ಜೂನ್ 1ರಿಂದ ನವೆಂಬರ್ 1ರ ವರೆಗೆ ಸಕಲೇಶಪುರದಿಂದ ಸುಬ್ರಹ್ಮಣ್ಯವರೆಗಿನ ರೈಲು ಮಾರ್ಗದಲ್ಲಿ ವಿವಿಧ ಕಾಮಗಾರಿ ನಡೆಯುವುದರಿಂದ ಬೆಂಗಳೂರು – ಮಂಗಳೂರು ರೈಲು ಪ್ರಯಾಣ 5 ತಿಂಗಳ ಕಾಲ ಸ್ಥಗಿತಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಸಕಲೇಶಪುರ ಹಾಸನ ಜಿಲ್ಲೆಯಲ್ಲಿದ್ದು, ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಜೂನ್ 1ರಿಂದ ನವೆಂಬರ್
ಈ ಬಗ್ಗೆ ಪ್ರಕರಣೆ ಹೊರಡಿಸಿರುವ ರೈಲ್ವೇ ಇಲಾಖೆ, “ಜೂನ್ 1ರಿಂದ ನವೆಂಬರ್ 1ರವರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ರೈಲ್ವೇ ವಿದ್ಯುದ್ಧೀಕರಣ, ಸುರಕ್ಷತೆ ಸೇರಿದಂತೆ ಕೆಲವು ಪ್ರಮುಖ ಕಾಮಗಾರಿಗಳು ನಡೆಯಲಿವೆ. ಈ ಅವಧಿಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಬಹುತೇಕ ಎಲ್ಲ ರೈಲುಗಳ ಸಂಚಾರ ರದ್ದಾಗಲಿದೆ” ಎಂದು ಹೇಳಿದೆ.
ಸಂಚಾರ ಸ್ಥಗಿತಗೊಂಡ ರೈಲುಗಳ ವಿವರ ಕೆಳಗಿನಂತಿವೆ
- ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ರಾಹಿಕ ಎಕ್ಸ್‌ಪ್ರೆಸ್ (16540): ಪ್ರತಿ ಶನಿವಾರ ಯಶವಂತಪುರದಿಂದ ಮಂಗಳೂರಿಗೆ ತೆರಳುವ ಈ ರೈಲು ಸಂಚಾರವು ಮೇ 31ರಿಂದ ನವೆಂಬರ್ 1ರವರೆಗೆ ರದ್ದಾಗಲಿದೆ.
- ಮಂಗಳೂರು ಜಂಕ್ಷನ್ – ಯಶವಂತಪುರ ಸಾಪ್ರಾಹಿಕ ಎಕ್ಸ್‌ಪ್ರೆಸ್ (16539): ಪ್ರತಿ ಭಾನುವಾರ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರಯಾಣಿಸುತ್ತಿದ್ದ ಈ ರೈಲು ಜೂನ್ 1ರಿಂದ ನವೆಂಬರ್ 2ರವರೆಗೆ ರದ್ದಾಗಲಿದೆ.
- ಯಶವಂತಪುರ – ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (16575): ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ಯಶವಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲು ಜೂನ್ 1 ರಿಂದ ಅಕ್ಟೋಬರ್ 30ರವರೆಗೆ ರದ್ದಾಗಲಿದೆ.
- ಮಂಗಳೂರು – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16576): ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ಯಶವಂತಪುರಕ್ಕೆ ಪ್ರಯಾಣಿಸುತ್ತಿದ್ದ ರೈಲು ಜೂನ್ 2ರಿಂದ ಅಕ್ಟೋಬರ್ 31ರವರೆಗೆದಂದು ಸ್ಥಗಿತಗೊಳ್ಳಲಿದೆ.
- ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (16515): ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಯಶವಂತಪುರದಿಂದ ಕಾರವಾರಕ್ಕೆ ತೆಳುತ್ತಿದ್ದ ರೈಲು ಸಂಚಾರವು ಜೂನ್ 2 ರಿಂದ ಅಕ್ಟೋಬರ್ 31ರವರೆಗೆ ರದ್ದಾಗಲಿದೆ.
- ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (16516): ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಕಾರವಾರದಿಂದ ಯಶವಂತಪುಕ್ಕೆ ಪ್ರಯಾಣಿಸುತ್ತಿದ್ದ ರೈಲು ಜೂನ್ 3ರಿಂದ ನವೆಂಬರ್ 1ರವರೆಗೆ ತನ್ನ ಸಂಚಾರವನ್ನು ಸ್ಥಗಿತಗೊಳಿಸಿದೆ. ಜೂನ್ 1ರಿಂದ ನವೆಂಬರ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅತಿಥಿ ಶಿಕ್ಷಕರಿಗೆ ಸಿಇಟಿ ಪರೀಕ್ಷೆ ಕಡ್ಡಾಯ ಮಾಡಿದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ; ತೀವ್ರ ಟೀಕೆ
ಅತಿಥಿ ಶಿಕ್ಷಕರಿಗೆ ಸಿಇಟಿ ಪರೀಕ್ಷೆ ಕಡ್ಡಾಯ ಮಾಡಿದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ; ತೀವ್ರ ಟೀಕೆ