಎನ್.ಸಿ.ಪಿ ತೆಕ್ಕೆಗೆ ಬಂದಿದ್ದು ಅವರು ಹೋಟೆಲ್ ಹಯಾತ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಕಾಣೆಯಾಗಿದ್ದ ನಾಲ್ವರು ಶಾಸಕರನ್ನು ಪತ್ತೆ ಹಚ್ಚಿ, ಮರಳಿ ಪಕ್ಷಕ್ಕೆ ಕರೆತಂದ NCP…
ನಮಗೆ 165 ಶಾಸಕರ ಬೆಂಬಲವಿದೆ. 53 NCP ಶಾಸಕರು ನಮ್ಮ ಜೊತೆ ಇದ್ದಾರೆ. ಅಜಿತ್ ಪವಾರ್ ತಪ್ಪು ಮಾಡಿದ್ದಾರೆ. ಅವರು ರಾಜಿನಾಮೆ ನೀಡಲೇಬೇಕು ಎಂದು ಎನ್.ಸಿ.ಪಿ. ವಕ್ತಾರ ನವಾಬ್ ಮಲ್ಲಿಕ್ ಸ್ಪಷ್ಟಪಡಿಸಿದ್ದಾರೆ.


