ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರಪಂಚ್‌ನ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯದ ಸಚಿವ ಧನಂಜಯ್ ಮುಂಡೆ ಅವರಿಗೆ ಬೆದರಿಕೆಯೊಡ್ಡುವ ಹೇಳಿಕೆ ನೀಡಿರುವ ಆರೋಪದ ಮೇಲೆ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜಾರಂಗೆ ಪಾಟೀಲ್ ಸಾಮಾಜ ದ್ರೋಹದ ಹೇಳಿಕೆಗಳನ್ನು ನೀಡಿದ್ದು, ವೈಷಮ್ಯವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಬೀಡ್ ಜಿಲ್ಲೆಯ ಪರ್ಲಿ ಪಟ್ಟಣದ ಪೋಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಹಾರಾಷ್ಟ್ರ
ಶನಿವಾರ ಪರ್ಭಾನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಜಾರಂಗೆ ಪಾಟೀಲ್ ಅವರು ಸರಪಂಚ್ ಸಂತೋಷ್ ದೇಶಮುಖ್ ಹತ್ಯೆಗೆ ಸಂಬಂಧಿಸಿದಂತೆ ಮುಂಡೆ ಅವರನ್ನು ಟೀಕಿಸಿದ್ದರು. ದೇಶಮುಖ್ ಅವರ ಕುಟುಂಬಕ್ಕೆ ಹಾನಿಯಾದರೆ ಮರಾಠ ಸಮುದಾಯವು ಮುಂಡೆಯನ್ನು ಮುಕ್ತವಾಗಿ ತಿರುಗಾಡಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪರ್ಲಿಯ ಶಾಸಕರಾದ ಮುಂಡೆ ಅವರು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದಾರೆ. ಜಾರಂಗೆ ಪಾಟೀಲ್ ಅವರ ಹೇಳಿಕೆಯಿಂದ ಕೋಪಗೊಂಡಿರುವ ಮುಂಡೆ ಬೆಂಬಲಿಗರು ಜಾರಂಗೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದು, ಬೀಡ್‌ನ ಶಿವಾಜಿನಗರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಬೀಡ್ ಜಿಲ್ಲೆಯ ವಿಂಡ್‌ಮಿಲ್ ಕಂಪನಿಯಿಂದ 2 ಕೋಟಿ ರೂ.ಗಳನ್ನು ಸುಲಿಗೆ ಮಾಡಲು ಕೆಲವು ವ್ಯಕ್ತಿಗಳು ನಡೆಸಿದ ಪ್ರಯತ್ನವನ್ನು ವಿರೋಧಿಸಿದ್ದಕ್ಕಾಗಿ ಮ್ಯಾಸಜೋಗ್ ಗ್ರಾಮದ ಸರಪಂಚ್ ದೇಶಮುಖ್ ಅವರನ್ನು ಡಿಸೆಂಬರ್ 9 ರಂದು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಕೊಲೆಗೆ ಸಂಬಂಧಿಸಿ ಸುಲಿಗೆ ಪ್ರಕರಣದಲ್ಲಿ ಮುಂಡೆ ಸಹಚರ ವಾಲ್ಮಿಕ್ ಕರಾದ್ ಎಂಬಾತನನ್ನು ಬಂಧಿಸಲಾಗಿದೆ.
ದೇಶ್‌ಮುಖ್ ಮರಾಠಾ ಆಗಿದ್ದರಿಂದ ಮತ್ತು ಪ್ರಕರಣದಲ್ಲಿ ಆರೋಪಿಯಾಗಿರುವ ಹೆಚ್ಚಿನ ವ್ಯಕ್ತಿಗಳು ಬೀಡ್ ಪ್ರದೇಶದ ಪ್ರಬಲ ವಂಜರಿ ಸಮುದಾಯದವರಾದ್ದರಿಂದ ಪರಿಸ್ಥಿತಿಯು ಜಾತಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ಇದನ್ನೂಓದಿ: ಅಸೆಂಬ್ಲಿಯಿಂದ ಹೊರನಡೆದ ರಾಜ್ಯಪಾಲರ ನಡೆಯನ್ನು ‘ನಾಟಕ’ ಎಂದ ಡಿಎಂಕೆ; ಪ್ರತಿಭಟನೆಗೆ ನಿರ್ಧಾರ
ಅಸೆಂಬ್ಲಿಯಿಂದ ಹೊರನಡೆದ ರಾಜ್ಯಪಾಲರ ನಡೆಯನ್ನು ‘ನಾಟಕ’ ಎಂದ ಡಿಎಂಕೆ; ಪ್ರತಿಭಟನೆಗೆ ನಿರ್ಧಾರ


