Homeಮುಖಪುಟಮಹಾರಾಷ್ಟ್ರ | ‘ಶ್ಯಾಡೋ’ ಜಾಹೀರಾತುಗಳಿಗಾಗಿ ₹3.32 ಕೋಟಿ ಖರ್ಚು ಮಾಡಿದ ಮಹಾಯುತಿ

ಮಹಾರಾಷ್ಟ್ರ | ‘ಶ್ಯಾಡೋ’ ಜಾಹೀರಾತುಗಳಿಗಾಗಿ ₹3.32 ಕೋಟಿ ಖರ್ಚು ಮಾಡಿದ ಮಹಾಯುತಿ

- Advertisement -
- Advertisement -

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಮುಂಚೆ ರಾಜ್ಯದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಒಕ್ಕೂಟಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚು ಹಣವನ್ನು ಸಾಮಾಜಿಕ ಮಾಧ್ಯಮದ ತಮ್ಮ ಅಧೀಕೃತ ಅಲ್ಲದ ಬೆಂಬಲಿಗ ಖಾತೆಗಳ (Shadow Account) ಮೂಲಕ ಜಾಹಿರಾತಿಗಾಗಿ ಖರ್ಚು ಮಾಡಿದೆ ಎಂದು ವರದಿಯೊಂದು ಹೇಳಿದೆ. ಮಹಾರಾಷ್ಟ್ರ

ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳು ಇದ್ದರೆ, ಪ್ರತಿಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ್ ಅಘಾಡಿಯಲ್ಲಿ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಇವೆ. ಮಹಾರಾಷ್ಟ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜಾರ್ಖಂಡ್ ಚುನಾವಣೆಯ ಜೊತೆಗೆ ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.

“ಮಹಾರಾಷ್ಟ್ರಾಸ್ ಶ್ಯಾಡೋ ಪಾಲಿಟಿಕ್ಸ್‌: ಹೌ ಮೆಟಾ ಪರ್ಮಿಟ್ಸ್, ಪ್ರಾಫಿಟ್ಸ್ ಫ್ರಂ ಆಂಡ್ ಪ್ರಮೋಟ್ ಶ್ಯಾಡೋ ಪೊಲಿಟಿಕಲ್ ಅಡ್ವಟೈಸ್‌ಮೆಂಟ್” ಎಂಬ ಶೀರ್ಷಿಕೆಯ ವರದಿಯನ್ನು ಟೆಕ್ ಜಸ್ಟಿಸ್ ಲಾ ಪ್ರಾಜೆಕ್ಟ್, ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್, ಇಂಡಿಯಾ ಸಿವಿಲ್ ವಾಚ್ ಇಂಟರ್‌ನ್ಯಾಶನಲ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ದಲಿತ ಐಕ್ಯತಾ ವೇದಿಕೆ ಜಂಟಿಯಾಗಿ ಪ್ರಕಟಿಸಿದೆ.

ಮಹಾಯುತಿ ಮೈತ್ರಿಕೂಟವು ತಮ್ಮ ಅಧೀಕೃತ ಅಲ್ಲದ ಬೆಂಬಲಿಗ ಖಾತೆಗಳ ಮೂಲಕ ಜಾಹೀರಾತಿಗಾಗಿ 3.32 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯು ಹೇಳಿದೆ. ಆದರೆ ಮಹಾ ವಿಕಾಸ್ ಅಘಾಡಿ ಆಗಸ್ಟ್ 5 ಮತ್ತು ನವೆಂಬರ್ 2 ರ ನಡುವೆ 50.47 ಲಕ್ಷ ರೂಪಾಯಿಗಳನ್ನು ಜಾಹಿರಾತಿಗಾಗಿ ಖರ್ಚು ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಜಾಹೀರಾತುಗಳು ಸೇರಿದಂತೆ ಎಲ್ಲಾ ಬೆಂಬಲಿಗ ರಾಜಕೀಯ ಜಾಹೀರಾತುಗಳು ಮತದಾನದ ಅವಧಿಯಲ್ಲಿ ಚುನಾವಣಾ ಆಯೋಗದಿಂದ ಪೂರ್ವ ಪ್ರಮಾಣೀಕರಣದ ಅಗತ್ಯವಿದೆ ಎಂದು ವರದಿಯು ಉಲ್ಲೇಖಿಸಿದೆ.

ಆಡಳಿತರೂಢ ಮಹಾಯುತಿ ಮೈತ್ರಿಯು ಕನಿಷ್ಠ ಐವತ್ತಾರು ಪೇಜ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸುತ್ತದೆ ಎಂದು ವರದಿ ಹೇಳಿದೆ. ಆದರೆ ಮಹಾ ವಿಕಾಸ್ ಅಘಾಡಿ ಕೇಲವ ನಾಲ್ಕು ಪೇಜ್‌ಗಳನ್ನು ನಡೆಸುತ್ತಿವೆ ಎಂದು ತಿಳಿಸಿದೆ. ಆಡಳಿತಾರೂಢ ಮಹಾಯುತಿ ಒಕ್ಕೂಟವು ತನ್ನ ಬೆಂಬಲಿಗ ಖಾತೆಗಳ ಮೂಲಕ ಸುಮಾರು 33,000 ಜಾಹೀರಾತುಗಳನ್ನು ಹಾಕಿದ್ದರೆ, ವಿಪಕ್ಷಗಳು ಮೈತ್ರಿಗೆ ಸಂಬಂಧಿಸಿದ ಪುಟಗಳಲ್ಲಿ ಆಗಸ್ಟ್ 5 ಮತ್ತು ನವೆಂಬರ್ 2 ರ ನಡುವೆ ಕೇವಲ 1,000 ಕ್ಕಿಂತ ಕಡಿಮೆ ಜಾಹೀರಾತುಗಳನ್ನು ನೀಡಿವೆ ಎಂದು ವರದಿ ಹೇಳಿದೆ.

ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 2.61 ಕೋಟಿ ರೂ. ಜಾಹಿರಾತಿಗಾಗಿ ಖರ್ಚು ಮಾಡಿದ್ದರೆ, ಶಿಂಧೆ ನೇತೃತ್ವದ ಶಿವಸೇನೆ 56.92 ಲಕ್ಷ ರೂ. ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ 35.86 ಲಕ್ಷ ರೂ.ಗಳನ್ನು ಜಾಹಿರಾತಿಗಾಗಿ ಖರ್ಚು ಮಾಡಿದೆ.

“ಬಿಜೆಪಿಯು ಒಂದೊಂದು ವಿಭಿನ್ನ ಥೀಮ್‌ನೊಂದಿಗೆ ಹಲವು ಬೆಂಬಲಿಗ ಖಾತೆಗಳನ್ನು ನಡೆಸುತ್ತಿದೆ” ಎಂದು ವರದಿ ಹೇಳಿದೆ.

“ಬಿಜೆಪಿಯ ಬೆಂಬಲಿಗ ಪುಟಗಳ ಮೂಲಕ ಹರಿಬಿಡಲಾದ ವಿಷಯವು ಇತರರಿಗಿಂತ ಭಿನ್ನವಾಗಿದ್ದು, ಅದು ಬಹಿರಂಗವಾಗಿ ಇಸ್ಲಾಮೋಫೋಬಿಕ್, ಭಯ ಹುಟ್ಟಿಸುವ ಮತ್ತು ದ್ವೇಷದ ಮಾತುಗಳಿಂದ ತುಂಬಿರುವ ಜಾಹಿರಾತುಗಳಿಂದ ತುಂಬಿದೆ. ಈ ಜಾಹೀರಾತುಗಳು ಮೆಟಾದ ನೀತಿಗಳನ್ನು ಉಲ್ಲಂಘಿಸುತ್ತಿವೆ ಎಂಬುದಕ್ಕೆ ಹಲವು ಪುರಾವೆಗಳ ಹೊರತಾಗಿಯೂ, ಮೆಟಾ ಅವುಗಳನ್ನು ತೆಗೆದುಹಾಕುವುದಿಲ್ಲ. ಜೊತೆಗೆ ಅಧಿಕೃತ ಜಾಹೀರಾತು ಪುಟಗಳಿಗಿಂತ ಹೆಚ್ಚಾಗಿ ಇದನ್ನು ಪ್ರಚಾರ ಮಾಡುತ್ತದೆ” ಎಂದು ವರದಿ ಹೇಳಿದೆ.

ಬಿಜೆಪಿಯ ಬೆಂಬಲಿಗ ಖಾತೆಗಳು ದ್ವೇಷಪೂರಿತ ಮತ್ತು ಕೋಮು ವಿಭಜಕ ವಿಷಯವನ್ನು ಮುಂದಿಡುತ್ತಿವೆ ಎಂದು ವರದಿ ಹೇಳಿದೆ.

“ಬಿಜೆಪಿಯ ಅಧಿಕೃತ ಪುಟವು ಪ್ರಾಥಮಿಕವಾಗಿ ಅಭಿವೃದ್ಧಿ ಮತ್ತು ಕೃಷಿಯ ಮೇಲೆ ಜಾಹೀರಾತುಗಳನ್ನು ಪ್ರಕಟಿಸುತ್ತದೆ. ಇದರಲ್ಲಿ ಮಹಾರಾಷ್ಟ್ರ ಸರ್ಕಾರದ ಅಧಿಕೃತ ಪುಟಗಳು ಹೇಳಿರುವ ವಿಷಯಗಳಿಗೆ ನಿಕಟ ಹೋಲಿಕೆಯನ್ನು ಹೊಂದಿರುತ್ತದೆ. ಆದರೆ, ಅವರ ಬೆಂಬಲಿಗ ಬಿಜೆಪಿ ಖಾತೆಗಳ ಜಾಲವು ಪ್ರಧಾನವಾಗಿ ಜಾತಿ ಕೋಟಾದ ಸುತ್ತ ನಿರೂಪಣೆಗಳನ್ನು ಹುಟ್ಟುಹಾಕುತ್ತದೆ. ವಿಪಕ್ಷಗಳು ಮರಾಠರ ಹಕ್ಕುಗಳನ್ನು ಎತ್ತಿಹಿಡಿಯುತ್ತಿಲ್ಲ ಎಂದು ದಾಳಿ ಮಾಡಲು ಅದನ್ನು ಬಳಸುತ್ತದೆ.” ಎಂದು ವರದಿ ಉಲ್ಲೇಖಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಮಹಾ ವಿಕಾಸ್ ಅಘಾಡಿ ನಡೆಸುತ್ತಿರುವ ಬೆಂಬಲಿಗ ಪುಟಗಳಲ್ಲಿ ಯಾವುದೇ ದ್ವೇಷ ಭಾಷಣ ಅಥವಾ ಕೋಮುವಾದದ ವಿಷಯಗಳು ಹೊಂದಿರುವುದಿಲ್ಲ ಎಂದು ಅದು ಹೇಳಿಕೊಂಡಿದೆ.

ಬಿಜೆಪಿಯ ಬೆಂಬಲಿಗ ಪುಟಗಳು ಬಿಜೆಪಿಯ ಅಧಿಕೃತ ಪುಟಕ್ಕಿಂತ ಹತ್ತು ಪಟ್ಟು ಹೆಚ್ಚಿನ ಕಾಮೆಂಟ್‌ಗಳನ್ನು ಪಡೆಯುತ್ತವೆ ಎಂದು ವರದಿ ಹೇಳಿದೆ. “ಇಂತದ್ದೆ ರಾಜಕೀಯ ಪಕ್ಷಗಳ ಪುಟ ಎಂದು ತಿಳಿಯದಂತೆ ರಾಜಕೀಯವಾಗಿ ಸೂಕ್ಷ್ಮ ವಿಷಯವನ್ನು ಪ್ರಸಾರ ಮಾಡಲು ಇಂತಹ ಬೆಂಬಲಿಗ ಖಾತೆಗಳನ್ನು ಬಳಸಲಾಗುತ್ತದೆ” ಎಂದು ವರದಿ ಹೇಳಿದೆ.

ಇದನ್ನೂ ಓದಿ: ಮಧ್ಯಪ್ರದೇಶ: ಚುನಾವಣೋತ್ತರ ಹಿಂಸಾಚಾರದಲ್ಲಿ ದಲಿತರ ಗ್ರಾಮಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಮಧ್ಯಪ್ರದೇಶ: ಚುನಾವಣೋತ್ತರ ಹಿಂಸಾಚಾರದಲ್ಲಿ ದಲಿತರ ಗ್ರಾಮಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...