ಬಿಜೆಪಿ ಮತ್ತು ಅದರ ಸಹಸಂಘಟನೆಗಳಾದ ಬಜರಂಗದಳದ ದುಷ್ಕರ್ಮಿಗಳು ಮೂವರು ಮುಸ್ಲಿಂ ಯುವಕರನ್ನು ಸುತ್ತುವರೆದು ‘ಜೈಶ್ರೀರಾಮ್’ ಹೇಳುವಂತೆ ಒತ್ತಾಯಿಸಿರುವ ಘಟನೆ ಮಂಡ್ಯದ ಸುಂಡಹಳ್ಳಿ ಪ್ರದೇಶದಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಕರ್ನಾಟಕವು ಉತ್ತರ ಪ್ರದೇಶದಂತೆ ಆಗುತ್ತಿದೆ ಎಂದು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯ
ಭಾನುವಾರ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಸಂಕೀರ್ತನ ಯಾತ್ರೆಗೆ ಹೊರಟಿದ್ದ ಬಿಜೆಪಿ ಸಂಘಟನೆಗಳ ಬೆಂಬಲಿಗ ಯುವಕರು ಈ ಕೃತ್ಯ ಎಸಗಿದ್ದಾರೆ. ಮಂಡ್ಯದ ಸುಂಡಹಳ್ಳಿ ಗ್ರಾಮದ ಬೆಂಗಳೂರು – ಮೈಸೂರು ಹೆದ್ದಾರಿಯ ಅಂಡರ್‌ಪಾಸ್‌ನ ಸರ್ವಿಸ್ ರಸ್ತೆಯ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮೂವರು ಮುಸ್ಲಿಂ ಯುವಕರನ್ನು ತಡೆದು, ಅವರನ್ನು ಸುತ್ತುವರೆದು ‘ಜೈಶ್ರೀರಾಮ್’ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. 8-10 ಅಪರಿಚಿತರು ಕೃತ್ಯ ಎಸಗಿದ್ದಾಗಿ ಎಫ್‌ಐಆರ್ ಉಲ್ಲೇಖಿಸಿದೆ. “ಯುವಕರನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿಕೊಂಡು ಅವಹೇಳನಕಾರಿಯಾಗಿ ನಿಂದಿಸಿ ಅವರ ಧಾರ್ಮಿಕ ಭಾವನೆಗೆ ದಕ್ಕೆ ಉಂಟುಮಾಡಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿದ್ದಾರೆ” ಎಂದು ಎಫ್‌ಐಆರ್ ಹೇಳಿದೆ. ದುಷ್ಕರ್ಮಿಗಳ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ 189(2), 126(2), 196, 352, ರೆ.ವಿ. 190 ಪ್ರಕರಣ ದಾಖಲಾಗಿದೆ.
ಈ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಸೂಲ್ ಸಾಬ್ ಗೌಂಡಿ ಅವರು, ಘಟನೆಗೆ ಸಂಬಂಧಪಟ್ಟಂತೆ ಮೂವರು ವ್ಯಕ್ತಿಗಳನ್ನು ಗುರುತಿಸಿದ್ದು ಅವರು ಮತ್ತು ತಂಡದ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದೇವೆ. ಉಳಿದವರನ್ನು ಕಂಡುಹಿಡಿಯಲು ತಂಡ ರಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮಂಡ್ಯ
'ಯುಪಿ ಅಲ್ಲ ಇದು, ಮಂಡ್ಯ'; ಸಕ್ಕರೆ ನಾಡಿನಲ್ಲಿ ದುಷ್ಕರ್ಮಿಗಳಿಂದ ಪುಂಡಾಟ
ಮುಸ್ಲಿಂ ಯುವಕರನ್ನು ಸುತ್ತುವರೆದು 'ಜೈಶ್ರೀರಾಮ್' ಎಂದು ಕೂಗಲು ದುಷ್ಕರ್ಮಿಗಳಿಂದ ಒತ್ತಾಯ – ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.
ಸುದ್ದಿ ಇಲ್ಲಿದೆ ➣➣https://t.co/MKLWjgw4qO@zoo_bear @PriyankKharge @DKShivakumar @DgpKarnataka pic.twitter.com/MHhuq6yVmp
— Naanu Gauri (@naanugauri) December 16, 2024
ಅಮಾಯಕ ಮುಸ್ಲಿಂ ಯುವಕರನ್ನು ಸುತ್ತುವರೆದು ಜೈಶ್ರೀರಾಮ್ ಎಂದು ಹೇಳಲು ಒತ್ತಾಯಿಸಿದ ಗೂಂಡಾಗಳನ್ನು ತಕ್ಷಣವೆ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮಂಡ್ಯ ಜಿಲ್ಲಾ ಸಿಪಿಐ(ಎಂ) ಆಗ್ರಹಿಸಿದ್ದು, ಸಂಘಪರಿವಾರದ ಇಂತಹ ಆಚರಣೆಗಳಿಗೆ ಸರ್ಕಾರ ಅವಕಾಶ ನೀಡಬಾರದು ಎಂದು ಪಕ್ಷವು ಹೇಳಿದೆ.
ಘಟನೆ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸಿಪಿಐ(ಎಂ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ಅವರು, “ಯುಪಿ ಮಾದರಿಯಲ್ಲಿ ಕರ್ನಾಟಕವನ್ನು ಮಾಡಲು ಹೊರಟಿರುವ ಸಂಘಪರಿವಾರದ ಆಚರಣೆಗಳಿಗೆ ರಾಜ್ಯ ಸರ್ಕಾರ ಯಾವುದೆ ಅವಕಾಶ ನೀಡಬಾರದು. ಸರ್ಕಾರ ಅವಕಾಶ ಕೊಟ್ಟಿರುವುದಕ್ಕಾಗಿಯೆ ಅದನ್ನು ದುರುಪಯೋಗಪಡಿಸಿಕೊಂಡು ಈ ರೀತಿಯಾಗಿ ಗೂಂಡಾಗಿರಿ ಮಾಡಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಂಘ ಪರಿವಾರದ ಹುನುಮ ಮಾಲೆಗೆ ಅವಕಾಶ ಕೊಡುತ್ತಾ ಇರುವುದರಿಂದ ಅವರು ಗೂಂಡಾಗಿರಿಗೆ ಇಳಿದಿದ್ದಾರೆ. ಈ ಬಗ್ಗೆ ಈಗಾಗಲೆ ಸಿಪಿಐ(ಎಂ) ಎಚ್ಚರಿಸಿದ್ದು, ಸರ್ಕಾರ ಅವಕಾಶ ಕೊಟ್ಟಿರುವುಕ್ಕಾಗೆ ಅವರು ಪುಂಡಾಟ ಮೆರೆಯುತ್ತಿದ್ದಾರೆ. ಆದ್ದರಿಂದ ಮುಂದಿನ ವರ್ಷದಿಂದ ಇಂತಹ ಹನುಮ ಮಾಲೆ ಯಾತ್ರೆಯನ್ನು ಸರ್ಕಾರ ರಾಜ್ಯದಾದ್ಯಂತ ನಿಷೇಧಿಸಬೇಕು” ಎಂದು ಕೃಷ್ಣೇಗೌಡ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಕಾನ್‌ಸ್ಟೆಬಲ್ ಮದುವೆ ಮೆರವಣಿಗೆ ಮೇಲೆ ಠಾಕೂರ್ ವ್ಯಕ್ತಿಗಳಿಂದ ದಾಳಿ
ಉತ್ತರ ಪ್ರದೇಶ: ದಲಿತ ಕಾನ್‌ಸ್ಟೆಬಲ್ ಮದುವೆ ಮೆರವಣಿಗೆ ಮೇಲೆ ಠಾಕೂರ್ ವ್ಯಕ್ತಿಗಳಿಂದ ದಾಳಿ


