ಇಂಫಾಲ್ : ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರನ್ನು ಗುರುತಿಸಲು NRC (National Register of Citizens) ಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕೆಂದು ಮೈತೇಯಿ ಗುಂಪಿನ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI)ಯು ಭಾನುವಾರ ಕೇಂದ್ರಕ್ಕೆ ಒತ್ತಾಯಿಸಿದೆ.
ಅಕ್ರಮ ವಲಸೆ ಮತ್ತು ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಸಾಗಣೆಯನ್ನು ನಿಲ್ಲಿಸಲು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು COCOMI ಸರ್ಕಾರವನ್ನು ಒತ್ತಾಯಿಸಿದೆ.
ಈ ತಿಂಗಳ ಆರಂಭದಲ್ಲಿ ಕಡಂಗ್‌ಬಂದ್‌ನಲ್ಲಿ ಹೊಸ ಬಾಂಬ್ ದಾಳಿಗಳ ಹೊರತಾಗಿಯೂ ಕೇಂದ್ರವು ಯಾವುದೇ ಕ್ರಮಕೈಗೊಂಡಿಲ್ಲ. ಇದು ರಾಜ್ಯದ ಜನರನ್ನು ದೇಶದ ನಾಗರಿಕರೆಂದು ಪರಿಗಣಿಸಲಾಗುತ್ತಿಲ್ಲ ಎಂದು ಸೂಚಿಸುತ್ತದೆ ಎಂದು ಸಂಘಟನೆಯ ಸಂಯೋಜಕ ಸೋಮೆಂಡ್ರೊ ಥೋಕ್‌ಚೋಮ್ ಹೇಳಿದ್ದಾರೆ.
ಜನವರಿ 14ರಂದು ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ಕಡಂಗ್‌ಬಂದ್ ಪ್ರದೇಶದಲ್ಲಿ ಶಂಕಿತ ಉಗ್ರಗಾಮಿಗಳು ಬಾಂಬ್ ದಾಳಿ ನಡೆಸಿದ್ದರು. ಕೇಂದ್ರವು ನಿರ್ದಿಷ್ಟ ಕ್ರಮ ತೆಗೆದುಕೊಂಡು ಕುಕಿ ಉಗ್ರಗಾಮಿಗಳ ವಿರುದ್ಧ ಮಿಲಿಟರಿ ಕ್ರಮಕೈಗೊಂಡಾಗ ಮಾತ್ರ ಈ ಸಂಘರ್ಷ ಕೊನೆಗೊಳ್ಳುತ್ತದೆ ಎಂದು ಥೋಕ್‌ಚೋಮ್ ವರದಿಗಾರರಿಗೆ ತಿಳಿಸಿದ್ದಾರೆ.
ಇಂಫಾಲ್ ಕಣಿವೆಯ ಮೂಲದ ಹಲವಾರು ನಾಗರಿಕ ಸಮಾಜ ಸಂಘಟನೆಗಳ ಒಕ್ಕೂಟವು ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಕುಕಿ ಉಗ್ರಗಾಮಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಈ ಸಂಘರ್ಷದಿಂದ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಅಕ್ರಮ ವಲಸಿಗರನ್ನು ಗುರುತಿಸಲು NRC ಅಳವಡಿಸಬೇಕಾಗಿದೆ. ಮ್ಯಾನ್ಮಾರ್ ಜನರಿಗೆ ನಿರಾಶ್ರಿತರ ಬಂಧನ ಶಿಬಿರಗಳು ಮಣಿಪುರಕ್ಕೆ ಮಾತ್ರ ಸೀಮಿತವಾಗಿರಬಾರದು. ರಾಜ್ಯವು ಸೀಮಿತ ಭೂಸಂಪನ್ಮೂಲಗಳನ್ನು ಹೊಂದಿದೆ. ಶಿಬಿರಗಳನ್ನು ಇತರ ರಾಜ್ಯಗಳಲ್ಲಿಯೂ ಸ್ಥಾಪಿಸಬೇಕು ಎಂದು ಥೋಕ್‌ಚೋಮ್ ಹೇಳಿದ್ದಾರೆ.
ಅಕ್ರಮ ವಲಸೆ ಹಾಗೂ ನೆರೆಯ ದೇಶದಿಂದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಒಳಹರಿವನ್ನು ತಡೆಗಟ್ಟಲು ಕೇಂದ್ರವು ಮ್ಯಾನ್ಮಾರ್ ಗಡಿಯಲ್ಲಿ ಗಡಿಬೇಲಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ಮಹಾಕುಂಭ ಮೇಳದಲ್ಲಿ ಸಿಲಿಂಡರ್‌ಗಳು ಸ್ಫೋಟ: ಟೆಂಟ್ ಗಳಿಗೆ ಹೊತ್ತಿಕೊಂಡ ಬೆಂಕಿ


