ಮಹಾರಾಷ್ಟ್ರದ ಜನರು ಬದಲಾವಣೆಯನ್ನು ಬಯಸುತ್ತಿದ್ದು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಅವರಿಗೆ ಪರ್ಯಾಯವನ್ನು ನೀಡುವ ನಿಟ್ಟಿನಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯು ಕೆಲಸ ಮಾಡಲಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಗುರುವಾರ ಹೇಳಿದ್ದಾರೆ. ಮಹಾರಾಷ್ಟ್ರ
ನವೆಂಬರ್ 20 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತಮ್ಮ ಸಾರ್ವಜನಿಕ ಸಭೆಗಳಿಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಜಾತಿ ಗಣತಿ ನಡೆಯಬೇಕು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎಂವಿಎ ಮೈತ್ರಿಯಲ್ಲಿ ಪ್ರಮುಖವಾಗಿ ಎನ್‌ಸಿಪಿ (ಎಸ್‌ಪಿ), ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಪಕ್ಷಗಳು ಇವೆ. ಬುಧವಾರ ನಾಗ್ಪುರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಜಾತಿ ಆಧಾರಿತ ಜನಗಣತಿ ನಡೆಯಲಿದೆ ಎಂದು ಹೇಳಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷವು “50%” ಮೀಸಲಾತಿ ಮಿತಿಯನ್ನು ಮೀರಿ ಮೀಸಲಾತಿ ನೀಡಲಿದೆ ಎಂದು ಭರವಸೆ ನೀಡಿದ್ದರು. ಮಹಾರಾಷ್ಟ್ರ
ತಮ್ಮ ಚುನಾವಣಾ ಪ್ರಚಾರದ ಕುರಿತು ಮಾತನಾಡಿದ ಶರದ್ ಪವಾರ್, “ಮಹಾರಾಷ್ಟ್ರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಅವರಿಗೆ ವಿಶ್ವಾಸವನ್ನು ನೀಡುವಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ನಾನು ಮತ್ತು ನನ್ನ ಎಲ್ಲಾ ಸಹಚರರು ಇಂದಿನಿಂದ ಮಹಾರಾಷ್ಟ್ರದಾದ್ಯಂತ ಜನರನ್ನು ತಲುಪುತ್ತಿದ್ದೇವೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, “ನನ್ನ ಪಕ್ಷದ ನಿಲುವನ್ನು ನಾನು ಹೇಳುತ್ತೇನೆ. ನಾವು ಕಳೆದ ಮೂರು ವರ್ಷಗಳಿಂದ ಜಾತಿ ಗಣತಿಗೆ ಒತ್ತಾಯಿಸುತ್ತಿದ್ದೇವೆ. ಜಾತಿ ಗಣತಿ ನಡೆಸಬೇಕು, ಅದು ದೇಶದ ಮುಂದೆ ನಿಜವಾದ ಸಮಸ್ಯೆಗಳನ್ನು ಇಡುತ್ತದೆ” ಎಂದು ಹೇಳಿದ್ದಾರೆ.
“ಪ್ರಮುಖವಾಗಿ, ಮೀಸಲಾತಿ ಮಿತಿಯನ್ನು ಹೆಚ್ಚಿಸುವ ನಿರ್ಧಾರವನ್ನು ಸುಲಭಗೊಳಿಸಲು ಜಾತಿ ಗಣತಿ ಸಹಾಯ ಮಾಡುತ್ತದೆ ಎಂದು ತೋರುತ್ತದೆ. ಜನಗಣತಿ ಪೂರ್ಣಗೊಂಡ ನಂತರ ಈ ಚಿತ್ರಣವು ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ, ರಾಹುಲ್ ಗಾಂಧಿ ಹೇಳುವಂತೆ ನಡೆದರೆ ಮೀಸಲಾತಿ ಶೇಕಡಾವಾರು ಹೆಚ್ಚಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಬಿಜೆಪಿ ನಾಯಕನ ಪಾದ ಮುಟ್ಟಿದ ನಿತೀಶ್; ಟೀಕಿಸಿದ ಲಾಲು ಪ್ರಸಾದ್
ಸಾರ್ವಜನಿಕವಾಗಿ ಬಿಜೆಪಿ ನಾಯಕನ ಪಾದ ಮುಟ್ಟಿದ ನಿತೀಶ್; ಟೀಕಿಸಿದ ಲಾಲು ಪ್ರಸಾದ್


