Homeಮುಖಪುಟಮಹಾರಾಷ್ಟ್ರ | ಕ್ಯಾಂಟೀನ್ ಸಿಬ್ಬಂದಿಗೆ ಥಳಿಸಿದ ಶಿವಸೇನೆ ಶಾಸಕ

ಮಹಾರಾಷ್ಟ್ರ | ಕ್ಯಾಂಟೀನ್ ಸಿಬ್ಬಂದಿಗೆ ಥಳಿಸಿದ ಶಿವಸೇನೆ ಶಾಸಕ

- Advertisement -
- Advertisement -

ಮುಂಬೈನ ಸರ್ಕಾರಿ ಕ್ಯಾಂಟೀನ್‌ವೊಂದರಲ್ಲಿ ಹಳಸಿದ ಆಹಾರ ನೀಡಿದ್ದಕ್ಕೆ ಆಡಳಿತಾರೂಢ ಶಿವಸೇನೆ ಶಾಸಕ ಸಂಜಯ್‌ ಗಾಯಕ್ವಾಡ್ ಸಿಬ್ಬಂದಿಗೆ ಥಳಿಸಿದ ಘಟನೆ ನಡೆದಿದೆ.

ಶಿವಸೇನೆ (ಯುಬಿಟಿ)ಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಗಾಯಕ್ವಾಡ್ ಕ್ಯಾಂಟೀನ್ ಸಿಬ್ಬಂದಿಯ ಕಪಾಳ ಬಾರಿಸಿರುವುದು ಮತ್ತು ಬಲವಾಗಿ ಗುದ್ದಿರುವುದನ್ನು ನೋಡಬಹುದು.

“ಶಾಹ್ ಸೇನಾದ ಶಾಸಕ ಸಂಜಯ್ ಗಾಯಕ್ವಾಡ್ ಅವರನ್ನು ನೋಡಿ. ಕಳೆದ ವರ್ಷ, ಅವರು ರಾಹುಲ್ ಗಾಂಧಿಯವರ ನಾಲಿಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು ಮತ್ತು ಬೆದರಿಕೆ ಹಾಕಿದ್ದರು. ಈಗ ಆ ವ್ಯಕ್ತಿ ಬಡ, ಅಸಹಾಯಕ ಕ್ಯಾಂಟೀನ್ ಸಿಬ್ಬಂದಿಗೆ ಹೊಡೆಯುತ್ತಿರುವುದು ಕಂಡುಬಂದಿದೆ. ಆದರೆ, ಸ್ವಲ್ಪ ಕಾಯಿರಿ – ಅವರು ಬಿಜೆಪಿ ಮಿತ್ರರಾಗಿರುವುದರಿಂದ ಯಾವುದೇ ಟಿವಿ ಸುದ್ದಿಗಳ ಆರ್ಭಟಿಸುತ್ತಿಲ್ಲ” ಎಂದು ಪ್ರಿಯಾಂಕಾ ಚತುರ್ವೇದಿ ಬರೆದುಕೊಂಡಿದ್ದಾರೆ.

ಈ ನಡುವೆ, ಹಲ್ಲೆ ಮಾಡಿರುವ ಬಗ್ಗೆ ತನಗೆ ‘ಯಾವುದೇ ವಿಷಾದವಿಲ್ಲ’ ಮತ್ತು ಯಾರಾದರೂ ಪ್ರಜಾಪ್ರಭುತ್ವದ ಭಾಷೆಯನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ ‘ಇದನ್ನು ಪುನರಾವರ್ತಿಸುತ್ತೇನೆ’ ಎಂದು ಶಾಸಕ ಗಾಯಕ್ವಾಡ್ ಹೇಳಿದ್ದಾರೆ.

“ರಾಜ್ಯದ ವಿವಿದೆಡೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಕಾರ್ಮಿಕರು, ಅಧಿಕಾರಿಗಳು, ಎಲ್ಲರೂ ಇಲ್ಲಿಗೆ ಆಹಾರ ಸೇವಿಸಲು ಆಗಮಿಸುತ್ತಾರೆ. ಇದು ಸರ್ಕಾರಿ ಕ್ಯಾಂಟೀನ್ ಆಗಿರುವುದರಿಂದ ಇಲ್ಲಿ ಆಹಾರದ ಗುಣಮಟ್ಟ ಉತ್ತಮವಾಗಿರಬೇಕು. ನಾನು ಮಾಡಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ. ನಾನು ಸಾರ್ವಜನಿಕ ಪ್ರತಿನಿಧಿ” ಎಂದು ಗಾಯಕ್ವಾಡ್ ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಯಾರಾದರೂ ಪ್ರಜಾಪ್ರಭುತ್ವ ಭಾಷೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾದಾಗ ನಾನು ಈ ರೀತಿಯ ಭಾಷೆಯನ್ನು ಬಳಸಬೇಕಾಗುತ್ತದೆ. ಅವರು ಮರಾಠಿ ಮಾತನಾಡುತ್ತಾರಾ ಅಥವಾ ಹಿಂದಿ ಮಾತನಾಡುತ್ತಾರಾ ಎಂದು ನೋಡಿ ನಾನು ಥಳಿಸಲಿಲ್ಲ” ಎಂದಿದ್ದಾರೆ.

ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ದೇನೆ. ನಾನು ಅದನ್ನು ಪುನರಾವರ್ತಿಸುತ್ತೇನೆ ಶಾಸಕ ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ.

ಕಳೆದ ವರ್ಷ, ರಾಹುಲ್ ಗಾಂಧಿಯವರ ನಾಲಿಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸುವ ಮೂಲಕ ಗಾಯಕ್ವಾಡ್ ಸುದ್ದಿಯಾಗಿದ್ದರು.

ಈ ವರ್ಷದ ಮಹಾರಾಷ್ಟ್ರದಲ್ಲಿ ಭಾಷಾ ವಿವಾದ ಭುಗಿಲೆದ್ದಿರುವ ಮಧ್ಯೆ ಶಾಸಕ ಹಲ್ಲೆ ಮಾಡಿದ್ದಾರೆ. ಹಾಗಾಗಿ, ಇಲ್ಲಿ ಹಿಂದಿ vs ಮರಾಠಿ ಚರ್ಚೆಗಳು ತೀವ್ರಗೊಂಡಿದೆ. ರಾಜ್ಯದಲ್ಲಿ ಹಿಂದಿ ಮಾತನಾಡುವ ವ್ಯಕ್ತಿಗಳಿಗೆ ರಾಜಕೀಯ ನಾಯಕರು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳವಾರ ಮುಂಬೈ ಬಳಿಯ ಮೀರಾ ಭಯಂದರ್ ಪ್ರದೇಶದಲ್ಲಿ ಮರಾಠಿ ಅಸ್ಮಿತೆ ರಕ್ಷಿಸಲು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಮರಾಠಿಯಲ್ಲಿ ಮಾತನಾಡಲು ನಿರಾಕರಿಸಿದ್ದಕ್ಕಾಗಿ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ ನಂತರ ಉಂಟಾದ ರಾಜಕೀಯ ಉದ್ವಿಗ್ನತೆಯ ನಡುವೆ ಪ್ರತಿಭಟನೆ ನಡೆದಿದೆ.

ಗುಜರಾತ್‌ನಲ್ಲಿ ಮತ್ತೊಂದು ಸೇತುವೆ ಕುಸಿತ: ನದಿಗೆ ಬಿದ್ದ ವಾಹನಗಳು; 9 ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -