Homeಕರ್ನಾಟಕತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮೈದಾಳಕೆರೆಗೆ ವಿಷಕಾರಿ ಪ್ಲಾಸ್ಟಿಕ್ ಬೂದಿ!

ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮೈದಾಳಕೆರೆಗೆ ವಿಷಕಾರಿ ಪ್ಲಾಸ್ಟಿಕ್ ಬೂದಿ!

- Advertisement -
- Advertisement -

ಸ್ವಾತಂತ್ರ್ಯಪೂರ್ವದಿಂದಲೂ ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಮೈದಾಳ ಕೆರೆ ಪ್ರದೇಶ ಇದೀಗ ಮಲಿನಗೊಳ್ಳುತ್ತಿದೆ. ಕೆಲವೇ ಮಂದಿಯ ಕುಕೃತ್ಯದಿಂದ ಕುಡಿಯುವ ನೀರು ಮತ್ತು ಪರಿಸರಕ್ಕೆ ಧಕ್ಕೆ ಒದಗಿದೆ. ಕೆರೆಯ ಸಮೀಪವೇ ಕೈಗಾರಿಕ ಪ್ರದೇಶಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ಸುಡುವ ಮೂಲಕ ಸುಂದರ ಪರಿಸರವನ್ನು ಹಾಳುಗೆಡವಲಾಗುತ್ತಿದೆ. ಪ್ಲಾಸ್ಟಿಕ್ ಬೂದಿ ಗಾಳಿಯಲ್ಲಿ ತೇಲಿಹೋಗಿ ಮೈದಾಳ ಕರೆಯ ನೀರು ಸೇರುತ್ತಿದ್ದು ವಿಷಕಾರಿಯಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸ ಪ್ರಸಿದ್ದ ಮಂದರಗಿರಿಯ ಹಿಂಭಾಗದಲ್ಲಿರುವ ಕೆರೆಯ ಆಸುಪಾಸಿನಲ್ಲೇ ಪರಿಸರ ವಿರೋಧಿ ಚಟುವಟಿಕೆಗಳು ನಡೆಯುತ್ತಿದೆ. ಕೆರೆಯ  ಅಂಗಳಕ್ಕೆ ಹೊಂದಿಕೊಂಡಂತೆ ನಾಲ್ಕೈದು ಕಡೆ ಪ್ಲಾಸ್ಟಿಕ್ ತ್ಯಾಜ್ಯ ಸುಡುತ್ತಿದ್ದು ಹಾರುಬೂದಿ ಕೆರೆ ಸೇರಿ ನೀರು ವಿಷಪೂರಿತಗೊಳ್ಳುತ್ತಿದೆ. ಆದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೈದಾಳ ಕೆರೆ

ಮೈದಾಳ ಕೆರೆಯ ಭಾಗ ‘ಅತ್ಯಂತ ಸೂಕ್ಷ ಜೈವಿಕ’ ಪ್ರದೇಶ. ತುಮಕೂರು ನಗರದ 15 ಬಡಾವಣೆಗಳಿಗೆ ಕುಡಿಯುವ ನೀರು ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಕೆಲ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇಂಥ ಸೂಕ್ಷ್ಮ ಪ್ರದೇಶದಲ್ಲಿ ಬೇರೆಬೇರೆ ಕಡೆಯಿಂದ ಪ್ಲಾಸ್ಟಿಕ್ ತಂದು ರಾಶಿ ಹಾಕಿ ಸುಡುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಅದರ ಹಾರುಬೂದಿ ನೀರು ಸೇರುತ್ತಿದೆ.

ಈ ಕುರಿತು ಸ್ಥಳೀಯ ನಿವಾಸಿ ಶಿವಶಂಕರ್‌ರವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ರಾಶಿ ಹಾಕಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಗುಂಡಿ ಯಲ್ಲಿ ಹಾಕಿ ಸುಡಲಾಗುತ್ತಿದೆ. ಹೀಗೇಕೆ ಸುಡುತ್ತಾರೆ ಎಂಬುದು ತಿಳಿಯುತ್ತಿಲ್ಲ. ಇದ್ದಿಲು ಮಾಡಲು ಇರಬಹುದು. ಕೈಗಾರಿಕಾ ಪ್ರದೇಶದ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಲ್ಲಿ ಸುಡುವುದರಿಂದ ಸೂಕ್ಷ್ಮ ಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದಟ್ಟಹೊಗೆ ಏಳುವುದರಿಂದ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಮೈದಾಳ ಕೆರೆಯ ನೀರು ಮಾಲಿನ್ಯವಾಗುತ್ತದೆ. ಜನರು ವಿಷಯುಕ್ತ ನೀರನ್ನು ಸೇವಿಸಬೇಕಾಗುತ್ತದೆ. ಇದರ ಬಗ್ಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿ ಮೌನ ವಹಿಸಿದೆ ಎಂದು ಆರೋಪಿಸಿದ್ದಾರೆ.

ಮಂದರಗಿರಿ ಮತ್ತು ಮೈದಾಳಕೆರೆ ಪ್ರಕೃತಿ ಸೌಂದರ್ಯಕ್ಕೆ ಹೇಳಿ ಮಾಡಿದ ಜಾಗ. ಆದರೆ ಕೆರೆಯ ಪಕ್ಕದಲ್ಲೇ ಇರುವ ಗುಡ್ಡಗಳಿಂದ ದೊಡ್ಡದೊಡ್ಡ ಗುಂಡುಗಳನ್ನು ಎತ್ತುವಳಿ ಮಾಡಲಾಗುತ್ತಿದೆ. ಮನ ಬಂದಂತೆ ಗುಂಡಿಗಳನ್ನು ತೋಡಲಾಗುತ್ತಿದೆ. ಇದರಿಂದ ಜೋರು ಮಳೆ ಬಂದರೆ ಗುಡ್ಡ ಕೊರೆತ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಗುಡ್ಡದ ನೀರು ಕೆರೆಗೆ ಹರಿಯುವುದರಿಂದ ಮಣ್ಣು ಕೆರೆಗೆ ಸೇರಿ ಹೂಳು ತುಂಬುತ್ತದೆ. ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಇಂತಹ ಸಮಸ್ಯೆ ತಲೆದೋರುವ ಮೊದಲು ಜಿಲ್ಲಾಡಳಿತ ಮತ್ತು ಸಣ್ಣನೀರಾವರಿ ಇಲಾಖೆ ಎಚ್ಚೆತ್ತುಕೊಂಡು ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಜಲ, ವಾಯುಮಾಲಿನ್ಯ ಉಂಟಾಗುತ್ತಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿದ್ರಿಸುತ್ತಿದೆ. ಇಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯಲು ಮೈದಾಳ ಗ್ರಾಮ ಪಂಚಾಯಿತಿಯವರು ಶಾಮೀಲಾಗಿದ್ದಾರೆ. ಪಿಡಿಒ ಬಂದಷ್ಟೇ ಸಾಕು ಎಂಬಂತೆ ನೋಡಿಯೂ ನೋಡದಂತೆ ಇದ್ದಾರೆ. ಕ್ರಮ ಕೈಗೊಳ್ಳಬೇಕಾದವರು ಕೈಕಟ್ಟಿ ಕುಳಿತಿದ್ದಾರೆ ಎಂದು ಆರೋಪಿಸಿರುವ ಸುತ್ತಮುತ್ತಲ ಗ್ರಾಮಸ್ಥರು ಕೂಡಲೇ ಪರಿಸರ ವಿರೋಧಿ ಚಟುವಟಿಕೆಗಳನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ: ಮಧ್ಯಪ್ರದೇಶದ ದಲಿತ ದಂಪತಿಯ ಮೇಲಿನ ಅಮಾನವೀಯ ಹಲ್ಲೆಗೆ ತೀವ್ರ ಖಂಡನೆ: ಡಿಸಿ, ಎಸ್ಪಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...