ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಪಟ್ಟಣದಲ್ಲಿರುವ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಉರ್ದು ಭಾಷೆಯ ವಿರುದ್ಧದ ಪೂರ್ವಾಗ್ರಹವು “ಉರ್ದು ಭಾರತಕ್ಕೆ ಅನ್ಯವಾಗಿದೆ ಎಂಬ ತಪ್ಪು ಕಲ್ಪನೆಯಿಂದ ಹುಟ್ಟಿಕೊಂಡಿದೆ” ಎಂದು ನ್ಯಾಯಾಲಯ ಹೇಳಿದೆ. ‘ಮಹಾರಾಷ್ಟ್ರ ಪುರಸಭೆಯ
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ಉರ್ದು ಭಾರತದಲ್ಲಿ ಹುಟ್ಟಿದ್ದು, ಮರಾಠಿ ಮತ್ತು ಹಿಂದಿಯಂತೆ ಅದು ಇಂಡೋ-ಆರ್ಯನ್ ಭಾಷೆಯಾಗಿದೆ ಎಂದು ಹೇಳಿದೆ.
“ವಿಭಿನ್ನ ಸಾಂಸ್ಕೃತಿಕ ಸಮುದಾಯಕ್ಕೆ ಸೇರಿದ ಜನರು ತಮ್ಮ ನಡುವೆ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ಬಯಸುವ ಅಗತ್ಯದಿಂದಾಗಿ ಉರ್ದು ಭಾರತದಲ್ಲಿ ಅಭಿವೃದ್ಧಿ ಹೊಂದಿತು ಮತ್ತು ಪ್ರವರ್ಧಮಾನಕ್ಕೆ ಬಂದಿತು” ಎಂದು ನ್ಯಾಯಾಲಯ ಹೇಳಿದೆ.
ಪಾತೂರ್ ಪುರಸಭೆಯ ಹೊಸ ಕಟ್ಟಡದ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿದ್ದ ಮಾಜಿ ಕೌನ್ಸಿಲರ್ ವರ್ಷತಾಯಿ ಸಂಜಯ್ ಬಾಗಾಡೆ ಅವರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಬಾಗಾಡೆ ಈ ಹಿಂದೆ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. 2021 ರಲ್ಲಿ ತೀರ್ಪು ನೀಡಿದ್ದ ಹೈಕೋರ್ಟ್, ಮಹಾರಾಷ್ಟ್ರ ಸ್ಥಳೀಯ ಪ್ರಾಧಿಕಾರಗಳ ಅಧಿಕೃತ ಭಾಷಾ ಕಾಯ್ದೆ, 2022 ಅಥವಾ ಯಾವುದೇ ಇತರ ಕಾನೂನು ನಿಬಂಧನೆಯ ಅಡಿಯಲ್ಲಿ ಉರ್ದು ಬಳಸುವುದನ್ನು ನಿಷೇಧಿಸಲಾಗಿಲ್ಲ ಎಂದು ತೀರ್ಪು ನೀಡಿತ್ತು. ಅದರ ನಂತರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು, ಸುಪ್ರಿಂಕೋರ್ಟ್ ಮರಾಠಿ ಜೊತೆಗೆ ಉರ್ದು ಬಳಕೆಯನ್ನು ಸಹ ಎತ್ತಿಹಿಡಿದಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು “ಭಾಷೆ ಧರ್ಮವಲ್ಲ, ಸಂಸ್ಕೃತಿ” ಎಂದು ಒತ್ತಿ ಹೇಳಿದೆ.
ಆಂಗ್ಲೋ-ಅಲ್ಜೀರಿಯಾದ ಲೇಖಕ ಮೌಲೌದ್ ಬೆನ್ಜಾಡಿ ಅವರ ಉಲ್ಲೇಖದೊಂದಿಗೆ ತೀರ್ಪನ್ನು ಪ್ರಾರಂಭಿಸಿದ ನ್ಯಾಯಮೂರ್ತಿ ಧುಲಿಯಾ ಅವರು, “ನೀವು ಒಂದು ಭಾಷೆಯನ್ನು ಕಲಿತಾಗ, ಹೊಸ ಭಾಷೆಯನ್ನು ಮಾತನಾಡಲು ಮತ್ತು ಬರೆಯಲು ಮಾತ್ರ ಕಲಿಯುವುದಿಲ್ಲ. ಬದಲಾಗಿ ನೀವು ಎಲ್ಲಾ ಮಾನವಕುಲದ ಬಗ್ಗೆ ಮುಕ್ತ ಮನಸ್ಸಿನವರು, ಉದಾರವಾದಿಗಳು, ಸಹಿಷ್ಣುಗಳು, ದಯೆ ಮತ್ತು ಪರಿಗಣನೆಯನ್ನು ಹೊಂದಲು ಕಲಿಯುತ್ತೀರಿ.” ಎಂದು ಹೇಳಿದ್ದಾರೆ.
“ಎರಡು ಭಾಷೆಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸಿದ ವಸಾಹತುಶಾಹಿ ಶಕ್ತಿಗಳ ಒಡಕು, ಹಿಂದಿಯನ್ನು ಹಿಂದೂಗಳ ಮತ್ತು ಉರ್ದು ಭಾಷೆಯನ್ನು ಮುಸ್ಲಿಮರ ಭಾಷೆ ಎಂದು ಅರ್ಥೈಸಲಾಯಿತು. ಇದು ವಾಸ್ತವವಾಗಿ ವೈವಿಧ್ಯತೆಯಲ್ಲಿ ಏಕತೆ; ಮತ್ತು ಸಾರ್ವತ್ರಿಕ ಸಹೋದರತ್ವದ ಪರಿಕಲ್ಪನೆ ಮೇಲಿನ ಶೋಷಣೆಯಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಮಹಾರಾಷ್ಟ್ರ ಪುರಸಭೆಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಅತ್ಯಾಚಾರ ಸಂತ್ರಸ್ತೆಯೇ ಅಪಾಯ ತಂದುಕೊಂಡಳು’: ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಕ್ಕೆ ಸುಪ್ರೀಂ ಆಕ್ಷೇಪ
‘ಅತ್ಯಾಚಾರ ಸಂತ್ರಸ್ತೆಯೇ ಅಪಾಯ ತಂದುಕೊಂಡಳು’: ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಕ್ಕೆ ಸುಪ್ರೀಂ ಆಕ್ಷೇಪ

