ಮಣಿಪುರದ ಕುಕಿ ಪ್ರಾಬಲ್ಯದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಹಮರ್ ಬುಡಕಟ್ಟು ಸಂಘಟನೆಯ ನಾಯಕನನ್ನು ಅಪರಿಚಿತ ಜನರು ಥಳಿಸಿದ ನಂತರ ಕರ್ಫ್ಯೂ ವಿಧಿಸಲಾಗಿದೆ. ಇದು ಹಮರ್ ಬುಡಕಟ್ಟು ಜನರಿಂದ ಭಾರಿ ಪ್ರತಿಭಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಮರ್ ಇನ್ಪುಯಿ ಪ್ರಧಾನ ಕಾರ್ಯದರ್ಶಿ ರಿಚರ್ಡ್ ಹಮರ್ ಅವರ ವಾಹನವು ದ್ವಿಚಕ್ರ ವಾಹನ ಸವಾರನೊಂದಿಗೆ ಅಪಘಾತಕ್ಕೀಡಾದಾಗ ವಾಗ್ವಾದ ಪ್ರಾರಂಭವಾಯಿತು.
ಹಮರ್ ಬುಡಕಟ್ಟು ಜನಾಂಗದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ನಾಯಕನನ್ನು ಜನರ ಗುಂಪೊಂದು ಥಳಿಸಿದಾಗ ವಿವಾದ ಉಲ್ಬಣಗೊಂಡಿತು ಎಂದು ಅವರು ಹೇಳಿದರು.
“ರಿಚರ್ಡ್ ಹಮರ್ ಇನ್ಪುಯಿ ಪ್ರಧಾನ ಕಾರ್ಯದರ್ಶಿ ಮನೆಗೆ ಹೋಗುವಾಗ ಕೆಲವು ಪುರುಷರ ಗುಂಪೊಂದು ಅವರನ್ನು ಹಿಡಿದು, ಝೆನ್‌ಹಾಂಗ್ ಲಮ್ಕಾದ ವಿಕೆ ಮಾಂಟೆಸ್ಸರಿ ಶಾಲೆಯ ಆವರಣದಲ್ಲಿ ತನ್ನ ಗುರುತು ಹೇಳಿದ ನಂತರವೂ ಅವರ ಕಣ್ಣುಗಳಿಗೆ ಬಟ್ಟೆ ಕಟ್ಟಿ ನಿರಂತರವಾಗಿ ಥಳಿಸಿದರು. ರಿಚರ್ಡ್ ಹಮರ್ ಮೇಲೆ ಹಲ್ಲೆ ನಡೆಸಿದ ಸ್ವಲ್ಪ ಸಮಯದ ನಂತರ, ಪ್ರಧಾನ ಕಾರ್ಯದರ್ಶಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಹಮರ್ ಇನ್ಪುಯಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಡುವು ಮುಗಿದ ನಂತರ, ಚುರಾಚಂದ್‌ಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಹಮರ್ ಬುಡಕಟ್ಟಿನ ನೂರಾರು ಸದಸ್ಯರು ಬೀದಿಗಿಳಿದು ಘೋಷಣೆಗಳನ್ನು ಕೂಗುತ್ತಾ ಕಲ್ಲುಗಳನ್ನು ಎಸೆದರು ಎಂದು ಮೂಲಗಳು ತಿಳಿಸಿವೆ.
ಉಲ್ಬಣಗೊಳ್ಳುವ ನಿರೀಕ್ಷೆಯಿದ್ದ ಅಧಿಕಾರಿಗಳು, 2023 ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ರ ಸೆಕ್ಷನ್ 163 ರ ಅಡಿಯಲ್ಲಿ ಪಟ್ಟಣದಲ್ಲಿ ಕರ್ಫ್ಯೂ ಜಾರಿಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳನ್ನು ಕರೆದರು ಎಂದು ಮೂಲಗಳು ತಿಳಿಸಿವೆ.
ಚುರಾಚಂದ್‌ಪುರ ಮೂಲದ ಮೂಲಗಳು ತಿಳಿಸಿರುವ ಪ್ರಕಾರ, ಝೋಮಿ ಬುಡಕಟ್ಟು ಜನಾಂಗದವರ ವಿರುದ್ಧ ಹಮರ್ ಮತ್ತು ಕುಕಿ ಬುಡಕಟ್ಟು ಜನಾಂಗದವರ ಗುಂಪಿನ ನಡುವೆ ಘರ್ಷಣೆಮ ಕಲ್ಲು ತೂರಾಟಗಳು ವರದಿಯಾಗಿವೆ.
ಸ್ಥಳದ ದೃಶ್ಯಗಳಲ್ಲಿ ಪ್ರತಿಭಟನಾಕಾರರು ಮೊಬೈಲ್ ಟವರ್‌ನಿಂದ ಜೋಮಿ ಬುಡಕಟ್ಟು ಜನಾಂಗದವರು ಬಳಸುತ್ತಿದ್ದ ಧ್ವಜವನ್ನು ಕಿತ್ತೆಸೆದಿರುವುದನ್ನು ತೋರಿಸಲಾಗಿದೆ.
ಹತ್ರಾಸ್| ಹಲವು ವಿದ್ಯಾರ್ಥಿನಿಯರ ಮೇಲೆ ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ; ವೀಡಿಯೊಗಳು ಬಹಿರಂಗ


