Homeಮುಖಪುಟಮೇ 8ಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು: ನ್ಯಾಯಕ್ಕಾಗಿ  ಸುದೀರ್ಘ 17 ವರ್ಷ; ಈ ಕುರಿತು...

ಮೇ 8ಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು: ನ್ಯಾಯಕ್ಕಾಗಿ  ಸುದೀರ್ಘ 17 ವರ್ಷ; ಈ ಕುರಿತು ಒಂದು ಸಂಕ್ಷಿಪ್ತ ವರದಿ

- Advertisement -
- Advertisement -

ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 8ರಂದು ತೀರ್ಪು ಹೊರಬೀಳಲಿದೆ.  ಇದು 2008ರ ಮಾಲೆಗಾಂವ್ ಬಾಂಬ್ ಸ್ಫೋಟದ ಬಲಿಪಶುಗಳ ಕುಟುಂಬಗಳಿಗೆ ಸುದೀರ್ಘ 17 ವರ್ಷಗಳ ನೋವಿನ ಮತ್ತು ನಿರಾಶಾದಾಯಕ ಕಾಯುವಿಕೆಯಾಗಿದೆ.

ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಮೇ 8ರಂದು ನೀಡುವ ತೀರ್ಪಿನ ಮೇಲೆ ಅವರ ನ್ಯಾಯದ ಭರವಸೆ ನಿಂತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ತಿರುವುಗಳು, ರಾಜಕೀಯ ಹಸ್ತಕ್ಷೇಪ ಮತ್ತು ನಿಧಾನಗತಿಯ ಕಾನೂನು ಪ್ರಕ್ರಿಯೆಯಿಂದ ತುಂಬಿದ ಈ ಪ್ರಕರಣವು ಮುಸ್ಲಿಂ ಬಲಿಪಶುಗಳ ಚಿಕಿತ್ಸೆ ಮತ್ತು ಹಿಂದುತ್ವ ಸಂಬಂಧಿತ ಆರೋಪಿಗಳಿಗೆ ನೀಡಲಾದ ರಕ್ಷಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2008ರ ಸೆ.29ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮುಸ್ಲಿಂ ಬಹುಸಂಖ್ಯಾತ ಪಟ್ಟಣವಾದ ಮಾಲೆಗಾಂವ್‌ನಲ್ಲಿ ಮಸೀದಿಯ ಬಳಿ ಪ್ರಬಲ ಸ್ಫೋಟ ಸಂಭವಿಸಿತ್ತು. ಪವಿತ್ರ ರಂಜಾನ್ ತಿಂಗಳಲ್ಲಿ ಸಂಜೆ ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದ ಭಕ್ತರನ್ನು ಗುರಿಯಾಗಿಸಲು ಸ್ಫೋಟಕಗಳಿಂದ ತುಂಬಿದ ಮೋಟಾರ್‌ಸೈಕಲ್ ಅನ್ನು ಬಳಸಲಾಗಿತ್ತು. ಆರು ಮುಸ್ಲಿಮರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

“ನನ್ನ ತಂದೆ ಮಸೀದಿಗೆ ಹೋಗಿದ್ದರು ಮತ್ತು ಕೇವಲ 9 ವರ್ಷದವನಾಗಿದ್ದಾಗ ನಾನು ನನ್ನ  ತಂದೆಯನ್ನು ಕಳೆದುಕೊಂಡೆ. ಇದೊಂದು ಅಂದು ನಡೆದ ಅಪಘಾತವಲ್ಲ. ಅಪರಾಧ ಎಂದು ನ್ಯಾಯಾಲಯ ಹೇಳುವುದನ್ನು ಕೇಳಲು ನಾವು ಇಷ್ಟು ವರ್ಷಗಳಿಂದ ಕಾಯುತ್ತಿದ್ದೇವೆ. ನಮಗೆ ನ್ಯಾಯ ಬೇಕು, ಸಹಾನುಭೂತಿ ಅಲ್ಲ” ಎಂದು ಬಲಿಪಶುವಿನ ಮಗ 26 ವರ್ಷದ ಆಮಿರ್ ಖುರೇಷಿ ಹೇಳುತ್ತಾರೆ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ಆರಂಭಿಕ ತನಿಖೆಯು ಆಮೂಲಾಗ್ರ ಹಿಂದುತ್ವದ ದೃಷ್ಟಿಕೋನವನ್ನು ತೋರಿಸಿದೆ. ಆ ಸಮಯದಲ್ಲಿ ಅನೇಕರು ನೀಡಿದ್ದ ಹೇಳಿಕೆಗಳು ಹಲವರನ್ನು ಆಘಾತಗೊಳಿಸಿದ್ದವು. ಅಲ್ಲಿಯವರೆಗೆ ದೇಶದಲ್ಲಿ ಸಂಭವಿಸಿದ್ದ ಹೆಚ್ಚಿನ ಬಾಂಬ್ ಸ್ಫೋಟಗಗಳಿಗೆ ಕಾರಣೀಭೂತರನ್ನಾಗಿ ಮುಸ್ಲಿಂ ಗುಂಪುಗಳನ್ನು ಗುರಿಯಾಗಿಸಲಾಗುತ್ತಿತ್ತು. ಆದರೆ ಈ ಪ್ರಕರಣವು ವಿಭಿನ್ನ ವಾಸ್ತವವನ್ನು ಬಹಿರಂಗಪಡಿಸಿತು, ಅದನ್ನು ಒಪ್ಪಲು ಅನೇಕರು ನಿರಾಕರಿಸಿದರು.

2011ರಲ್ಲಿ ತನಿಖೆಯನ್ನು NIAಗೆ ಹಸ್ತಾಂತರಿಸಲಾಯಿತು. ಕೆಲ ವರ್ಷಗಳಲ್ಲಿ ಸಂಸ್ಥೆಯು 323 ಸಾಕ್ಷಿಗಳನ್ನು ಪರಿಶೀಲಿಸಿತು. ಅವರಲ್ಲಿ 34 ಮಂದಿ ಪ್ರತಿಕೂಲವಾಗಿ ತಿರುಗಿದರು, ಹಲವರು ರಾಜಕೀಯ ಒತ್ತಡಕ್ಕೆ ಒಳಗಾಗಿದ್ದರು ಎಂದು ಆರೋಪಿಸಲಾಗಿದೆ. “ಸಾಕ್ಷಿಗಳು ಏಕೆ ದೂರ ಸರಿದರು? ಅವರನ್ನು ಯಾರು ಹೆದರಿಸಿದರು? ಈ ವಿಳಂಬವು ಕೇವಲ ಕಾನೂನುಬದ್ಧವಲ್ಲ – ಇದು ರಾಜಕೀಯ” ಎಂದು ಸ್ಥಳೀಯ ಕಾರ್ಯಕರ್ತ ಅಸ್ಲಾಂ ಶೇಖ್ ಹೇಳುತ್ತಾರೆ. ಇವರು ಸಂತ್ರಸ್ತ ಕುಟುಂಬಗಳಿಗೆ ಕಾನೂನು ಬೆಂಬಲದೊಂದಿಗೆ ಸಹಾಯ ಮಾಡುತ್ತಿದ್ದಾರೆ.

NIA ವಹಿಸಿಕೊಂಡ ನಂತರ ಪ್ರಕರಣವು ಗಂಭೀರ ಬದಲಾವಣೆಗಳನ್ನು ಕಂಡಿದೆ. 2016ರಲ್ಲಿ ಏಜೆನ್ಸಿಯು ಹಲವಾರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಚಾರ್ಜ್‌ಶೀಟ್ ಸಲ್ಲಿಸಿದೆ. ಅದರಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ನಂತರದಲ್ಲಿ ಬಿಜೆಪಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಶ್ಯಾಮ್ ಸಾಹು, ಪ್ರವೀಣ್ ಟಕಲ್ಕಿ ಮತ್ತು ಶಿವನಾರಾಯಣ್ ಕಲ್ಸಂಗ್ರ ಸೇರಿದಂತೆ ಇತರ ಮೂವರು ಆರೋಪಿಗಳನ್ನು ಸಹ ಖುಲಾಸೆಗೊಳಿಸಲಾಗಿದೆ. ಆದಾಗ್ಯೂ, ಅದೇ NIA ಪ್ರಜ್ಞಾ ಠಾಕೂರ್ ವಿಚಾರಣೆಯನ್ನು ಎದುರಿಸಲೇಬೇಕು ಎಂದು ವಾದಿಸಿದ್ದು, ಗೊಂದಲ ಮತ್ತು ಟೀಕೆಗಳನ್ನು ಸೃಷ್ಟಿಸಿತು.

ಜನರು ಮತ್ತು ಕಾನೂನು ತಜ್ಞರು ರಾಜಕೀಯ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಆರೋಪಿಗಳು ಆಡಳಿತ ಪಕ್ಷಗಳೇ ತಮ್ಮ ಸಿದ್ಧಾಂತವನ್ನು ಹಂಚಿಕೊಳ್ಳುವ ಗುಂಪುಗಳೊಂದಿಗೆ ಸಂಬಂಧ ಹೊಂದಿರುವಾಗ, ತನಿಖೆಗಳು ನಿಧಾನವಾಗಿ ನಡೆಯುವುದು ಅಥವಾ ದಿಕ್ಕನ್ನು ಬದಲಾಯಿಸುವುದು ಆಶ್ಚರ್ಯವೇನಿಲ್ಲ” ಎಂದು ಪ್ರಕರಣವನ್ನು ನಿಕಟವಾಗಿ ಅನುಸರಿಸುತ್ತಿರುವ ವಕೀಲ ಅಬ್ದುಲ್ ಖಯ್ಯೂಮ್ ಅನ್ಸಾರಿ ಹೇಳಿದರು.

ಇನ್ನೂ ವಿಚಾರಣೆ ಎದುರಿಸುತ್ತಿರುವ ಆರೋಪಿಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಪ್ರಜ್ಞಾ ಸಿಂಗ್ ಠಾಕೂರ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಸೇರಿದ್ದಾರೆ. ಇವರೆಲ್ಲರೂ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ನ್ಯಾಯ ವಿಳಂಬವು ನ್ಯಾಯ ನಿರಾಕರಿಸಲ್ಪಟ್ಟಂತೆ ಎಂದು ಬಲಿಪಶುಗಳ ಕುಟುಂಬಗಳು ಹೇಳುತ್ತವೆ. “ನಾವು ನಮ್ಮ ಮಕ್ಕಳನ್ನು ಸಮಾಧಿ ಮಾಡಿದ್ದೇವೆ. ಈಗ ನಮಗೆ ನ್ಯಾಯ ಬೇಕು, ರಾಜಕೀಯವಲ್ಲ” ಎಂದು ಸ್ಫೋಟದಲ್ಲಿ 12 ವರ್ಷದ ಸೋದರಳಿಯನನ್ನು ಕಳೆದುಕೊಂಡಿರುವ ಶಬಾನಾ ಬಾನೋ ಹೇಳುತ್ತಾರೆ. “ಈ ಸ್ಫೋಟದ ವಿಚಾರಣೆಯು 17 ವರ್ಷಗಳನ್ನು ಏಕೆ ತೆಗೆದುಕೊಂಡಿತು? ಬಹುಸಂಖ್ಯಾತ ಸಮುದಾಯದ ಯಾರಾದರೂ ಆಗಿದ್ದರೆ, ಅದು ಇಷ್ಟು ಸಮಯ ತೆಗೆದುಕೊಳ್ಳುತ್ತಿತ್ತೇ?” ಎಂದು ಪ್ರಶ್ನಿಸಿದ್ದಾರೆ.

ಮಾಲೇಗಾಂವ್‌ನ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಮತ್ತು ಅದಕ್ಕೂ ಮೀರಿ ಈ ಪ್ರಕರಣವನ್ನು ನಿರ್ಲಕ್ಷ್ಯ ಮತ್ತು ಅನುಮಾನದಿಂದ ನಡೆಸಿಕೊಳ್ಳಲಾಗಿದೆ ಎಂದು ಬಹಳ ಹಿಂದಿನಿಂದಲೂ ಅಭಿಪ್ರಾಯಿಸಲಾಗಿದೆ. ಆರೋಪಿಗಳು ಮುಸ್ಲಿಂ ಹಿನ್ನೆಲೆಯಿಂದ ಬಂದವರಾಗಿದ್ದರೆ, ಅವರನ್ನು ತಕ್ಷಣವೇ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಿ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು ಎಂದು ಹಲವರು ಹೇಳುತ್ತಾರೆ. ಆರೋಪಿಗಳು ಮುಸ್ಲಿಮರು ಅಲ್ಲದ ಕಾರಣ ಮಾಲೇಗಾಂವ್ ಸ್ಫೋಟದ ಆರೋಪಿಗಳನ್ನು ಮಾಧ್ಯಮಗಳು ಮತ್ತು ಅಧಿಕಾರಿಗಳು ಸಮಾನವಾಗಿ ಸೌಮ್ಯವಾಗಿ ನಡೆಸಿಕೊಳ್ಳುತ್ತಿದ್ದಾರೆ.

ಶನಿವಾರ (ಏಪ್ರಿಲ್ 19) ವಿಶೇಷ NIA ನ್ಯಾಯಾಲಯವು ಅಂತಿಮ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳು ಇಬ್ಬರೂ ತಮ್ಮ ವಾದಗಳನ್ನು ಮುಕ್ತಾಯಗೊಳಿಸಿದರು. ಪ್ರಾಸಿಕ್ಯೂಷನ್ ಲಿಖಿತ ವಾದಗಳನ್ನು ಸಲ್ಲಿಸಿದ ನಂತರ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಮೇ 8ರಂದು ತೀರ್ಪು ನೀಡುವುದಾಗಿ ವಿಶೇಷ ನ್ಯಾಯಾಧೀಶ ಎ.ಕೆ.ಲಹೋಟಿ ಘೋಷಿಸಿದರು.

“ಇದು ದೀರ್ಘ ಹೋರಾಟವಾಗಿದೆ, ಮತ್ತು ನ್ಯಾಯಾಲಯವು ನೋವು, ಆಘಾತ ಮತ್ತು ಸತ್ಯವನ್ನು ಗುರುತಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ನ್ಯಾಯಾಲಯದ ಹೊರಗೆ ಸಾರ್ವಜನಿಕ ಅಭಿಯೋಜಕ ಅವಿನಾಶ್ ರಸಾಲ್ ಹೇಳಿದರು.

ಮಾಲೆಗಾಂವ್ ಪ್ರಕರಣದಲ್ಲಿ ಹಿಂದೂತ್ವ ಗುಂಪುಗಳನ್ನು ಒಳಗೊಂಡ ಈ ಅಪರಾಧ ವ್ಯವಸ್ಥೆಯನ್ನು ಈ ಸಮಾಜ ಹೇಗೆ ಪರಿಗಣಿಸುತ್ತದೆ ಎಂಬುದನ್ನು ಇಲ್ಲಿಯವರೆಗೆ ಇದರ ಕುರಿತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯೇ ಬಹಿರಂಗಪಡಿಸಿದೆ. ಪ್ರಸ್ತುತ ಮಂತ್ರಿಗಳು ಸೇರಿದಂತೆ ಹಲವಾರು ಬಿಜೆಪಿ ನಾಯಕರು  ಆರೋಪಿಗಳನ್ನು ಬಹಿರಂಗವಾಗಿ ಬೆಂಬಲಿಸಿದರು. ಪ್ರಜ್ಞಾ ಠಾಕೂರ್ ಅವರಿಗೆ ಆರಂಭದಲ್ಲಿ ಕ್ಲೀನ್ ಚಿಟ್ ನೀಡುವುದಲ್ಲದೆ, ಸಂಸದೀಯ ಸ್ಥಾನವನ್ನು ಸಹ ನೀಡಲಾಯಿತು. “‘ಕೇಸರಿ ಭಯೋತ್ಪಾದನೆ’ ಎಂದು ಕರೆಯಲ್ಪಡುವ ಪ್ರಕರಣವು ಸಾರ್ವಜನಿಕರ ಗಮನಕ್ಕೆ ಬಂದ ಮೊದಲ ಪ್ರಕರಣ ಇದಾಗಿದೆ ಎಂದು ಪ್ರಕರಣವನ್ನು ವ್ಯಾಪಕವಾಗಿ ವರದಿ ಮಾಡಿದ ಪತ್ರಕರ್ತ ರೆಹನ್ ಮುಜ್ತಾಬಾ ಹೇಳಿದರು. “ಆದರೆ ಅವಮಾನವನ್ನು ಎದುರಿಸುವ ಬದಲು, ಆರೋಪಿಗಳು ಹಿಂದುತ್ವ ಶಕ್ತಿಗಳ ದೃಷ್ಟಿಯಲ್ಲಿ ವೀರರಾಗಿದ್ದಾರೆ” ಎಂದು ಅವರು ವಿವರಿಸಿದರು.

ಸ್ವತಂತ್ರ ಭಯೋತ್ಪಾದನಾ ವಿರೋಧಿ ಸಂಸ್ಥೆಯಾಗಿರುವ NIA ಪ್ರಕರಣವನ್ನು ಮೃದುಗೊಳಿಸಿದೆ ಎಂದು ಆರೋಪಿಸಲಾಗಿದೆ. “ತನಿಖೆಗಳನ್ನು ಹೇಗೆ ತಿರುಚಲಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಆರೋಪಗಳನ್ನು ಬದಲಾಯಿಸಲು, ತನಿಖಾ ಪ್ರಗತಿಯನ್ನು ನಿಧಾನಗೊಳಿಸಲು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಕೈಬಿಡುವ ಪ್ರಯತ್ನಗಳು ನಡೆದಿವೆ” ಎಂದು ಹೆಸರಿಸಲಿಚ್ಛಿಸದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದರು.

ಎಲ್ಲದರ ಹೊರತಾಗಿಯೂ, ಬಲಿಪಶುಗಳು ಮತ್ತು ಅವರ ಕುಟುಂಬಗಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ, ಸತ್ಯವು ಒತ್ತಡ ಮತ್ತು ರಾಜಕೀಯದಲ್ಲಿ ಹೂತುಹೋಗುವುದಿಲ್ಲ ಎಂದು ಆಶಿಸುತ್ತಿದ್ದಾರೆ. “17 ವರ್ಷಗಳು ತುಂಬಾ ಸುದೀರ್ಘವಾಗಿದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾದರೆ, ನಮ್ಮ ಗಾಯಗಳು ವಾಸಿಯಾಗಲು ಪ್ರಾರಂಭಿಸುತ್ತವೆ” ಎಂದು 65 ವರ್ಷದ ಅಬ್ದುಲ್ ಸಲಾಮ್ ಹೇಳುತ್ತಾರೆ. ಇವರ ಮಗ ಆ ಸ್ಫೋಟ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ಇನ್ನೂ ಸರಿಯಾಗಿ ನಡೆಯಲು ಸಾಧ್ಯವಿಲ್ಲವಾಗಿದೆ.

ಮೇ 8ರಂದು ನಡೆಯುವ ಅಂತಿಮ ತೀರ್ಪು ಕಾನೂನು ನಿರ್ಧಾರಕ್ಕಿಂತ ಹೆಚ್ಚಿನದಾಗಿರುತ್ತದೆ. ಇದು ಸಂತ್ರಸ್ತರಿಗೆ ನ್ಯಾಯ ನೀಡುವ ಭಾರತೀಯ ನ್ಯಾಯಾಂಗದ ಬದ್ಧತೆಯ ಪರೀಕ್ಷೆಯಾಗಿರುತ್ತದೆ.

ನ್ಯಾಯಾಂಗದ ಬಗ್ಗೆ ನಿಶಿಕಾಂತ್ ದುಬೆ ಹೇಳಿಕೆ: ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಮ್ಮ ಒಪ್ಪಿಗೆ ಅಗತ್ಯವಿಲ್ಲ; ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...