Homeಮುಖಪುಟಮಹಾರಾಷ್ಟ್ರ| ಬಂಗಾಳಿ ಭಾಷೆ ಮಾತನಾಡಿದ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲೆ ಹಲ್ಲೆ

ಮಹಾರಾಷ್ಟ್ರ| ಬಂಗಾಳಿ ಭಾಷೆ ಮಾತನಾಡಿದ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲೆ ಹಲ್ಲೆ

- Advertisement -
- Advertisement -

ತಮ್ಮ ಮಾತೃ ಭಾಷೆ ಬಂಗಾಳಿಯಲ್ಲಿ ಮಾತನಾಡಿದ್ದಕ್ಕಾಗಿ ಬಾಂಗ್ಲಾದೇಶೀಯರು ಎಂದು ಶಂಕಿಸಿ ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಮೂವರು ವಲಸೆ ಕಾರ್ಮಿಕರ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರು ತಮ್ಮ ರಾಜ್ಯಕ್ಕೆ ಹಿಂತಿರುಗುತ್ತಿದ್ದಾಗ ಬಿಜೆಪಿ ಆಡಳಿತ ರಾಜ್ಯದಲ್ಲಿ ದಾಳಿ ನಡೆದಿದೆ.

ದಿಲೀಪ್ ಬಾಗ್ಡಿ, ಸಮೀರ್ ಬರುಯಿ ಮತ್ತು ಪಾಂಡಬೇಶ್ವರದ ಮತ್ತೊಬ್ಬ ಸಹೋದ್ಯೋಗಿ ಎಂದು ಗುರುತಿಸಲಾದ ಸಂತ್ರಸ್ತ ಕಾರ್ಮಿಕರು, ಮಹಾರಾಷ್ಟ್ರದಿಂದ ಪಶ್ಚಿಮ ಬಂಗಾಳಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಕೆಲವು ಸ್ಥಳೀಯ ಜನರು, ನಾವು ಬಂಗಾಳಿ ಮಾತನಾಡುವುದನ್ನು ಕೇಳಿದಾಗ ತೊಂದರೆ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ. ಕಾರ್ಮಿಕರ ಪ್ರಕಾರ, ನಾವು ಮೊದಲು ಪ್ರಯಾಣ ಟಿಕೆಟ್‌ಗಳನ್ನು ಖರೀದಿಸುವಾಗ ಹಿಂದಿಯಲ್ಲಿ ಮಾತನಾಡುತ್ತಿದ್ದೆವು, ಆದರೆ ಖಾಸಗಿಯಾಗಿ ಮಾತನಾಡುವಾಗ ಬಂಗಾಳಿ ಮಾತಾಡುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ.

ಬಂಗಾಳಿ ಮಾತನಾಡುತ್ತಿದ್ದ ಕಾರ್ಮಿಕರನ್ನು ತಡೆದ ಸ್ಥಳೀಯರು ಅವರ ಗುರುತನ್ನು ಪ್ರಶ್ನಿಸಿದರು. ನಾವು ಪಶ್ಚಿಮ ಬಂಗಾಳದ ಭಾರತೀಯ ನಾಗರಿಕರು ಎಂದು ಪದೇ ಪದೇ ಹೇಳಿಕೊಂಡರೂ, ಸ್ಥಳೀಯರು ಅವರನ್ನು ಬಾಂಗ್ಲಾದೇಶಿಗಳು ಎಂದು ಒತ್ತಾಯಿಸಿ ಥಳಿಸಿದರು ಎಂದು ಅವರು ಆರೋಪಿಸಿದರು. ನಮ್ಮನ್ನು ಬಲವಂತವಾಗಿ ಬಸ್‌ನಿಂದ ಇಳಿಸಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ, ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಲಾಯಿತು ಎಂದು ಕಾರ್ಮಿಕರು ಹೇಳಿದರು.

“ನಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸಿದ ನಂತರವೂ, ನಾವು ಭಾರತೀಯರು ಎಂದು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು” ಎಂದು ಸಮೀರ್ ಬರುಯಿ ಘಟನೆಯನ್ನು ವಿವರಿಸುತ್ತಾ ಹೇಳಿದರು.

ಕಾರ್ಮಿಕರು ತಮ್ಮ ಮೇಲೆ ತೀವ್ರ ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಸಿ ಚಹಾವನ್ನು ತಲೆಯ ಮೇಲೆ ಸುರಿದು, ತಲೆ ಮತ್ತು ಹೊಟ್ಟೆಗೆ ಮೇಲೆ ಒದ್ದರು. ದಾಳಿ ತಡೆಯುವ ಪ್ರಯತ್ನದಲ್ಲಿ, ಓರ್ವ ಕಾರ್ಮಿಕ ಅಸ್ವಸ್ಥನಾದಂತೆ ನಟಿಸಿದ ನಂತರವೂ ಹಲ್ಲೆ ಮುಂದುವರೆಯಿತು ಎಂದು ತಮ್ಮ ಅಸಹಾಯಕ ಸ್ಥಿತಿ ಕುರಿತು ಮಾತನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ, ವಿಶೇಷವಾಗಿ ಒಡಿಶಾ ಮತ್ತು ರಾಜಸ್ಥಾನ ಸೇರಿದಂತೆ ಬಿಜೆಪಿ ಆಡಳಿತವಿರುವ ಪ್ರದೇಶಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ಕಿರುಕುಳ ಮತ್ತು ಹಲ್ಲೆ ನಡೆಯುತ್ತಿರುವ ಬಗ್ಗೆ ಹೆಚ್ಚುತ್ತಿರುವ ದೂರುಗಳ ಮಧ್ಯೆ ಈ ಘಟನೆ ನಡೆದಿದೆ.

ಕಾರ್ಮಿಕರು ತವರಿಗೆ ಹಿಂದಿರುಗಿದ ನಂತರ, ಪಾಂಡಬೇಶ್ವರ ಶಾಸಕ ನರೇಂದ್ರನಾಥ್ ಚಕ್ರವರ್ತಿ ಭಾನುವಾರ ಅವರನ್ನು ಭೇಟಿ ಮಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ದೇಶಾದ್ಯಂತ ಬಂಗಾಳಿ ಮಾತನಾಡುವ ಜನರಿಗೆ ಹೆಚ್ಚುತ್ತಿರುವ ಪ್ರತಿಕೂಲ ವಾತಾವರಣಕ್ಕೆ ಅವರು ಕೇಂದ್ರ ಸರ್ಕಾರವನ್ನು ದೂಷಿಸಿದರು.

“ಇದು ಬಂಗಾಳಿಗಳ ವಿರುದ್ಧ ತೀವ್ರ ಕ್ರೌರ್ಯದ ಪ್ರದರ್ಶನವಾಗಿದೆ. ಪಶ್ಚಿಮ ಬಂಗಾಳವು ದೇಶದ ಎಲ್ಲ ಭಾಗಗಳ ಜನರನ್ನು ಸ್ವಾಗತಿಸಿದರೂ, ಬಂಗಾಳಿಗಳನ್ನು ಬೇರೆಡೆ ಗುರಿಯಾಗಿಸಲಾಗುತ್ತಿದೆ. ಜನರು ಇದನ್ನು ಕ್ಷಮಿಸುವುದಿಲ್ಲ” ಎಂದು ಚಕ್ರವರ್ತಿ ಹೇಳಿದರು.

ಆರೋಪಗಳಿಗೆ ಪ್ರತಿಕ್ರಿಯಿಸಿದ ಸ್ಥಳೀಯ ಬಿಜೆಪಿ ನಾಯಕ ದಿಲೀಪ್ ಚಕ್ರವರ್ತಿ, ಪಶ್ಚಿಮ ಬಂಗಾಳ ಸರ್ಕಾರವನ್ನು ದೂಷಿಸಿ, ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಮಹಾರಾಷ್ಟ್ರ, ಗುಜರಾತ್ ಮತ್ತು ಛತ್ತೀಸ್‌ಗಢಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯ ಹಿಂದೆ ರಾಜಕೀಯ ಹಿನ್ನೆಲೆ ಇರಬಹುದು ಎಂದು ಬಿಜೆಪಿ ಸೂಚಿಸಿದ್ದು, ಕಾರ್ಮಿಕರು ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಇದೆ ಎಂದು ಆರೋಪಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾನೂನುಬಾಹಿರ ಹತ್ಯೆ ಆರೋಪ : ಸಿಆರ್‌ಪಿಎಫ್ ಅಧಿಕಾರಿಗೆ ಶೌರ್ಯ ಚಕ್ರ ನೀಡಿರುವುದನ್ನು ಖಂಡಿಸಿದ ಕುಕಿ-ಝೋ ಗುಂಪುಗಳು

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಅಧಿಕಾರಿಯೊಬ್ಬರು ತಮ್ಮ ಸಮುದಾಯದ ಹತ್ತು ಪುರುಷರ "ಕಾನೂನುಬಾಹಿರ ಹತ್ಯೆ"ಯಲ್ಲಿ ಭಾಗಿಯಾಗಿದ್ದಾರೆ ಎಂದು ಮಣಿಪುರದ ಕುಕಿ-ಝೋ ಸಂಘಟನೆಗಳು ಸೋಮವಾರ (ಜ.26) ಆರೋಪಿಸಿದ್ದು, ಆ ಅಧಿಕಾರಿಗೆ ಶೌರ್ಯ ಚಕ್ರ...

ಉತ್ತರ ಪ್ರದೇಶ: ಸೋನಭದ್ರಾದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು 

ಸೋನಭದ್ರ: ರಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ರವಾರ್ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೋಮವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕ್ರಾವರ್ ಗ್ರಾಮದ ಪಂಚಾಯತ್ ಕಟ್ಟಡದ ಬಳಿ...

ಬುಡಕಟ್ಟು ರೈತರ ಬೃಹತ್ ಮೆರವಣಿಗೆ: ಬೇಡಿಕೆಗಳ ಕುರಿತು ಸಿಪಿಐ(ಎಂ)-ಎಐಕೆಎಸ್ ನಿಯೋಗದೊಂದಿಗೆ ಮುಖ್ಯಮಂತ್ರಿ ಫಡ್ನವೀಸ್ ಮಾತುಕತೆ

ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ)-ಎಐಕೆಎಸ್ ನೇತೃತ್ವದಲ್ಲಿ ನಾಸಿಕ್‌ನಿಂದ ಮುಂಬೈಗೆ ಸಾವಿರಾರು ರೈತರು ಮತ್ತು ಬುಡಕಟ್ಟು ನಿವಾಸಿಗಳು ನಡೆಸಿದ ದೀರ್ಘ ಮೆರವಣಿಗೆ ಇಂದು ಜನವರಿ 27 ರಂದು ಮುಂಬೈನ ಮಂತ್ರಾಲಯ...

‘ಭಾರತದಲ್ಲಿ ಬಿಜೆಪಿ ದಾಳಿಯನ್ನು ಎದುರಿಸಲು ‘ದೀದಿ’ಗೆ ಮಾತ್ರ ಸಾಧ್ಯ’: ಅಖಿಲೇಶ್ ಯಾದವ್ 

ಕೋಲ್ಕತ್ತಾ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ "ಬಿಜೆಪಿಯ ದಾಳಿಯನ್ನು ಎದುರಿಸುವಲ್ಲಿನ ಧೈರ್ಯ"ಕ್ಕಾಗಿ ಟಿಎಂಸಿ ಮುಖ್ಯಸ್ಥೆಯನ್ನು ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ...

ಬದರಿನಾಥ್-ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ ಸಾಧ್ಯತೆ

ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶ ಅನುಮತಿಸಬಹುದು. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಎರಡು ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು...

ವಿಬಿ-ಜಿ ರಾಮ್ ಜಿ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ (ಜ.27) ಬೆಂಗಳೂರಿನ ಫ್ರೀಡಂ...

ಯುಸಿಸಿಯಲ್ಲಿ 18 ಬದಲಾವಣೆ ಮಾಡಿದ ಉತ್ತರಾಖಂಡ್ ಸರ್ಕಾರ; ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ

ವಿವಾಹ, ವಿಚ್ಛೇದನ, ಲಿವ್-ಇನ್ ಸಂಬಂಧಗಳು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ ಗುರಿಯನ್ನು ಹೊಂದಿರುವ ಸುಮಾರು ಹದಿನೆಂಟು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯ ಹಲವಾರು ನಿಬಂಧನೆಗಳನ್ನು ಮಾರ್ಪಡಿಸಲು ಉತ್ತರಾಖಂಡ ಸರ್ಕಾರ...

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮಗಾಂಧಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿಯವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕೇಂದ್ರ ಸರ್ಕಾರ ನರೇಗಾ ಬದಲಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್‌ ಜಿ ಕಾಯ್ದೆ ವಿರುದ್ದ ಬೆಂಗಳೂರಿನ ಸ್ವಾತಂತ್ರ್ಯ...

ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಗಿರಿದಿಹ್: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಇಬ್ಬರು ಬುಡಕಟ್ಟು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಪಿರ್ತಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಲಾದಿಹ್ ಪ್ರದೇಶದಲ್ಲಿ ಈ ಘಟನೆ...

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ : ಪ್ರಬಲ ಜಾತಿಯವರಿಂದ ತೀವ್ರ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಪ್ರಬಲ ಜಾತಿಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊಸ ನಿಯಮಗಳ 'ಜಾತಿ ಆಧಾರಿತ ತಾರತಮ್ಯ' ಎಂಬುವುದರ...