ನಾನು ವಿದೇಶ ಸುತ್ತಿ ಬಂದಿದ್ದೇನೆ, ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ, ಉಪಮುಖ್ಯಮಂತ್ರಿಯಾಗಿದ್ದೇನೆ, ಆದರೆ ದಲಿತ ಎಂಬ ಕಾರಣಕ್ಕೆ ನನ್ನನ್ನು ದೇವಸ್ಥಾನದ ಒಳಗಡೆ ಸೇರಿಸುವುದಿಲ್ಲ ಕಾಂಗ್ರೆಸ್ ಶಾಸಕ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡುತ್ತಿದ್ದರು.
ಕೊರಟಗೆರೆಯ ಪಟ್ಟಣ ಪಂಚಾಯಿತಿ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಹಲವು ದೇಶಗಳನ್ನು ಸುತ್ತಿ ಬಂದಿದ್ದೇನೆ. ಆದರೆ ದಲಿತ ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಸೇರಿಸಲಿಲ್ಲ. ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ, ಈ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದೇನೆ. ಆದರೆ ನನ್ನನ್ನು ದೇವಸ್ಥಾನಕ್ಕೆ ಸೇರಿಸಲಿಲ್ಲ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತಾನು ದೇವಸ್ಥಾನಕ್ಕೆ ಹೋದಾಗ ಹೊರಗಡೆಯೆ ನಿಲ್ಲಿಸಿ ಮಂಗಳಾರತಿ ತರುತ್ತಾರೆ, ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.
“ದೇವಸ್ಥಾನಕ್ಕೆ ಹೋದಾಗ ‘ಸ್ವಲ್ಪ ಅಲ್ಲೇ ನಿಲ್ಲಿ’ ಎಂದು ಹೇಳಿ ಅಲ್ಲೇ ಮಂಗಳಾರತಿ ತಂದು ಬಿಡುತ್ತಾರೆ. ಮಂಗಳಾರತಿಯನ್ನು ನನ್ನ ಬಳಿಯೆ ತರುತ್ತಾರೆ. ನಾನು ದೇವರ ಬಳಿ ಹೋಗಿ ಮಂಗಳಾರತಿ ತೆಗೆದುಕೊಳ್ಳುವ ಹಾಗಿಲ್ಲ” ಎಂದು ಅವರು ಹೇಳಿದ್ದಾರೆ.
“ಇವನು ಒಳಗೆ ಬಂದುಬಿಡುತ್ತಾನೆ ಎಂದು ಮಂಗಳಾರತಿಯನ್ನು ಈಚೆಗೆ ಹಿಡಿದುಕೊಂಡು ಓಡಿ ಬರುತ್ತಾರೆ. ಈ ರೀತಿಯಾಗಿ ಇನ್ನೂ ಸಮಾಜದಲ್ಲಿ ನಡೆಯುತ್ತಿದೆ. ಈ ಪರಿಸ್ಥಿತಿಗೆ ನಾವು ಏನು ಹೇಳಬೇಕು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ



ಜಾತಿಯ ಭೂತ ಸಚಿವ, ಉಪ ಮುಖ್ಯಮಂತ್ರಿಗೆ ಬಿಟ್ಟಿಲ್ಲ ಎಂದರೆ ಇನ್ನು ಸಾಮಾನ್ಯರ ಪಾಡು ಹೇಗಿರಬಹುದು. ಸಮುದಾಯದ ನಾಯಕರು, ಯುವಕರು ಇದನ್ನು ಅರಿತುಕೊಳ್ಳಬೇಕು. ಕೋಮುವಾದಿ ಪಕ್ಷಗಳಿಂದ ದೂರ ಇರಬೇಕು. ಅಂದಹಾಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿದ್ದು ಯಾವಾಗ, ಎಲ್ಲಿ ಎಂಬ ಮಾಹಿತಿ ಇದ್ದರೆ ಸುದ್ದಿ ಪೂರ್ಣವಾಗುತ್ತಿದ್ದು…
ನಿಮಗೆ ಓಟ್ ಬೇಕು
ಅಚ್ಚರಿ ಹುಟ್ಟಿಸುವ ಸಂಗತಿ
ಈ ಸುದ್ದಿ ನಿಜವೇ ಅಥವಾ ಸುಳ್ಳು ಆಗಿರಬಹುದೇ…
ನಿಜವಾಗಿರುವ ಸಾಧ್ಯತೆ ಕಡಿಮೆ ಎನ್ನುವುದೇ ನನ್ನ ನಂಬಿಕೆ….
ಸರ್ ಒಮ್ಮೆ ಯೋಚಿಸಿ ನಿಮ್ಮಗಳ ಪರಿಸ್ಥಿತಿ ಹೀಗಿರುವಾಗ ಜನ ಸಾಮಾನ್ಯರ ಗತಿ ಏನು…? ಈ ದೇಶಕ್ಕೆ ಸಂವಿಧಾನವಿದ್ದು ಹೀಗಿರುವಾಗ ಬಾಬಾ ಸಾಹೇಬರು ಅಂದು ಅನುಭವಿಸಿದ ನೋವು ಉಹಿಸಿಕೊಂಡರೆ ಭಯವಾಗುತ್ತದೆ.
ಇವಾಗಾದರು ಈ ಅಸ್ಪೃಶ್ಯತೆಯ ಪಿಡುಗು ತೊಲಗಲಿ ನಿಮ್ಮಂತಹವರು ಇದರ ವಿರುಧ್ದ ಧ್ವನಿ ಎತ್ತಿ ಧ್ವನಿ ಇಲ್ಲದವರಿಗೆ ಧ್ವನಿಯಾದರೆ ಅದೆ ನಮ್ಮ ಬಾಬಾ ಸಾಹೇಬರಿಗೆ ಅರ್ಪಿಸುವ ಕೊಡುಗೆ.
ನಿಮ್ಮಂಥ ತಿಳುವಳಿಕೆ ಇರೋರು ರಾಜಕೀಯ ಶಕ್ತಿ ಇರೋರಿಗೆ ಈ ರೀತಿಯ ಅಪಮಾನ ಮಾಡುತ್ತಾರೆ ಎಂದರೆ ಸಾಮಾನ್ಯ ದಲಿತ ವರ್ಗದ ಜನರು ಬದುಕು ಹೇಗೆ ಇರಬೇಕು ಯೋಚಿಸಿ.
ತಾವು ಬಲವಂತವಾಗಿ ಮಂದಿರ ಪ್ರವೇಶ ಮಾಡಬೇಕಿತ್ತು ಎಂಬುದು ನನ್ನ ಅನಿಸಿಕೆ.
ದಲಿತರು ಮಂದಿರಕ್ಕೆ ಹೋದರೆ ಅವಮಾನ /ಅಪಮಾನ ಆಗುತ್ತೆ ಆಂತ ಗೊತ್ತಿದ್ರೆ ಆ ಮಂದಿರಕ್ಕೆ ಯಾಕೆ ನಾವು ಹೋಗ್ಬೇಕು?
ನಿಮ್ಮ ಸಮಾಜ ಬಾಂಧವರು ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಂಧ ಭಕ್ತರಾಗಿದ್ದಾರ
ಸ್ವತಃ ಯಾದಗಿರಿ ಜಿಲ್ಲಾಧಿಕಾರಿ ರಾಗಪ್ರೀಯ ಮೇಡಂ ದಲಿತರಿಗೆ ದೇವಸ್ಥಾನದ ಒಳಗೆ ಪ್ರವೇಶಿಸಲು ಅನುಮತಿ ನೀಡಲು ಆದೇಶ ನೀಡಿದ್ದರು. ಇಂದು ಸಹ ದಲಿತರಿಗೆ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಗಳನ್ನು ಹೊರತುಪಡಿಸಿ ಉಳಿದ ದೇವಾಲಯಗಳಿಗೆ ಅನುಮತಿ ಇಲ್ಲ ಸರ್. ಸ್ವತಃ ಪತ್ರಿಕೋದ್ಯಮದಲ್ಲಿ ಇರುವ ನನಗೆ ದೇವಸ್ಥಾನದ ಪ್ರವೇಶ ಮಾಡಲು ಬಿಡಲಿಲ್ಲ. ಊರಿನವರ ಎದುರು ಹಾಕಿಕೊಂಡು ಬಾಳಲು ಸಾಧ್ಯವಿಲ್ಲ ಎಂದು ದೇವಸ್ಥಾನಗಳಿಗೆ ಹೋಗುವುದು ಬಿಟ್ಟಿದ್ದೇನೆ.