ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (ಎಎಫ್‌ಎಸ್‌ಪಿಎ) ಮತ್ತು “ಭಯೋತ್ಪಾದಕ”ರು ಎಂದು ಪ್ರತಿಪಾದಿಸಿ ನಾಗರಿಕ ಹತ್ಯೆ ನಡೆಸುವುದರ ವಿರುದ್ಧ ಮಂಗಳವಾರ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಸಾವಿರಾರು ಜನರು, ಅದರಲ್ಲೂ ಹೆಚ್ಚಾಗಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಬೃಹತ್ ರ‍್ಯಾಲಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಎಎಫ್‌ಎಸ್‌ಪಿಎ ರದ್ದತಿ
ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವಾಗಿರುವ ಡಿಸೆಂಬರ್ 10ದಂದು ನಡೆಸಲಾಗಿರುವ ಈ ರ‍್ಯಾಲಿಯನ್ನು ಮಣಿಪುರದ ಥಾವ್ ಮೈದಾನದಿಂದ ಪ್ರಾರಂಭಿಸಿ, ಅಲ್ಲಿಂದ 5 ಕಿಮೀ ದೂರದಲ್ಲಿರುವ ಖುಮಾನ್ ಲಂಪಾಕ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಒಂದು ದಿನದ ನಂತರ ಪ್ರತಿಭಟನೆ ದಾಖಲಾಗಿದೆ. ರಾಜ್ಯದಲ್ಲಿ ಹೊಸದಾಗಿ ಹಿಂಸಾಚಾರ ಪ್ರಾರಂಭವಾದ ಹಿನ್ನೆಲೆಯಲ್ಲಿ ನವೆಂಬರ್ 16 ರಂದು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತ್ತು.
ಆಲ್ ಮಣಿಪುರ ಯುನೈಟೆಡ್ ಕ್ಲಬ್ಸ್ ಆರ್ಗನೈಸೇಶನ್, ಪೊಯಿರೆ ಲೀಮಾರೊಲ್ ಅಪುನ್ಬಾ ಮೀರಾ ಪೈಬಿ, ಆಲ್ ಮಣಿಪುರ ಮಹಿಳಾ ಸ್ವಯಂಸೇವಕ ಸಂಘ, ಮಾನವ ಹಕ್ಕುಗಳ ಸಮಿತಿ ಮತ್ತು ಮಣಿಪುರ ವಿದ್ಯಾರ್ಥಿಗಳ ಒಕ್ಕೂಟದಂತಹ ಐದು ಸಂಸ್ಥೆಗಳು ರ‍್ಯಾಲಿಯನ್ನು ಆಯೋಜಿಸಿತ್ತು. ವಿವಿಧ ಸಮುದಾಯಗಳ ಜನರು ಮತ್ತು ನಿರಾಶ್ರಿತ ಶಿಬಿರದ ಜನರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ರ‍್ಯಾಲಿಯ ವೇಳೆ ಪ್ರತಿಭಟನಾಕಾರರು “ಎಎಫ್‌ಎಸ್‌ಪಿಎ ರದ್ದುಪಡಿಸಿ”, “ಮಣಿಪುರವನ್ನು ಅಳಿಸಬೇಡಿ”, “ಮಣಿಪುರವನ್ನು ಉಳಿಸಿ” ಇತ್ಯಾದಿ ಸಂದೇಶಗಳ ಫಲಕಗಳನ್ನು ಹಿಡಿದುಕೊಂಡಿದ್ದರು. ಸಶಸ್ತ್ರ ಪಡೆಗಳಿಗೆ ವ್ಯಾಪಕ ಅಧಿಕಾರವನ್ನು ನೀಡುವ AFSPA ಜಾರಿಯನ್ನು ರದ್ದುಗೊಳಿಸುವವರೆಗೆ ನಾವು ವಿರಮಿಸುವುದಿಲ್ಲ ಎಂದು ಪ್ರತಿಭಟನಾಕಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನಾವು AFSPA ಯನ್ನು ವಿರೋಧಿಸುತ್ತೇವೆ. ಕುಕಿ ಬಂಡುಕೋರರು ನಡೆಸಿದ ಆರು ಅಮಾಯಕ ಮಹಿಳೆಯರು ಮತ್ತು ಮಕ್ಕಳ ಹತ್ಯೆಯನ್ನು ನಾವು ಖಂಡಿಸುತ್ತೇವೆ” ಎಂದು ಪ್ರತಿಭಟನಾಕಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಎಫ್‌ಎಸ್‌ಪಿಎ ರದ್ದತಿ
ಜಿರಿಬಾಮ್ ಜಿಲ್ಲೆಯ ಆರು ನಾಗರಿಕರ ಹತ್ಯೆ ನಡೆದ ನಂತರ ಕಳೆದ ತಿಂಗಳು ಇಂಫಾಲ್ ಕಣಿವೆಯಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದ್ದವು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಜನಸಮೂಹವು ಮಂತ್ರಿಗಳು ಸೇರಿದಂತೆ ಹಲವಾರು ಶಾಸಕರ ಮನೆಗಳು ಮತ್ತು ಆಸ್ತಿಗಳಿಗೆ ಬೆಂಕಿ ಹಚ್ಚಿ ದಾಳಿ ನಡೆಸಿತ್ತು.
ಕಳೆದ ತಿಂಗಳು ಇಂಫಾಲ್ ಕಣಿವೆಯ ಆರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ AFSPA ಅನ್ನು ಮತ್ತೆ ಜಾರಿ ಮಾಡಲಾಗಿತ್ತು. ಇದು ಕಣಿವೆ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಆಡಳಿತರೂಢ ಎನ್‌ಡಿಎ ಪಕ್ಷಗಳ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಸಭೆ ನಡೆಸಿ ಕೇಂದ್ರ ಸರ್ಕಾರವನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ರೋಹಿಂಗ್ಯಾ ನಿರಾಶ್ರಿತರಿಗೆ ನೀರು, ವಿದ್ಯುತ್ ನೀಡುವುದು ನಮ್ಮ ಕರ್ತವ್ಯ: ಫಾರೂಕ್ ಅಬ್ದುಲ್ಲಾ
ರೋಹಿಂಗ್ಯಾ ನಿರಾಶ್ರಿತರಿಗೆ ನೀರು, ವಿದ್ಯುತ್ ನೀಡುವುದು ನಮ್ಮ ಕರ್ತವ್ಯ: ಫಾರೂಕ್ ಅಬ್ದುಲ್ಲಾ


