Homeಕರ್ನಾಟಕಮಂಗಳೂರು: ಕೊರಗಜ್ಜನಿಗೆ ಅವಮಾನ ಎಂಬ ಘಟನೆಯ ಸುತ್ತ ನಡೆದಿದ್ದೇನು? ಕೋಮು ಆಯಾಮ ಪಡೆದಿದ್ದೇಕೆ?

ಮಂಗಳೂರು: ಕೊರಗಜ್ಜನಿಗೆ ಅವಮಾನ ಎಂಬ ಘಟನೆಯ ಸುತ್ತ ನಡೆದಿದ್ದೇನು? ಕೋಮು ಆಯಾಮ ಪಡೆದಿದ್ದೇಕೆ?

ಬಲಪಂಥೀಯರು ನೀಡಿದ ನಿರೂಪಣೆಯನ್ನು ಎಲ್ಲರೂ ಒಪ್ಪಿಕೊಂಡು ಮದುವೆ ಮನೆಯ ಮೇಲೆ ಮುಗಿಬಿದ್ದಿದ್ದಾರೆ

- Advertisement -
- Advertisement -

ಮದುಮಗನನ್ನು ಟ್ರೋಲ್‌‌‌‌ ಮಾಡಬೇಕು ಎಂದು ಆತನ ಸ್ನೇಹಿತರು ಮಾಡಿರುವ ತಮಾಷೆಯ ಘಟನೆಯ ವಿಡಿಯೋವೊಂದು ವೈರಲ್ ಆದ ತಕ್ಷಣವೇ ಕೊರಗಜ್ಜನಿಗೆ ಅವಮಾನ ಎಂಬುದಾಗಿ ಎಲ್ಲಡೆ ವರದಿಯಾಯಿತು. ಜೊತೆಗೆ ಕೋಮು ವೈಷ್ಯಮದ ಘಟನೆಯಾಗಿ ಮಾರ್ಪಟ್ಟಿದಲ್ಲದೆ ಇದನ್ನು ಬಳಸಿಕೊಳ್ಳಲು ಹಲವು ಸಂಘಟನೆಗಳು ಮುಂದಾಗಿವೆ. ಆದರೆ ವಿಡಿಯೋಗೂ ಕೊರಗಜ್ಜನಿಗೂ ಸಂಬಂಧವೇ ಇಲ್ಲ ಎಂದು ಮದುಮಗನ ಕಡೆಯವರು ನೋವು ತೋಡಿಕೊಂಡಿದ್ದಾರೆ.

ದಕ್ಷಿಣ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಲ್ನಾಡು ಗ್ರಾಮದ ಸಾಲೆತ್ತೂರು ಬಳಿಯ ಯುವತಿಯ ಮದುವೆ ನೆರೆಯ ಕಾಸರಗೋಡು ಜಿಲ್ಲೆಯ ಉಪ್ಪಳದ ಯುವಕನೊಂದಿಗೆ ಬುಧವಾರ ನಡೆದಿತ್ತು. ಮದುವೆಯ ಮುಂದುವರೆದ ಕಾರ್ಯಕ್ರಮವಾಗಿ ಮದುವೆಯಂದೆ ರಾತ್ರಿ ಮದುಮಗನ ಸ್ನೇಹಿರಿಗೆ ವಧುವಿನ ಕಡೆಯವರು ಔತಣಕೂಟ(ತಾಳ)ವನ್ನು ಏರ್ಪಡಿಸಿದ್ದರು. ಅದರಂತೆ ಅಂದೇ ರಾತ್ರಿ ಉಪ್ಪಳದಿಂದ ಮದುಮಗ ಮತ್ತು ಅವರ ಸ್ನೇಹಿತರು ಆಗಮಿಸಿದ್ದರು. ಈ ವೇಳೆ ಮದುಮಗನ ಸ್ನೇಹಿತರು ಮದುಮಗನನ್ನು ತಮಾಷೆ ಮಾಡುವ ಉದ್ದೇಶದಿಂದ, ಆತನಿಗೆ ಹರಿದ ಟಿಶರ್ಟ್ ಧರಿಸುವಂತೆ ಮಾಡಿ, ತಲೆಗೆ ಮಟ್ಟಳೆ ಹಾಕಿ, ಸೊಂಟದ ಸುತ್ತ ಒಂದಷ್ಟು ಸೊಪ್ಪುಗಳನ್ನು ಸುತ್ತಿ, ಮುಖಕ್ಕೆ ಕಪ್ಪು ಬಣ್ಣ ಬಳಿದು, ಬಣ್ಣ ಎರಚಿ ಹಾಡು ಹಾಡಿ ಖುಷಿ ಪಟ್ಟಿದ್ದರು.

ಇದನ್ನೂ ಓದಿ:ಕೊರಗರ ಮೇಲೆ ಪೊಲೀಸ್ ಹಲ್ಲೆ ಪ್ರಕರಣ: ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಏಕೆ ಸುಮ್ಮನಿದ್ದಾರೆ? -ಸಿಪಿಎಂ ಪ್ರಶ್ನೆ

ಇದರ ನಂತರ, ವಧುವಿನ ಕಡೆಯವರ ಔತಣಕೂಟದಲ್ಲಿ ಭಾಗವಹಿಸಿ, ಆಹಾರವನ್ನು ಸ್ವೀಕರಿಸಿ ಅವರು ತೆರಳಿದ್ದರು. ಆದರೆ, ಮದುಮಗನನ್ನು ತಮಾಷೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಈ ವಿಡಿಯೊವನ್ನು ತುಳುನಾಡಿನಲ್ಲಿ ಆರಾಧಿಸುವ ‘ಕೊರಗಜ್ಜ’ ಎಂಬ ದೈವಕ್ಕೆ ಅವಮಾನ ಮಾಡಲಾಗಿದೆ ಎಂದು ಬಲಪಂಥೀಯರು ವೈರಲ್ ಮಾಡಿದ್ದರು.

ಇದರ ನಂತರ ಈ ವಿಡಿಯೊ ಕೋಮು ಆಯಾಮದೊಂದಿಗೆ ಮತ್ತಷ್ಟು ವೈರಲ್ ಆಗಿತ್ತು. ಈ ಘಟನೆಯನ್ನು ಬಳಸಿಕೊಂಡ ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ಕಾರ್ಯಕರ್ತರು ಸಾಲೆತ್ತೂರಿನಲ್ಲಿರುವ ವಧುವಿನ ಮನೆಯ ಬಳಿ ತೆರಳಿ ಗಲಾಟೆ ಮಾಡಿದ್ದರು. ಜೊತಗೆ ವಧುವಿನ ತಂದೆ, ಸಹೋದರ ಮತ್ತು ವರನ ಸ್ನೇಹಿತರ ವಿರುದ್ದ ವಿಟ್ಲ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಿಸಿದ್ದಾರೆ. ಇದೀಗ ಮದುಮಗನ ಕಡೆಯ ಇಬ್ಬರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ನಾನುಗೌರಿ.ಕಾಂ ಮೂಲವೊಂದು ಹೇಳಿದೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ವಧುವಿನ ಸಂಬಂಧಿಯೊಬ್ಬರು, “ಮದುಮಗ ಮತ್ತು ಆತನ ಸ್ನೇಹಿತರು ತಮಾಷೆ ಮಾಡುವ ಉದ್ದೇಶದಿಂದ, ಮದುಮಗನಿಗೆ ಸೊಪ್ಪುಗಳನ್ನು ಕಟ್ಟಿ, ಮುಖಕ್ಕೆ ಕಪ್ಪು ಬಣ್ಣಬಳಿದು ಕಾಡು ಮನುಷ್ಯನ ರೀತಿಯಲ್ಲಿ ತಯಾರುಗೊಳಿಸಿದ್ದರು. ಇದನ್ನು ಮದುಮಗನನ್ನು ತಮಾಷೆ ಮಾಡುವ ಉದ್ದೇಶದಿಂದ ಮಾತ್ರ ಮಾಡಿದ್ದಾರೆ. ಕೊರಗಜ್ಜನನ್ನು ಅವಮಾನಿಸಲು ಮಾಡಿರುವುದು ಅಲ್ಲವೇ ಅಲ್ಲ, ಅಂತಹದ್ದೊಂದು ಆಲೋಚನೆಯೂ ಇರಲಿಲ್ಲ. ಆದರೆ ವಿಡಿಯೊ ಕೋಮು ಆಯಾಮದೊಂದಿಗೆ ವೈರಲ್‌ ಆಗತೊಡಗಿದೆ” ಎಂದು ಬೇಸರ ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಕೊರಗರ ಮೇಲೆಯೆ ಪ್ರಕರಣ: ಬಿಜೆಪಿಯ ಗುಪ್ತ ಅಜೆಂಡವೇ ಎಂದ ಸಿದ್ದರಾಮಯ್ಯ

ವಧುವಿನ ಸೋದರ ಮಾವ ಮಾತನಾಡಿ, “ಯುವಕರು ತಮಾಷೆಗೆಂದು ಮಾಡಿರುವ ವಿಡಿಯೊ ಕೋಮು ಆಧಾರದಲ್ಲಿ ಹರಿದಾಡುತ್ತಿದೆ. ಅದು ಕೊರಗಜ್ಜನ ವೇಷವು ಅಲ್ಲ, ಅವರನ್ನು ಅವಮಾನಿಸಲು ಮಾಡಿದ್ದೂ ಅಲ್ಲ. ಈ ಬಗ್ಗೆ ಮದುಮಗನ ಸ್ನೇಹಿತರು ಕೂಡಾ ಅದನ್ನೇ ಹೇಳಿದ್ದು, ಒಂದು ವೇಳೆ ಅವರು ಮಾಡಿರುವುದರಲ್ಲಿ ಯಾರದ್ದಾದರು ಭಾವನೆಗೆ ಧಕ್ಕೆ ಆಗಿದ್ದರೆ ಕ್ಷಮೆ ಕೂಡಾ ಕೇಳಲಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ವಿಡಿಯೊ ಸಂದೇಶವು ನಿಮಗೆ ನೀಡುತ್ತೇವೆ” ಎಂದು ನಾನುಗೌರಿ.ಕಾಂಗೆ ಹೇಳಿದ್ದಾರೆ.

ಘಟನೆಯನ್ನು ಬಳಸಿಕೊಂಡು ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳ ಕೋಮು ಆಧಾರದಲ್ಲಿ ಒಡೆಯಲು ಪ್ರಯತ್ನಿಸುತ್ತಿದೆ ಎಂದು ಸಾಲೆತ್ತೂರಿನ ನಾಗರೀಕರೊಬ್ಬರು ಹೇಳಿದ್ದಾರೆ.

“ವಧುವಿನ ಕಡೆಯವರು ನೀಡುವ ಔತಣಕೂಟವಾದ ‘ತಾಳ’ದ ಸಮಯದಲ್ಲಿ ಸಾಮಾನ್ಯವಾಗಿ ಮದುಮಗನನ್ನು ತಮಾಷೆ ಮಾಡುವುದು ನಡೆಯುತ್ತದೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದೂ ಇದೆ. ಆದರೆ ಈ ಘಟನೆಯಲ್ಲಿ ಯಾರನ್ನೂ ಅವಮಾನಿಸುವ ಹಾಗೆ ನಡೆದುಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡಿದ ನಂತರ ಬಲಪಂಥೀಯರು ನೀಡಿದ ನಿರೂಪಣೆಯನ್ನು ಎಲ್ಲರೂ ಒಪ್ಪಿಕೊಂಡು ಮದುವೆ ಮನೆಯ ಮೇಲೆ ಮುಗಿಬಿದ್ದಿದ್ದಾರೆ. ಆದರೆ ಅಲ್ಲಿ ಕೊರಗಜ್ಜನನ್ನು ಅವಮಾನಿಸುವ ಯಾವುದೂ ನಡೆದಿದ್ದಲ್ಲ. ಮದುವೆ ಮನೆಯಲ್ಲಿ ಎಲ್ಲರೂ ಖುಷಿಯಲ್ಲಿ ಇರುವಾಗ ಇನ್ನೊಬ್ಬರ ಭಾವನೆಗೆ ಯಾರಾದರು ಧಕ್ಕೆ ತರುತ್ತಾರೆಯೆ?” ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕೊರಗ ಅಭಿವೃದ್ದಿ ಸಂಘದ ಮಾಜಿ ಅಧ್ಯಕ್ಷೆಯಾಗಿರುವ ಸುಶಿಲಾ ನಾಡಾ ಅವರು, “ಕೊರಗ ವೇಷವನ್ನು ಹಾಕುವುದು ಮತ್ತು ಈ ವೇಷ ಹಾಕಿ ಸಮುದಾಯವನ್ನು ಕೀಳು ಮಟ್ಟದಲ್ಲಿ ಬಿಂಬಿಸುವುದು ಕಾನೂನಾತ್ಮಕವಾಗಿ ಅಪರಾಧವಾಗಿದೆ. ಆದರೆ, ಈ ರೀತಿಯ ಕಾನೂನು ಇದ್ದು ಕೂಡಾ ಕೊರಗ ವೇಷ ಹಾಕುವುದು ಮುಂದುವರೆಯುತ್ತಲೇ ಇದೆ. ನಿಜವಾಗಿಯೂ ಕೊರಗರ ಬಗ್ಗೆ ಕಾಳಜಿ ಇರುವವರಾದರೆ, ಮೊನ್ನೆ ಕೋಟದಲ್ಲಿ ಕೊರಗರ ಮೇಲೆ ನಡೆದ ದಾಳಿಯ ಬಗ್ಗೆ ಧ್ವನಿ ಎತ್ತುತ್ತಿದ್ದರು. ಆದರೆ ಇಂದು ಕೊರಗಜ್ಜನಿಗೆ ಅವಮಾನ ಆಗಿದೆ ಎಂದು ಗಲಾಟೆ ಮಾಡುತ್ತಿರುವವರು ಯಾರೂ ಅಂದು ಮಾತಾಡಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮಂಗಳೂರು: ಆದಿವಾಸಿ ಕೊರಗ ಜನಾಂಗದ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ

“ಈಗ ವಿವಾದ ಆಗಿರುವ ಘಟನೆಯಲ್ಲಿ ಅವರು ತಮಾಷೆಯಾಗಿ ಮಾಡಿದ್ದಾರೋ ಅಥವಾ ಕೊರಗಜ್ಜನಿಗೆ ಅವಮಾನ ಮಾಡಲು ಮಾಡಿದ್ದಾರೋ ತನಿಖೆ ನಡೆಯಲಿ. ಕೊರಗಜ್ಜನ ವೇಷ ಹಾಕಿ ಮದುಮಗನಿಗೆ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಒಂದು ವೇಳೆ ಅವರು ಉದ್ದೇಶ ಪೂರ್ವಕವಾಗಿ ಕೊರಗಜ್ಜನ ವೇಷ ಹಾಕಿ ಅವಮಾನಿಸಿದ್ದರೆ ಅದು ತಪ್ಪು, ಹಾಗಾಗಿದ್ದರೆ ಅವರಿಗೆ ಶಿಕ್ಷೆ ಆಗಬೇಕು. ಆದರೆ ಈ ಘಟನೆಯನ್ನು ಧರ್ಮಾಧಾರಿತವಾಗಿ ನೋಡಲಾಗುತ್ತಿದೆ. ಕೊರಗಜ್ಜನ ವೇಷವನ್ನು ಹಾಕಿದ್ದಕ್ಕೆ ಬಂಧಿಸುವುದಾದರೆ, ಎಲ್ಲಾ ಕಡೆಯು ಬಂಧಿಸಬೇಕಾಗಿತ್ತಲ್ಲವೆ?. ಆದರೆ ಇಲ್ಲಿ ಅದಾಗುತ್ತಿಲ್ಲ, ಇಲ್ಲಿ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ. ಹಾಗಾಗಿಯೆ ಧರ್ಮ ನಿಂದನೆ, ದೈವ ನಿಂದನೆ ಎಂದು ಬಿಂಬಿಸಿ ದೊಡ್ಡ ಸುದ್ದಿ ಮಾಡಲಾಗುತ್ತಿದೆ. ಈಗ ನಡೆಯುತ್ತಿರುವ ಬೆಳವಣಿಗೆಯ ಮುಖ್ಯ ಉದ್ದೇಶ ಒಂದು ಧರ್ಮವನ್ನು ಗುರಿ ಮಾಡುವುದು ಬಿಟ್ಟರೆ ಬೇರೇನೂ ಅಲ್ಲ” ಎಂದು ಸುಶಿಲಾ ಅವರು ಹೇಳಿದ್ದಾರೆ.

ಕೊರಗ ಸಮುದಾಯದ ಮತ್ತೊಬ್ಬ ಮುಖಂಡ ಮತ್ತಾಡಿ ಅವರು ಮಾತನಾಡಿ, “ಘಟನೆಯ ಬಗೆಗಿನ ವಿವಾದಾತ್ಮಕ ವಿಡಿಯೊದಲ್ಲಿ ಮದುಮಗನ ವೇಷವನ್ನು ನೋಡಿದೆ. ಅದು ಕೊರಗಜ್ಜನ ವೇಷ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿ ಮದುಮಗನ ತಲೆಗೆ ಮುಟ್ಟಾಳೆ (ಅಡಿಕೆ ಗರಿಯಿಂದ ಮಾಡಿರುವ ತಲೆಗೆ ಧರಿಸುವ ವಸ್ತು) ಹಾಕಿದ್ದರು, ಟೀಶರ್ಟ್ ಧರಿಸಿದ್ದರು ಮತ್ತು ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದರು. ಕಪ್ಪು ಬಣ್ಣ ಹಾಕಿದ ಕೂಡಲೇ ಅದು ಕೊರಗರನ್ನು ಅವಮಾನಿಸಿದ ಹಾಗೆ ಹಾಗಲ್ಲ. ಕಪ್ಪು ಬಣ್ಣದವರು ಕೊರಗರು ಮಾತ್ರ ಅಲ್ಲ, ಎಲ್ಲಾ ಸಮುದಾಯದಲ್ಲೂ ಇದ್ದಾರೆ” ಎಂದಿದ್ದಾರೆ.

ಅದರಲ್ಲೂ ಮದುಮಗ ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿದ್ದಾನೋ ಎಂದು ನನಗೆ ಗೊತ್ತಿಲ್ಲ. ಅವರು ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ ಎಂದೇ ನಾನು ಭಾವಿಸಿದ್ದೇನೆ. ಯಾಕೆಂದರೆ ಅವರಿಗೆ ಇದರ ಕಲ್ಪನೆ ಇದೆಯೆಂದು ನನಗೆ ಅನಿಸುತ್ತಿಲ್ಲ. ಆದರೆ ಈ ವಿವಾದ ಮಾಡುವುದರ ಹಿಂದೆ ಯಾರು ಇದ್ದಾರೆ ಮತ್ತು ಅವರು ಯಾಕಾಗಿ ಇದ್ದಾರೆ ಎಂಬುವುದನ್ನು ಕೂಡಾ ನೋಡಬೇಕಾಗಿದೆ. ಈ ರೀತಿಯ ಭಾವನಾತ್ಮಕ ವಿಷಯವನ್ನು ಕೊರಗರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳದೆ ಯಾರ ಭಾವನೆಗೂ ಧಕ್ಕೆ ಬರದಂತೆ ಸಮಸ್ಯೆಯನ್ನು ಬಗೆಹರಿಸಬೇಕು. ಘಟನೆಯನ್ನು ಕೋಮು ಆಧಾರದಲ್ಲಿ ವಿಭಜಿಸಬಾರದು. ವಿಡಿಯೊವನ್ನು ನೋಡುವಾಗ ಅದರಲ್ಲಿರುವ ಭಾಷೆ ಕೊರಗಜ್ಜನನ್ನು ಅವಮಾನಿಸುವ ಹಾಕೆ ಕಾಣುತ್ತಿಲ್ಲ. ಮುಟ್ಟಾಲೆ ಧರಿಸಿದ ಕೂಡಲೇ ಅದು ಕೊರಗಜ್ಜ ಎಂದು ಹೇಳುವುದು ಕೂಡಾ ಸರಿಯಲ್ಲ. ಈ ವಿಷಯದಲ್ಲಿ ಯಾವುದೆ ರೀತಿಯಲ್ಲಿ ದ್ವೇಷ ಹುಟ್ಟದ ಹಾಗೆ, ತಪ್ಪಾಗಿದ್ದರೆ ಮನವರಿಗೆ ಮಾಡಿ, ಅವುಗಳನ್ನು ತಿದ್ದಿ ಸೌಹಾರ್ದಯುತವಾಗಿ ಬಗೆಹರಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಉಡುಪಿ: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ದೌರ್ಜನ್ಯ ಎಸಗಿದ ಪೊಲೀಸರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...