ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಹಿರಂಗ ಬೆದರಿಕೆ ಹಾಕಿದ್ದಾರೆ.
ಅಕ್ಟೋಬರ್ 16ರಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಠೋಡ್, “ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಇವತ್ತು ಫೋನ್ ಮೂಲಕ ಬೆದರಿಕೆ ಹಾಕಿದವರು, ಮುಂದೆ ನಿಮ್ಮ ಮನೆಗೂ ಬರಬಹುದು” ಎಂದು ಹೇಳಿದ್ದಾರೆ.
“ಆರ್‌ಎಸ್‌ಎಸ್‌ನವರು ಬಹಳ ಕಟ್ಟರ್ ಪಂಥದವರು, ಸ್ವಾಭಿಮಾನಿ ದೇಶ ಭಕ್ತರು, ಹಣಕ್ಕಾಗಿ ಯಾವುದೋ ಪರಿವಾರದ ಗುಲಾಮಗಿರಿ ಬಿಳಿಸುವವರು ಆರ್‌ಎಸ್‌ಎಸ್‌ನವರು ಅಲ್ಲ” ಎಂದಿದ್ದಾರೆ.
ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಿಷೇಧ ಮಾಡಲಿ ಮುಂದೆ ನೋಡುವ, ಸರ್ಕಾರ ಶಾಶ್ವತ ಇರುವುದಿಲ್ಲವಲ್ಲ. ಸಚಿವ ಸಂಪುಟದಲ್ಲಿ ತೀರ್ಮಾನ ಆದರೆ ಇಡೀ ಕರ್ನಾಟಕದ ಕಾನೂನು, ಸುವ್ಯವಸ್ಥೆ ಕೆಟ್ಟು ಹೋಗುವ ಪರಿಸ್ಥಿತಿ ಬರುತ್ತದೆ” ಎಂದು ಹೇಳಿದ್ದಾರೆ.
Each day brings fresh proof: the threats continue, but I will not be intimidated.
They tried with phone calls and when that fails they escalate.
Yesterday, it’s @BJP4Karnataka’s blue eyed boy and BJP Chittapur MLA candidate, who warns “….now you are only being threatened… pic.twitter.com/gq79xkYong
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 18, 2025
ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಪ್ರತಿದಿನ ಹೊಸ ಪುರಾವೆಗಳು ಸಿಗುತ್ತಿವೆ: ಬೆದರಿಕೆಗಳು ಮುಂದುವರಿಯುತ್ತಿವೆ, ಆದರೆ ನಾನು ಬೆದರಿಸುವುದಿಲ್ಲ” ಎಂದಿದ್ದಾರೆ.
“ಅವರು ಫೋನ್ ಕರೆಗಳ ಮೂಲಕ ಪ್ರಯತ್ನಿಸಿದರು. ಅದು ವಿಫಲವಾದಾಗ ಇನ್ನು ಹೆಚ್ಚಿನದ್ದನ್ನು ಮಾಡುತ್ತಿದ್ದಾರೆ. ನಿನ್ನೆ ನೀಲಿ ಕಣ್ಣಿನ ಹುಡುಗ ಮತ್ತು ಬಿಜೆಪಿ ಚಿತ್ತಾಪುರ ಶಾಸಕ ಅಭ್ಯರ್ಥಿ, ‘ಈಗ ನಿಮಗೆ ಫೋನ್ ಮೂಲಕ ಮಾತ್ರ ಬೆದರಿಕೆ ಹಾಕಲಾಗುತ್ತಿದೆ, ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್‌ನವರು ನೇರವಾಗಿ ನಿಮ್ಮ ಮನೆಗೆ ಬರಬಹುದು. ಆರ್‌ಎಸ್‌ಎಸ್‌ನವರು ಕಟ್ಟರ್ ಪಂಥೀಯರು ಮತ್ತು ದೇಶ ಭಕ್ತರು” ಎಂದು ಎಚ್ಚರಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೇ
ನಿಮ್ಮ ಗೂಂಡಾಗಳು ಪ್ರಯತ್ನಿಸುತ್ತಲೇ ಇರಬಹುದು. ನಾನು ಎಲ್ಲಿ ವಾಸಿಸುತ್ತಿದ್ದೇನೆಂದು ನಿಮಗೆ ತಿಳಿದಿದೆ” ಎಂದು ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ : ಆರೋಪಿಯನ್ನು ಬಂಧಿಸಿದ ಪೊಲೀಸರು


