ಮಹಾರಾಷ್ಟ್ರದ ವಿರೋಧ ಪಕ್ಷದ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (MVA) ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ಒಪ್ಪಂದಕ್ಕೆ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಮಹಾರಾಷ್ಟ್ರ
ಪ್ರಸ್ತಾವಿತ ಒಪ್ಪಂದದ ಪ್ರಕಾರ, ಕಾಂಗ್ರೆಸ್ 105 ರಿಂದ 110 ಸ್ಥಾನಗಳಲ್ಲಿ, ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) 90 ರಿಂದ 95 ಸ್ಥಾನಗಳು ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) 75 ರಿಂದ 80 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2019 ರ ರಾಜ್ಯ ಚುನಾವಣೆಯ ನಂತರ ರಚನೆಯಾದ MVA ಮೈತ್ರಿಯು ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ NCP ಯ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವನ್ನು ಸೋಲಿಸಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಲು ಆಶಿಸುತ್ತಿದೆ.
ವಿರೋಧ ಪಕ್ಷಗಳ ಮೈತ್ರಿಯು ತಮ್ಮ ಲೋಕಸಭಾ ಚುನಾವಣೆಯ ಪ್ರದರ್ಶನವನ್ನು ಪುನರಾವರ್ತಿಸಲು ಬಯಸುತ್ತಿವೆ. ಲೋಕಸಭೆಯಲ್ಲಿ ಆಡಳಿತರೂಢ ಮಹಾಯುತಿ ಮೈತ್ರಿಗಿಂತ ಹೆಚ್ಚಿನ ಲಾಭ ಗಳಿಸಿತ್ತು. ಲೋಕಸಭೆಯಲ್ಲಿ ಮಹಾಯುತಿ 17 ಸ್ಥಾನಗಳನ್ನು ಗೆದ್ದರೆ, MVA ಮೈತ್ರಿ 30 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಸ್ಪರ್ಧಿಸಿದ 17 ಸ್ಥಾನಗಳಲ್ಲಿ 13 ಮತ್ತು ಶಿವಸೇನೆ-UBT ಅದು ಸ್ಪರ್ಧಿಸಿದ 21 ಸ್ಥಾನಗಳಲ್ಲಿ 9 ರಲ್ಲಿ ಗೆದ್ದಿತ್ತು. ಮಹಾರಾಷ್ಟ್ರ
ಸದಸ್ಯ ಪಕ್ಷಗಳ ನಡುವೆ ಆರಂಭದಲ್ಲಿ ಸೀಟು ಹಂಚಿಕೆ ಕುರಿತು ಆಂತರಿಕ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಮತ್ತು ಕಾಂಗ್ರೆಸ್‌ನ ನಾನಾ ಪಟೋಲೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದರು. ಹೀಗಾಗಿ ನಾಯಕತ್ವದ ನಡುವೆ ತುರ್ತು ಚರ್ಚೆ ಕೂಡಾ ನಡೆದಿತ್ತು.
ಈ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ ಎಂವಿಎ ನಾಯಕರು ಶನಿವಾರ ದಕ್ಷಿಣ ಮುಂಬೈನ ಟ್ರೈಡೆಂಟ್ ಹೋಟೆಲ್‌ನಲ್ಲಿ ಒಂಬತ್ತು ಗಂಟೆಗಳ ಕಾಲ ಧೀರ್ಘ ಸಭೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ)ಯ ಇಬ್ಬರೂ ನಾಯಕರು ಎನ್‌ಸಿಪಿ (ಶರದ್ಚಂದ್ರ ಪವಾರ್) ಮುಖ್ಯಸ್ಥ ಶರದ್ ಪವಾರ್ ಅವರನ್ನು ಮಧ್ಯಸ್ಥಿಕೆ ವಹಿಸಲು ಮತ್ತು ವಿರೋಧ ಪಕ್ಷದ ಮೈತ್ರಿಯಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕೇಳಿಕೊಂಡಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ವಕ್ಫ್ ಸಭೆಯಲ್ಲಿ ಅಧ್ಯಕ್ಷರತ್ತ ಎಸೆದು ಬಾಟಲಿ ಎಸೆದ ಕಲ್ಯಾಣ್ ಬ್ಯಾನರ್ಜಿ ಸಮಿತಿಯಿಂದ ಅಮಾನತು
ವಕ್ಫ್ ಸಭೆಯಲ್ಲಿ ಅಧ್ಯಕ್ಷರತ್ತ ಎಸೆದು ಬಾಟಲಿ ಎಸೆದ ಕಲ್ಯಾಣ್ ಬ್ಯಾನರ್ಜಿ ಸಮಿತಿಯಿಂದ ಅಮಾನತು


