Homeಮುಖಪುಟಕ್ಷಮೆ ಕೇಳಿದರೂ ಮುಗಿಯದ ಕೊರಗಜ್ಜ ಪ್ರಕರಣ: ಇಬ್ಬರ ಬಂಧನ

ಕ್ಷಮೆ ಕೇಳಿದರೂ ಮುಗಿಯದ ಕೊರಗಜ್ಜ ಪ್ರಕರಣ: ಇಬ್ಬರ ಬಂಧನ

ಆರೋಪಿಗಳನ್ನು ಬಂಧಿಸದ್ದಿದ್ದಲ್ಲಿ ಮಂಗಳವಾರ ಹಿಂದೂ ಜಾಗರಣ ವೇದಿಕೆ ವತಿಯಿಂದ ವಿಟ್ಲ ಬಂದ್ ಆಚರಿಸಲಾಗುವುದು ಎಂದು ಕರೆ ನೀಡಲಾಗಿತ್ತು.

- Advertisement -
- Advertisement -

ದಕ್ಷಿಣ ಕನ್ನಡದ ಮದುಮಗನನ್ನು ಟ್ರೋಲ್‌‌‌‌ ಮಾಡಬೇಕು ಎಂದು ಆತನ ಸ್ನೇಹಿತರು ಮಾಡಿರುವ ತಮಾಷೆಯ ಘಟನೆಯ ವಿಡಿಯೋ ವೈರಲ್ ಆದ ನಂತರ ಕೊರಗಜ್ಜನ ವೇಷ ಹಾಕಿ ಕೊರಗಜ್ಜನಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಅದು ಕೊರಗಜ್ಜನ ವೇಷವಲ್ಲ ಎಂದು ಪ್ರತಿಕ್ರಿಯಿಸಿದ್ದ ಮದುಮಗ ಕ್ಷಮೆ ಕೂಡ ಕೇಳಿದ್ದರು. ಆದರೂ ಪ್ರಕರಣ ಕೊನೆಗೊಂಡಿಲ್ಲ. ಜನವರಿ 10ರ ಸೋಮವಾರ ರಾತ್ರಿ ಮದುಮಗನ ಇಬ್ಬರು ಗೆಳೆಯರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ವಿಟ್ಲದ ಕಡಂಬು ನಿವಾಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಚೇತನರವರ ದೂರಿನ ಮೇರೆಗೆ ವಿಟ್ಲ ಪೊಲೀಸರು ಮದುಮಗ ಉಮರುಲ್ ಭಾಷಿತ್ ಮತ್ತು ಇತರ ಹಲವರ ವಿರುದ್ಧ ಕಲಂ 153ಎ, 295 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರು ತನಿಖೆಗಾಗಿ ಠಾಣಾ ಎಸ್.ಐ.ಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಸಂಜೀವ ಪುರುಷರವರ ನೇತೃತ್ವದಲ್ಲಿ ಎರಡು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಬಿಸಿದ್ದರು. ಮಂಗಲ್ಪಡಿ ನಿವಾಸಿ, ಪುತ್ತೂರು ಫಾತಿಮಾ ಬಟ್ಟೆ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು (28) ಮತ್ತು ಬಾಯಾರು ಪದವು ನಿವಾಸಿ ಮೊಯ್ದಿನ್ ಮುನಿಶ್ (19) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸದ್ದಿದ್ದಲ್ಲಿ ಮಂಗಳವಾರ ಹಿಂದೂ ಜಾಗರಣ ವೇದಿಕೆ ವತಿಯಿಂದ ವಿಟ್ಲ ಬಂದ್ ಆಚರಿಸಲಾಗುವುದು ಎಂದು ಕರೆ ನೀಡಲಾಗಿತ್ತು. ಅದಕ್ಕೂ ಮುನ್ನವೇ ಸೋಮವಾರ ರಾತ್ರಿಯೇ ಮದುಮಗನ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ. ಆದರೂ ಇಂದು ಕೆಲವು ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಲಾಗಿದೆ ಎಂದು ವರದಿಯಾಗಿದೆ.

ಘಟನೆಯ ವಿವರ

ದಕ್ಷಿಣ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಲ್ನಾಡು ಗ್ರಾಮದ ಸಾಲೆತ್ತೂರು ಬಳಿಯ ಯುವತಿಯ ಮದುವೆ ನೆರೆಯ ಕಾಸರಗೋಡು ಜಿಲ್ಲೆಯ ಉಪ್ಪಳದ ಯುವಕನೊಂದಿಗೆ ಬುಧವಾರ ನಡೆದಿತ್ತು. ಮದುವೆಯ ಮುಂದುವರೆದ ಕಾರ್ಯಕ್ರಮವಾಗಿ ಮದುವೆಯಂದೆ ರಾತ್ರಿ ಮದುಮಗನ ಸ್ನೇಹಿತರಿಗೆ ವಧುವಿನ ಕಡೆಯವರು ಔತಣಕೂಟ(ತಾಳ)ವನ್ನು ಏರ್ಪಡಿಸಿದ್ದರು. ಅದರಂತೆ ಅಂದೇ ರಾತ್ರಿ ಉಪ್ಪಳದಿಂದ ಮದುಮಗ ಮತ್ತು ಅವರ ಸ್ನೇಹಿತರು ಆಗಮಿಸಿದ್ದರು. ಈ ವೇಳೆ ಮದುಮಗನ ಸ್ನೇಹಿತರು ಮದುಮಗನನ್ನು ತಮಾಷೆ ಮಾಡುವ ಉದ್ದೇಶದಿಂದ, ಆತನಿಗೆ ಹರಿದ ಟಿಶರ್ಟ್ ಧರಿಸುವಂತೆ ಮಾಡಿ, ತಲೆಗೆ ಮಟ್ಟಳೆ ಹಾಕಿ, ಸೊಂಟದ ಸುತ್ತ ಒಂದಷ್ಟು ಸೊಪ್ಪುಗಳನ್ನು ಸುತ್ತಿ, ಮುಖಕ್ಕೆ ಕಪ್ಪು ಬಣ್ಣ ಬಳಿದು, ಬಣ್ಣ ಎರಚಿ ಹಾಡು ಹಾಡಿ ಖುಷಿ ಪಟ್ಟಿದ್ದರು.

ಇದರ ನಂತರ, ವಧುವಿನ ಕಡೆಯವರ ಔತಣಕೂಟದಲ್ಲಿ ಭಾಗವಹಿಸಿ, ಆಹಾರವನ್ನು ಸ್ವೀಕರಿಸಿ ಅವರು ತೆರಳಿದ್ದರು. ಆದರೆ, ಮದುಮಗನನ್ನು ತಮಾಷೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಈ ವಿಡಿಯೊವನ್ನು ತುಳುನಾಡಿನಲ್ಲಿ ಆರಾಧಿಸುವ ‘ಕೊರಗಜ್ಜ’ ಎಂಬ ದೈವಕ್ಕೆ ಅವಮಾನ ಮಾಡಲಾಗಿದೆ ಎಂದು ಬಲಪಂಥೀಯರು ವೈರಲ್ ಮಾಡಿದ್ದರು.


ಇದನ್ನೂ ಓದಿ: ಮಂಗಳೂರು: ಕೊರಗಜ್ಜನಿಗೆ ಅವಮಾನ ಎಂಬ ಘಟನೆಯ ಸುತ್ತ ನಡೆದಿದ್ದೇನು? ಕೋಮು ಆಯಾಮ ಪಡೆದಿದ್ದೇಕೆ?


ಕೊರಗಜ್ಜನಿಗೆ ಅವಮಾನ ಮಾಡಿಲ್ಲ

ಕೊರಗ ಸಮುದಾಯದ ಮುಖಂಡ ಮತ್ತಾಡಿ ಅವರು ಮಾತನಾಡಿ, “ಘಟನೆಯ ಬಗೆಗಿನ ವಿವಾದಾತ್ಮಕ ವಿಡಿಯೊದಲ್ಲಿ ಮದುಮಗನ ವೇಷವನ್ನು ನೋಡಿದೆ. ಅದು ಕೊರಗಜ್ಜನ ವೇಷ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿ ಮದುಮಗನ ತಲೆಗೆ ಮುಟ್ಟಾಳೆ (ಅಡಿಕೆ ಗರಿಯಿಂದ ಮಾಡಿರುವ ತಲೆಗೆ ಧರಿಸುವ ವಸ್ತು) ಹಾಕಿದ್ದರು, ಟೀಶರ್ಟ್ ಧರಿಸಿದ್ದರು ಮತ್ತು ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದರು. ಕಪ್ಪು ಬಣ್ಣ ಹಾಕಿದ ಕೂಡಲೇ ಅದು ಕೊರಗರನ್ನು ಅವಮಾನಿಸಿದ ಹಾಗೆ ಹಾಗಲ್ಲ. ಕಪ್ಪು ಬಣ್ಣದವರು ಕೊರಗರು ಮಾತ್ರ ಅಲ್ಲ, ಎಲ್ಲಾ ಸಮುದಾಯದಲ್ಲೂ ಇದ್ದಾರೆ” ಎಂದು ಹೇಳಿದ್ದಾರೆ.

ಕೊರಗ ಅಭಿವೃದ್ದಿ ಸಂಘದ ಮಾಜಿ ಅಧ್ಯಕ್ಷೆಯಾಗಿರುವ ಸುಶೀಲಾ ನಾಡಾರವರು ಮಾತನಾಡಿ “ಕೊರಗ ವೇಷವನ್ನು ಹಾಕುವುದು ಮತ್ತು ಈ ವೇಷ ಹಾಕಿ ಸಮುದಾಯವನ್ನು ಕೀಳು ಮಟ್ಟದಲ್ಲಿ ಬಿಂಬಿಸುವುದು ಕಾನೂನಾತ್ಮಕವಾಗಿ ಅಪರಾಧವಾಗಿದೆ. ಆದರೆ, ಈ ರೀತಿಯ ಕಾನೂನು ಇದ್ದು ಕೂಡಾ ಕೊರಗ ವೇಷ ಹಾಕುವುದು ಮುಂದುವರೆಯುತ್ತಲೇ ಇದೆ. ನಿಜವಾಗಿಯೂ ಕೊರಗರ ಬಗ್ಗೆ ಕಾಳಜಿ ಇರುವವರಾದರೆ, ಮೊನ್ನೆ ಕೋಟದಲ್ಲಿ ಕೊರಗರ ಮೇಲೆ ನಡೆದ ದಾಳಿಯ ಬಗ್ಗೆ ಧ್ವನಿ ಎತ್ತುತ್ತಿದ್ದರು. ಆದರೆ ಇಂದು ಕೊರಗಜ್ಜನಿಗೆ ಅವಮಾನ ಆಗಿದೆ ಎಂದು ಗಲಾಟೆ ಮಾಡುತ್ತಿರುವವರು ಯಾರೂ ಅಂದು ಮಾತಾಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ‘ಕೊರಗಜ್ಜನಿಗೆ ಅವಮಾನ ಮಾಡಲಾಗಿದೆ ಎನ್ನುವ ಸಂಘ ಪರಿವಾರ ಕೊರಗರ ಮೇಲೆ ಲಾಠಿ ಚಾರ್ಜ್ ಆದಾಗ ಎಲ್ಲಿತ್ತು?’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...