Homeಕರ್ನಾಟಕಕಜಕಿಸ್ತಾನ: ಇಂದನ ಬೆಲೆ ಏರಿಕೆ ವಿರೋದಿ ಹೋರಾಟ - 3,800 ಬಂದನ

ಕಜಕಿಸ್ತಾನ: ಇಂದನ ಬೆಲೆ ಏರಿಕೆ ವಿರೋದಿ ಹೋರಾಟ – 3,800 ಬಂದನ

ಎಲ್ಲರ ಕನ್ನಡ ಚರ್‍ಚೆಯ ಬಾಗವಾಗಿ ಮಾಡಲಾಗಿರುವ ಪ್ರಾಯೋಗಿಕ ವರದಿ ಇದಾಗಿದ್ದು, ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ.

- Advertisement -
- Advertisement -

(ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ)

ಇಂದನ ಬೆಲೆಗಳ ಹೆಚ್ಚಳವನ್ನು ವಿರೋದಿಸಿ ಕಜಕಿಸ್ತಾನದಲ್ಲಿ ನಡೆದ ಪ್ರತಿಬಟನೆಗಳು ಹಿಂಸಾಚಾರಕ್ಕೆ ತಿರುಗಿದ ಬಳಿಕ ಕಜಕಿಸ್ತಾನದ ಹಲವೆಡೆ ತುರ್‍ತುಪರಿಸ್ತಿತಿ ಜಾರಿಗೊಳಿಸಲಾಗಿದೆ.

ಪ್ರತಿಬಟನೆಯು ಸರ್ಕಾರಿ ವಿರೋದಿ ಗಲಬೆಯಾಗಿ ಮಾರ್‍ಪಟ್ಟಿದ್ದು, ಬಳಿಕ ನಡೆದ ಗರ್ಶಣೆಯಲ್ಲಿ 26 ಪ್ರತಿಬಟನಾಕಾರರು, ಪೊಲೀಸ್ ಮತ್ತು ಬದ್ರತಾ ಪಡೆಗಳ 18 ಜನರು ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಬಂದೂಕಿನ ದಾಳಿ ಮತ್ತು ಸಾವುನೋವುಗಳ ಸಂಕ್ಯೆ ಇನ್ನೂ ಹೆಚ್ಚಿನದಾಗಿರಬಹುದು ಎಂದು ಹೇಳಲಾಗುತ್ತಿದೆ. 3,800ಕ್ಕೂ ಹೆಚ್ಚು ಜನರನ್ನು ಬಂದಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಗಟನೆಯಲ್ಲಿ ಒಬ್ಬ ಪೊಲೀಸ್ ಅದಿಕಾರಿಯ ಶಿರಚ್ಚೇದ ಮಾಡಿರುವುದಾಗಿಯೂ ವರದಿಯಾಗಿದೆ.

ಬುದವಾರದಂದು ದೇಶದ ಅತಿದೊಡ್ಡ ನಗರವಾದ ನೂರ್‌ ಸುಲ್ತಾನ್‌ನಲ್ಲಿರುವ ‌ಅದ್ಯಕ್ಷರ ನಿವಾಸ ಮತ್ತು ಅಲ್ಮಾಟಿಯ ಮೇಯರ್ ಕಚೇರಿಗೆ ನುಗ್ಗಿದ ಪ್ರತಿಬಟನಾಕಾರರು ರಾತ್ರಿಯಿಡೀ ಹಲವು ಕಟ್ಟಡಗಳಿಗೆ ದಾಳಿ ಮಾಡಲು ಪ್ರಯತ್ನಿಸಿದ್ದರು. ಹಲವು ಸರಕಾರಿ ಕಚೇರಿಗಳಿಗೆ ಪ್ರತಿಬಟನಾಕಾರರು ಬೆಂಕಿ ಹಚ್ಚಿದ್ದರು.

“ಡಜನ್‌ಗಟ್ಟಲೆ ದಾಳಿಕೋರರನ್ನು ಹತ್ಯೆ(liquidated) ಮಾಡಲಾಗಿದೆ” ಎಂದು ಪೊಲೀಸ್ ವಕ್ತಾರ ಸಲ್ತಾನಾತ್ ಅಜಿರ್‍ಬೆಕ್‌‌ ತಿಳಿಸಿದ್ದಾರೆ. ಕಜಕಿಸ್ತಾನ್‌ ಅದ್ಯಕ್ಷರಾದ ಕಸ್ಸೈಂ ಜೋಮಾರ್ಟ್ ಟೋಕಾಯೆವ್ ಆರಂಬದಲ್ಲಿ ಪ್ರತಿಬಟನಾಕಾರರನ್ನು ಸಮಾದಾನಪಡಿಸುವುದಕ್ಕೆ ಪ್ರಯತ್ನಿಸುತ್ತಿರುವಂತೆ ತೋರುತ್ತಿದ್ದರೂ, ನಂತರ ಅವರು ಅಶಾಂತಿಯನ್ನು ನಿಗ್ರಹಿಸಲು ಕಟಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇಡೀ ದೇಶದಲ್ಲಿ ಎರಡು ವಾರಗಳ ಕಾಲ ತುರ್‍ತು ಪರಿಸ್ತಿತಿಯನ್ನು ಗೋಶಿಸಿದ್ದಾರೆ.

ದೇಶದ್ರೋಹ ಶಂಕೆಯ ಮೇಲೆ ಗುಪ್ತಚರ ಸಂಸ್ಥೆಯ ಮಾಜಿ ಮುಕ್ಯಸ್ತರನ್ನು ಬಂದಿಸಲಾಗಿದೆ. ರಾಶ್ಟ್ರೀಯ ಬದ್ರತಾ ಸಮಿತಿ (ಕೆಎನ್‌ಬಿ) ಮಾಜಿ ಮುಕ್ಯಸ್ತ ಕರೀಮ್ ಮಾಸಿಮೊವ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ತನಿಕೆಗೆ ಒಳಪಡಿಸಿದ ಬಳಿಕ ಅವರನ್ನು ಬಂದಿಸಿರುವುದಾಗಿ ಕೆಎನ್‌ಬಿ ಹೇಳಿದೆ.

“ದೇಶದ್ರೋಹ ಅಪರಾದ ಎಸಗಿರುವ ಶಂಕೆಯ ಮೇಲೆ, ಕೆಎನ್‌ಬಿಯ ಮಾಜಿ ಅದ್ಯಕ್ಷ ಕೆ.ಕೆ. ಮಾಸಿಮೊವ್ ಅವರನ್ನು ಬಂದಿಸಲಾಯಿತು. ಇತರರೊಂದಿಗೆ ಅವರನ್ನು ತಾತ್ಕಾಲಿಕ ಬಂದನದಲ್ಲಿ ಇರಿಸಲಾಯಿತು” ಎಂದು ಹೇಳಿಕೆ ತಿಳಿಸಿದೆ.

ಹಿಂಸಾಚಾರದ ಬಳಿಕ ಶುಕ್ರವಾರ ಕಜಕಿಸ್ತಾನ್‌ನ ಪ್ರಮುಕ ನಗರಗಳ ಬೀದಿಗಳನ್ನು ಬದ್ರತಾ ಪಡೆಗಳು ಹಿಡಿತಕ್ಕೆ ತೆಗೆದುಕೊಂಡಿವೆ. ರಶ್ಯಾದ ಬೆಂಬಲಿತ ಅದ್ಯಕ್ಶ ಕಾಸಿಮ್-ಜೊಮಾರ್ಟ್ ಟೊಕಾಯೆವ್ ಅವರು ದೇಶಾದ್ಯಂತ ದಂಗೆಯನ್ನು ಹತ್ತಿಕ್ಕಲು ಸೇನೆಗೆ ಆದೇಶಿಸಿದ್ದಾರೆ. ಬಂದೂಕು ಜಳುಪಿಸಲು ಅವಕಾಶ ನೀಡಿದ್ದಾರೆ.

ಅಶಾಂತಿಯನ್ನು ಹತ್ತಿಕ್ಕಲು ಸೇನೆಯನ್ನು ಆಹ್ವಾನಿಸಿದ ನಂತರ ಕಜಕಿಸ್ತಾನದಲ್ಲಿ ರಶ್ಯಾದ ಪ್ರಬಾವವನ್ನು ಕಡಿಮೆ ಮಾಡುವುದು ಕಷ್ಟಕರವೆಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶುಕ್ರವಾರ ಎಚ್ಚರಿಸಿದ್ದಾರೆ.

“ಇತ್ತೀಚಿನ ಇತಿಹಾಸದಲ್ಲಿ ಒಂದು ಪಾಟವಿದೆ. ಒಮ್ಮೆ ರಶ್ಯನ್ನರು ನಿಮ್ಮ ಮನೆಗೆ ಬಂದರೆ, ಅವರನ್ನು ಹೊರಗೆ ಕಳುಹಿಸುವುದು ತುಂಬಾ ಕಶ್ಟವಾಗುತ್ತದೆ” ಎಂದು ಬ್ಲಿಂಕೆನ್ ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...