ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ 10 ಜನರು ಸಾವಿಗೀಡಾದ ಹಿನ್ನಲೆ ಕುಕಿ ಜೊ ಸಂಘಟನೆಗಳು ಆಕ್ರೋಶಗೊಂಡಿದ್ದರೂ, ಕೇಂದ್ರ ಸರ್ಕಾರವು ಸುಮಾರು 2000 ಸಿಬ್ಬಂದಿ ಇರುವ 20 ಹೆಚ್ಚುವರಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ(ಸಿಎಪಿಎಫ್) ಕಂಪೆನಿಗಳನ್ನು ಮಣಿಪುರಕ್ಕೆ ರವಾನಿಸಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ TNIE ಬುಧವಾರ ವರದಿ ಮಾಡಿದೆ. ಮಣಿಪುರ
ಈ ಘಟಕಗಳ ಏರ್‌ಲಿಫ್ಟಿಂಗ್ ಮೂಲಕ ತಕ್ಷಣವೆ ನಿಯೋಜನೆ ಮಾಡಬೇಕು ಎಂದು ಗೃಹ ಸಚಿವಾಲಯ (ಎಂಎಚ್‌ಎ) ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ. ಮಣಿಪುರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜೊತೆಗೆ ಸೋಮವಾರ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಕನಿಷ್ಠ 10 ಶಂಕಿತ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ. ಆದರೆ, ಇದನ್ನು ಕುಕಿ-ಜೊ ಸಂಘಟನೆಗಳು ನಿರಾಕರಿಸಿದ್ದು, ಮೃತರು ಗ್ರಾಮ ‘ಸ್ವಯಂಸೇವಕರು’ ಆಗಿದ್ದು, ಸೇನೆಯು ಅವರನ್ನು ಹೊಂಚುಹಾಕಿ ಕೊಂದಿದೆ ಎಂದು ಹೇಳಿದೆ.
”ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಬಂಡುಕೋರರು ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್‌ಪಿಎಫ್ ಶಿಬಿರದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ” ಎಂದು ಪೊಲೀಸರು ಹೇಳಿದ್ದು, ಭೀಕರ ಗುಂಡಿನ ಚಕಮಕಿಯ ನಂತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹವನ್ನು ಪಡೆ ವಶಪಡಿಸಿಕೊಂಡಿದೆ ಎಂದು ತಿಳಿಸಿದೆ.
ಮಣಿಪುರಕ್ಕೆ ನಿಯೋಜಿಸಲು ಆದೇಶಿಸಿದ 20 ಹೊಸ ಸಿಎಪಿಎಫ್ ಕಂಪನಿಗಳಲ್ಲಿ 15 ಸಿಆರ್‌ಪಿಎಫ್ ಮತ್ತು ಐದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೇರಿವೆ ಎಂದು ಮೂಲಗಳು ತಿಳಿಸಿವೆ. ಜಿರಿಬಾಮ್‌ನಲ್ಲಿ ಹೊಸದಾಗಿ ನಡೆದ ಹಿಂಸಾಚಾರದಿಂದಾಗಿ ಕಳೆದ ವಾರದಿಂದ ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಜನಾಂಗೀಯ ಹಿಂಸಾಚಾರದ ನಂತರ ಸುಮಾರು 200 ಜನರ ಹತ್ಯೆಗೀಡಾಗಿದ್ದಾರೆ. ಇದರ ನಂತರ ರಾಜ್ಯದಲ್ಲಿ ಈಗಾಗಲೇ ನೆಲೆಗೊಂಡಿರುವ ಸಿಎಪಿಎಫ್‌ನ 198 ಕಂಪನಿಗಳ ಜೊತೆಗೆ ಈ ಘಟಕಗಳನ್ನು ಸೇರಿಸಲಾಗುತ್ತವೆ ಎಂದು ವರದಿ ಹೇಳಿವೆ.
ಗೃಹ ಸಚಿವಾಲಯದ ಆದೇಶದಂತೆ ಈ ಎಲ್ಲಾ CAPF ಘಟಕಗಳು ನವೆಂಬರ್ 30 ರವರೆಗೆ ಮಣಿಪುರ ಸರ್ಕಾರದ ವಿಲೇವಾರಿಯಲ್ಲಿದ್ದು, ಈ ನಿಯೋಜನೆಯನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರದ ಘಟನೆಯ ನಂತರ, ಇಂಫಾಲ್ ಕಣಿವೆಯ ಅನೇಕ ಸ್ಥಳಗಳಲ್ಲಿ ಹೊಸದಾಗಿ ಹಿಂಸಾಚಾರ ನಡೆದಿರುವುದು ವರದಿಯಾಗಿದೆ.
ಇದನ್ನೂ ಓದಿ: BIG BREAKING | ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ; ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 97 ಮಂದಿಗೆ ಜಾಮೀನು
BIG BREAKING | ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ; ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 97 ಮಂದಿಗೆ ಜಾಮೀನು


