ಮಣಿಪುರದಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದ ನಂತರ ಕಾಂಗ್ರೆಸ್ ಪಕ್ಷವೂ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, “ರಾಜಧರ್ಮ”ವನ್ನು ಅನುಸರಿಸದ ಅವರು ಸಾಂವಿಧಾನಿಕ ಉಲ್ಲಂಘನೆ ಮಾಡಿದ್ದು, ಈ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಮಣಿಪುರವನ್ನು ಕುದಿಯುವ ಸ್ಥಿತಿಯಲ್ಲಿಡಲು ಬಿಜೆಪಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಮಣಿಪುರ
ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತ ಸುದ್ದಿಯ ಸ್ಕ್ರೀನ್‌ಗ್ರಾಬ್ ಅನ್ನು ಕೂಡಾ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, “ಬಿಜೆಪಿ ಮಣಿಪುರವನ್ನು ಸುಟ್ಟ ಬೆಂಕಿಕಡ್ಡಿಯಂತೆ ಮಾಡಿದೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಬಿಜೆಪಿಗೆ ಮಣಿಪುರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನರೇಂದ್ರ ಮೋದಿ ಅವರೇ, ಮಣಿಪುರಕ್ಕೆ ನಿಮ್ಮ ಕೊನೆಯ ಭೇಟಿ 2022 ರ ಜನವರಿಯಲ್ಲಿ ಬಿಜೆಪಿಗಾಗಿ ಮತ ಕೇಳುವುದಕ್ಕೆ ತೆರಳಿದ್ದು. ಮೇ 3, 2023 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಂದಿನಿಂದ 600 ಕ್ಕೂ ಹೆಚ್ಚು ದಿನಗಳು ಕಳೆದಿವೆ. ಅಲ್ಲದೆ, ಉಪಗ್ರಹ ಚಿತ್ರಗಳ ಮೂಲಕ ಮಾಧ್ಯಮ ವರದಿಗಳು ಈಗ ರಾಜ್ಯದಲ್ಲಿ ಹಳ್ಳಿ – ಹಳ್ಳಿಗಳು ನಾಶವಾಗುತ್ತಿವೆ ಎಂದು ಬಹಿರಂಗಪಡಿಸಿದೆ” ಎಂದು ಅವರು ಹೇಳಿದ್ದಾರೆ.
.@narendramodi ji,
Your last visit to Manipur was for seeking votes for BJP, way back in January 2022.
Violence erupted in the state on 3rd May 2023.
More than 600 days have passed, and media reports through satellite images have now revealed that villages after villages… pic.twitter.com/kVVLzb4Tw6
— Mallikarjun Kharge (@kharge) January 4, 2025
ಇತ್ತೀಚೆಗೆ ರಾಜ್ಯದ ಕಾಂಗ್‌ಪೊಕ್ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಗುಂಪೊಂದು ದಾಳಿ ನಡೆಸಲಾಗಿದ್ದು, ಹೊಸದಾಗಿ ಹಿಂಸಾಚಾರ ನಡೆದಿದೆ ಎಂದು ಖರ್ಗೆ ಹೇಳಿದ್ದಾರೆ. “ನಿಮ್ಮ ಅಸಮರ್ಥ ಮತ್ತು ನಾಚಿಕೆಯಿಲ್ಲದ ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ನಿಮ್ಮ ಅನುಪಸ್ಥಿತಿಯನ್ನು ಅನುಕೂಲಕರವಾಗಿ ಹೇಳಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
”250 ಕ್ಕೂ ಹೆಚ್ಚು ಅಮಾಯಕರ ಸಾವುಗಳು ಮತ್ತು 60,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿರುವ ಸುಂದರ ರಾಜ್ಯವನ್ನು ಕುದಿಯುವ ಸ್ಥಿತಿಯಲ್ಲಿಡಲು ಬಿಜೆಪಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ನಾವು ಅತ್ಯಂತ ಜವಾಬ್ದಾರಿಯಿಂದ ಮತ್ತೆ ಹೇಳುತ್ತಿದ್ದೇವೆ. ಜನರು ಈಗಲೂ 20 ತಿಂಗಳಿನಿಂದ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ,” ಎಂದು ಖರ್ಗೆ ಹೇಳಿದ್ದಾರೆ.
ಶಾಂತಿ ಮತ್ತು ಸಹಜತೆಯನ್ನು ಖಚಿತಪಡಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಥಮಿಕ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂದು ಅವರು ಹೇಳಿದ್ದಾರೆ. “ಡಿಸೆಂಬರ್ 6 ರಂದು, ಮಣಿಪುರದ ಇಂಡಿಯಾ ಒಕ್ಕೂಟದ ಪಕ್ಷಗಳು ನಿಮಗೆ ಮೂರು ನಿರ್ದಿಷ್ಟ ಮತ್ತು ಸರಳ ವಿನಂತಿಗಳನ್ನು ಮಾಡಿದ್ದವು. 2024 ರ ಅಂತ್ಯದ ಮೊದಲು ಮಣಿಪುರಕ್ಕೆ ಭೇಟಿ ನೀಡಿ, ಆದರೆ ನೀವು ಮಾಡಲಿಲ್ಲ. ದೆಹಲಿಯಲ್ಲಿರುವ ನಿಮ್ಮ ಕಚೇರಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕರೆ ಮಾಡಿ, ಆದರೆ ನೀವು ಮಾಡಿಲ್ಲ. ಜೊತೆಗೆ ಮಣಿಪುರದಲ್ಲಿ ನಿಮ್ಮನ್ನು ನೇರವಾಗಿ ತೊಡಗಿಸಿಕೊಳ್ಳಿ, ಆದರೆ ನೀವು ಮಾಡುವಂತೆ ತೋರುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಛತ್ತೀಸ್‌ಗಢ | ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದ ಪತ್ರಕರ್ತ ಶವವಾಗಿ ಪತ್ತೆ
ಛತ್ತೀಸ್‌ಗಢ | ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದ ಪತ್ರಕರ್ತ ಶವವಾಗಿ ಪತ್ತೆ


