Homeಮುಖಪುಟಫತೇಪುರದಲ್ಲಿ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ, ಸಾವು: ಆರೋಪಿಗಳ ಬೆಂಬಲಿಗರಿಂದ ಆನ್‌ಲೈನ್‌ನಲ್ಲಿ ಹತ್ಯೆ ಸಂಭ್ರಮಾಚರಣೆ

ಫತೇಪುರದಲ್ಲಿ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ, ಸಾವು: ಆರೋಪಿಗಳ ಬೆಂಬಲಿಗರಿಂದ ಆನ್‌ಲೈನ್‌ನಲ್ಲಿ ಹತ್ಯೆ ಸಂಭ್ರಮಾಚರಣೆ

- Advertisement -
- Advertisement -

ಫತೇಪುರ: ಉತ್ತರಪ್ರದೇಶದ ಫತೇಪುರದಲ್ಲಿ 17 ವರ್ಷದ ಮುಸ್ಲಿಂ ವಿದ್ಯಾರ್ಥಿ ಆರಿಶ್ ಖಾನ್ ಅವರನ್ನು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ವ್ಯಾಪಕ ಆಕ್ರೋಶ ಮತ್ತು ಭೀತಿಯನ್ನು ಹುಟ್ಟುಹಾಕಿದೆ. ಈ ದಾಳಿಯ ಭಯಾನಕ ದೃಶ್ಯಗಳು ಮತ್ತು ನಂತರ ಆರೋಪಿಗಳ ಬೆಂಬಲಿಗರಿಂದ ನಡೆದ ಸಾರ್ವಜನಿಕ ಸಂಭ್ರಮಾಚರಣೆಯು ಇದು ದ್ವೇಷದ ಅಪರಾಧವಾಗಿರಬಹುದೆಂಬ ಸಂಶಯಕ್ಕೆ ಕಾರಣವಾಗಿದೆ. ಜುಲೈ 23 ರಂದು ನಡೆದ ಈ ಘಟನೆ, ಸಂತ್ರಸ್ತ ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗಿಸಿದ್ದು ಮಾತ್ರವಲ್ಲದೆ, ಹೆಚ್ಚುತ್ತಿರುವ ಕೋಮು ವೈರತ್ವ ಮತ್ತು ಶಿಕ್ಷೆಯಿಲ್ಲದೆ ನಡೆಯುತ್ತಿರುವ ಅಪರಾಧಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯೋಜಿತ ಹತ್ಯೆಯ ಸಂಶಯ

ಮಹರ್ಷಿ ವಿದ್ಯಾ ಮಂದಿರ ಹಿರಿಯ ಮಾಧ್ಯಮಿಕ ಶಾಲೆಯ 12ನೇ ತರಗತಿ ವಿದ್ಯಾರ್ಥಿಯಾಗಿದ್ದ ಆರಿಶ್ ಖಾನ್, ಶಾಲೆಯಿಂದ ಹೊರಬಂದ ಕೂಡಲೇ ಮೂವರು ಯುವಕರು ಆತನ ಮೇಲೆ ದಾಳಿ ನಡೆಸಿದರು. ಹರ್ಷವರ್ಧನ್ ಪಾಂಡೆ, ದೀಪಕ್ ಸವಿತಾ ಮತ್ತು ಭರತ್ ಸರ್ಕಾರ್ ಎಂದು ಗುರುತಿಸಲಾದ ಈ ಮೂವರು, ಸ್ಕೂಟರ್‌ನಲ್ಲಿ ಬಂದು ರಾಡ್ ಮತ್ತು ದೊಣ್ಣೆಗಳಿಂದ ಆರಿಶ್ ಮೇಲೆ ಹಲ್ಲೆ ನಡೆಸಿದರು. ಸಿಸಿಟಿವಿ ದೃಶ್ಯಗಳಲ್ಲಿ ಈ ಸಂಪೂರ್ಣ ಘಟನೆ ದಾಖಲಾಗಿದೆ. ಥಳಿತದಿಂದ ಅಪ್ರಜ್ಞಾವಸ್ಥೆಗೆ ಜಾರಿದ ಆರಿಶ್, ತೀವ್ರ ಗಾಯಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಾದರು. ಆದರೆ 36 ಗಂಟೆಗಳ ನಂತರ, ಜುಲೈ 26ರಂದು ಅವರು ಸಾವನ್ನಪ್ಪಿದರು. ಪೊಲೀಸರು ತನಿಖೆ ಆರಂಭಿಸಿದ್ದರೂ, ಅನೇಕರು ಈ ದಾಳಿಯನ್ನು ಮುಸ್ಲಿಂ ಗುರುತಿನ ಕಾರಣಕ್ಕಾಗಿ ನಡೆದ ಜನಸಮೂಹ ಹತ್ಯೆ (lynching) ಎಂದು ಆರೋಪಿಸುತ್ತಿದ್ದಾರೆ.

ನ್ಯಾಯಕ್ಕಾಗಿ ಕುಟುಂಬದ ಬೇಡಿಕೆ

ವಿದ್ಯುತ್ ತಂತ್ರಜ್ಞನ ಮಗನಾದ ಆರಿಶ್, ತನ್ನ ತಂದೆ-ತಾಯಿ ಮತ್ತು ಇಬ್ಬರು ತಂಗಿಯರನ್ನು ಅಗಲಿದ್ದಾನೆ. ಮಾಧ್ಯಮದೊಂದಿಗೆ ಮಾತನಾಡಿದ ಆತನ ತಂದೆ, “ಯಾವ ಕಾರಣಕ್ಕೆ ನಮ್ಮ ಮಗನನ್ನು ಆ ಹುಡುಗರು ಕೊಂದರು ಎಂದು ನಮಗೆ ಗೊತ್ತಿಲ್ಲ. ನಮಗೆ ನ್ಯಾಯ ಬೇಕು. ನಮ್ಮ ಮಗನನ್ನು ಹಗಲು ಹೊತ್ತಿನಲ್ಲಿ ಕೊಲೆ ಮಾಡಲಾಗಿದೆ” ಎಂದು ದುಃಖ ತೋಡಿಕೊಂಡರು.

ಜುಲೈ 24ರಂದು ಕುಟುಂಬದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಮೂವರು ಆರೋಪಿಗಳ ವಿರುದ್ಧ ಪ್ರಚೋದನೆ, ಹಲ್ಲೆ, ಮತ್ತು ಉದ್ದೇಶಪೂರ್ವಕ ಗಾಯಗೊಳಿಸಿದ ಆರೋಪಗಳನ್ನು ದಾಖಲಿಸಲಾಗಿದೆ. ಜುಲೈ 26ರಂದು, ಆರಿಶ್ ಸಾವನ್ನಪ್ಪಿದ ದಿನವೇ ಮೂವರನ್ನೂ ಬಂಧಿಸಲಾಯಿತು. ನಂತರ, ಆರೋಪಿಗಳ ಬೆಂಬಲಿಗರು ಹತ್ಯೆಯನ್ನು ವೈಭವೀಕರಿಸಿ ಆನ್‌ಲೈನ್‌ನಲ್ಲಿ ಮತ್ತು ಬೀದಿಗಳಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಆರೋಪಿಸಿ ಆರಿಶ್‌ನ ತಾತ ಮತ್ತೊಂದು ದೂರು ದಾಖಲಿಸಿದ್ದಾರೆ.

ಹಿಂಸೆಯ ಸಂಭ್ರಮಾಚರಣೆ

ಆರೋಪಿಗಳ ಬೆಂಬಲಿಗರು ಬೈಕ್ ರ್ಯಾಲಿ ನಡೆಸಿ, ಮುಸ್ಲಿಮರನ್ನು ಗುರಿಯಾಗಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿ, ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆರಿಶ್ ಹತ್ಯೆಯನ್ನು ವೈಭವೀಕರಿಸಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಆರೋಪಿಗಳ ಸಹಾನುಭೂತಿ ಉಳ್ಳವರಲ್ಲಿ ಒಬ್ಬನಾದ ಅಭಯ್ ದ್ವಿವೇದಿ, Instagram ನಲ್ಲಿ ಸಂಭ್ರಮಾಚರಣೆಯ ವೀಡಿಯೊವನ್ನು ಪೋಸ್ಟ್ ಮಾಡಿ, “ಜಲ್ದಿ ವಾಪ್ಸಿ ಹೋಗಿ ಮೇರೆ ಶೇರ್ ಕಿ” (ನನ್ನ ಸಿಂಹ ಶೀಘ್ರದಲ್ಲೇ ಹಿಂದಿರುಗುತ್ತಾನೆ) ಎಂದು ಬರೆದುಕೊಂಡಿದ್ದನು. ಈ ಪೋಸ್ಟ್‌ನಲ್ಲಿ ಆತ ಆರೋಪಿಗಳೊಂದಿಗಿನ ಚಿತ್ರಗಳನ್ನೂ ಹಂಚಿಕೊಂಡಿದ್ದನು. ಮತ್ತೊಂದು ಪೋಸ್ಟ್‌ನಲ್ಲಿ, “ಫುಲ್ ಸಪೋರ್ಟ್, ಮೇರಿ ಜಾನ್,” ಎಂದು ಬರೆದಿದ್ದನು.

justthhemaa_ ಎಂಬ ಹ್ಯಾಂಡಲ್‌ನ ಮತ್ತೊಬ್ಬ ಬಳಕೆದಾರ ಆರಿಶ್ ಮತ್ತು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಅಶ್ಲೀಲ ಮತ್ತು ದ್ವೇಷಪೂರಿತ ನಿಂದನೆಗಳನ್ನು ಪೋಸ್ಟ್ ಮಾಡಿದ್ದನು. ಆ ಪೋಸ್ಟ್ ಹೀಗಿದೆ: “Ariss madarchodd sala mr gyaa bhn ka lavdaa! phle glti krenge fhir justice mangenge bhn ke lavde, Lavda milega tmhe justice Nhii bsdkk. Mulle madarchodd.” (“ಆರಿಶ್, ನೀನು ಸತ್ತೇ ಹೋದೆ! ಮೊದಲು ತಪ್ಪು ಮಾಡಿ ಆಮೇಲೆ ನ್ಯಾಯ ಕೇಳುತ್ತೀರಾ? ನಿಮಗೆ ಯಾವ ನ್ಯಾಯವೂ ಸಿಗುವುದಿಲ್ಲ. ಮುಸ್ಲಿಂ …”.)

ಈ ಎರಡೂ ಖಾತೆಗಳನ್ನು ನಂತರ ನಿಷ್ಕ್ರಿಯಗೊಳಿಸಲಾಯಿತು. ಈ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಆರಿಶ್‌ನ ತಾತ ಸಾಕ್ಷ್ಯವಾಗಿ ಪೊಲೀಸರಿಗೆ ಸಲ್ಲಿಸಿದ್ದಾರೆ.

ಅಸ್ಸಾಂನಲ್ಲಿ ಸಾವಿರಾರು ಮುಸ್ಲಿಂ ಕುಟುಂಬಗಳ ತೆರವು: ಚುನಾವಣಾ ಪೂರ್ವ ರಾಜಕೀಯಕ್ಕೆ ಹೊಸ ಅಸ್ತ್ರ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...