ಒಂದೇ ಕುಟುಂಬದ ಒಂಬತ್ತು ಮಂದಿ ಸದಸ್ಯರು ತಮ್ಮದೇ ಮನೆಯಲ್ಲಿ ಮೃತದೇಹಗಳಾಗಿ ಪತ್ತೆಯಾಗಿರುವ ಆತಂಕಕಾರಿ ಘಟನೆಯೊಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಇದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಹೈಸಾಲ್‌ನಲ್ಲಿರುವ ಮನೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮೃತ ವ್ಯಕ್ತಿಗಳ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ವಿಷ ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.
“ಮೀರಜ್ ತಾಲೂಕಿನ ಮಹೈಸಾಲ್ ಪಟ್ಟಣದ ಮಾಣಿಕ್ ವಾನ್ಮೋರ್ ಅವರ ನಿವಾಸದಲ್ಲಿ ಸೋಮವಾರ ಮಧ್ಯಾಹ್ನ ಶವಗಳು ಪತ್ತೆಯಾಗಿವೆ. ಒಂದು ಮನೆಯಲ್ಲಿ ಒಂಬತ್ತು ಶವಗಳನ್ನು ಕಂಡುಕೊಂಡಿದ್ದೇವೆ. ಮೂರು ಶವಗಳು ಒಂದೇ ಸ್ಥಳದಲ್ಲಿ ಕಂಡುಬಂದರೆ, ಉಳಿದ ಆರು ಮೃತದೇಹಗಳು ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿವೆ” ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ಝೊಮಾಟೊ ಫುಡ್ ಡೆಲಿವರಿ ಯುವಕನಿಗೆ ಜಾತಿ ನಿಂದನೆ, ಹಲ್ಲೆ; FIR ದಾಖಲು
Maharashtra | Nine members of a family found dead in Sangli, police investigation underway pic.twitter.com/lGblowncdI
— ANI (@ANI) June 20, 2022
“ಪ್ರಾಥಮಿಕ ತನಿಖೆಯು ಯಾವುದೇ ಮೃತದೇಹಗಳ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಸೂಚಿಸುತ್ತದೆ. ಅವರ ಎಲ್ಲಾ ಸಾವಿಗೆ ವಿಷಕಾರಿ ಆಹಾರ ಕಾರಣವೆಂದು ತೋರುತ್ತದೆ. ಇದು ಆಕಸ್ಮಿಕವಾಗಿ ಸಂಭವಿಸಿದೆಯೇ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ” ಎಂದು ವಿಶೇಷ ಪೊಲೀಸ್ ಮಹಾನಿರೀಕ್ಷಕ (ಕೊಲ್ಹಾಪುರ ವ್ಯಾಪ್ತಿ) ಮನೋಜ್‌ಕುಮಾರ್ ಲೋಹಿಯಾ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸ್ಥಳಕ್ಕೆ ಪ್ರಯೋಗಾಲಯದ ತಂಡ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ತಂಡಗಳು ಬಂದು ಪರಿಶೀಲನೆ ನಡೆಸಿವೆ. ಸಾಂಗ್ಲಿ ಪೊಲೀಸ್‌ನ ಅಪರಾಧ ವಿಭಾಗದ ಅಧಿಕಾರಿಗಳು ತನಿಖೆಯನ್ನು ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಯಾರಿಗೂ ಯಾರ ಜೀವವನ್ನು ತೆಗೆಯುವ ಹಕ್ಕು ಇಲ್ಲ- ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ


