Homeಮುಖಪುಟಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಿ ವೊಡಾಫೋನ್‌‌ ಷೇರು ಖರೀದಿಸುವಲ್ಲಿ ಅರ್ಥವಿದೆಯೇ?: ಬಿಜೆಪಿಗೆ ಖರ್ಗೆ ಪ್ರಶ್ನೆ

ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಿ ವೊಡಾಫೋನ್‌‌ ಷೇರು ಖರೀದಿಸುವಲ್ಲಿ ಅರ್ಥವಿದೆಯೇ?: ಬಿಜೆಪಿಗೆ ಖರ್ಗೆ ಪ್ರಶ್ನೆ

- Advertisement -
- Advertisement -

ವೊಡಾಫೋನ್ ಐಡಿಯಾ ಕಂಪನಿಯಲ್ಲಿ ಕೇಂದ್ರ ಸರ್ಕಾರ ಶೇ. 35.8ರಷ್ಟು ತನ್ನ ಪಾಲನ್ನು ಹೆಚ್ಚಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಸರ್ಕಾರವು ಸಾರ್ವಜನಿಕ ವಲಯದ ಉದ್ಯಮ(ಪಿಎಸ್‌ಯು)ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಖಾಸಗಿ ವಲಯದ ಷೇರುಗಳನ್ನು ಖರೀದಿಸುತ್ತಿದೆ. ಇದರಲ್ಲಿ ಏನಾದರೂ ಸಂವೇದನೆ ಇದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಈ ಕುರಿತು ಮಾತನಾಡಿದ್ದು, “ಈಗ ಕೇಂದ್ರ ಸರ್ಕಾರವು ವೊಡಾಫೋನ್-ಐಡಿಯಾದ ಶೇಕಡಾ 36 ರಷ್ಟು ಮಾಲೀಕತ್ವವನ್ನು ಹೊಂದಿದೆ. ಏರ್ ಇಂಡಿಯಾದಂತಹ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ಅಥವಾ ಕೈಬಿಡುವ ಸರ್ಕಾರ, ನಷ್ಟದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಏಕೆ ಷೇರುಗಳನ್ನು ತೆಗೆದುಕೊಳ್ಳುತ್ತಿದೆ?” ಎಂದು ಕೇಳಿದ್ದಾರೆ.

“ಎಂಟಿಎನ್‌ಎಲ್ ಮತ್ತು ಬಿಎಸ್‌ಎನ್‌ಎಲ್‌ನ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮೋದಿ ಸರ್ಕಾರ ಮಾರಾಟ ಮಾರುತ್ತಿದೆ. ಆದರೆ ವೊಡಾಫೋನ್‌ನಲ್ಲಿ ಷೇರುಗಳನ್ನು ಖರೀದಿಸುತ್ತದೆ! ಇದಕ್ಕೆ ಏನಾದರೂ ಅರ್ಥವಿದೆಯೇ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ವೊಡಾಫೋನ್‌ ಇಂಡಿಯಾ ಕಂಪನಿಯ ಬಾಕಿ ಉಳಿದಿರುವ ಷೇರುಗಳಲ್ಲಿ ಸುಮಾರು ಶೇ. 35.8 ಪಾಲುದಾರಿಕೆ ಹೊಂದಿದೆ. ವೊಡಾಫೋನ್‌ ಗ್ರೂಪ್‌ ಶೇಕಡಾ 28.5, ಆದಿತ್ಯ ಬಿರ್ಲಾ ಗ್ರೂಪ್‌ ಶೇ. 17.8 ಪಾಲುದಾರಿಕೆ ಹೊಂದಿವೆ ಎಂದು ನ್ಯಾಷನಲ್‌ ಹೆರಾಲ್ಡ್‌ ವರದಿ ಮಾಡಿದೆ.

ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ವೊಡಾಫೋನ್ ಐಡಿಯಾ ಷೇರುಗಳು 19 ಶೇಕಡಾ ಕುಸಿದಿದೆ ಎಂದು ವರದಿಗಳು ಹೇಳಿವೆ.


ಇದನ್ನೂ ಓದಿರಿ: ಕೇಜ್ರಿವಾಲ್‌‌ ಪಂಜಾಬ್‌‌ನಲ್ಲಿ ಸುಳ್ಳುಗಳ ಮಾರಾಟ ಮಾಡುತ್ತಿದ್ದಾರೆ: ನವಜೋತ್‌ ಸಿಧು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...