ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಸ್ವಯಂಪ್ರೇರಣೆಯಿಂದ ವಾಪಾಸು ಮಾಡುವ ಕೊನೆಯ ದಿನವಾದ ಗುರುವಾರದಂದು, ಮಣಿಪುರದಲ್ಲಿ ಜನರು ಒಟ್ಟು 196 ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು ಇತರ ವಿವಿಧ ವಸ್ತುಗಳನ್ನು ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಣಿಪುರ
ಈ ನಡುವೆ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 15 ಬಂಕರ್‌ಗಳನ್ನು ಸಹ ನಾಶಪಡಿಸಿವೆ. ಗುರುವಾರ ಸಂಜೆ 4 ಗಂಟೆಯವರೆಗೆ ಎಂಟು ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ವಾಪಾಸಾತಿ ಮಾಡಲಾಗಿದೆ. ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ರಾಜ್ಯದ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಇದರ ಗಡುವನ್ನು ಇತ್ತಿಚೆಗೆ ವಿಸ್ತರಿಸಿದ್ದರು. ಮಣಿಪುರ
ಸ್ವಯಂಪ್ರೇರಣೆಯಿಂದ ಶಸ್ತಾಸ್ತ್ರಗಳ ಶರಣಾಗತಿ ಮಾಡಲಾದ ಗಡುವು ಮುಗಿದ ನಂತರ, ಜಂಟಿ ಭದ್ರತಾ ಪಡೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಿ 36 ಶಸ್ತ್ರಾಸ್ತ್ರಗಳು, 129 ಮದ್ದುಗುಂಡುಗಳು, ಏಳು ಸ್ಫೋಟಕಗಳು, 21 ವಿವಿಧ ವಸ್ತುಗಳನ್ನು ವಶಪಡಿಸಿಕೊಂಡವು ಮತ್ತು 15 ಅಕ್ರಮ ಬಂಕರ್‌ಗಳನ್ನು ನಾಶಪಡಿಸಿದವು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆ ಲ್ಯಾಂಗ್ನೋಮ್ ಮತ್ತು ಖೆಂಗ್‌ಜಾಂಗ್ ಪ್ರದೇಶಗಳಲ್ಲಿ ಹನ್ನೆರಡು ಬಂಕರ್‌ಗಳು ನಾಶವಾದರೆ, ಕಾಂಗ್‌ಪೋಕ್ಪಿ ಜಿಲ್ಲೆಯ ಹರೋಥೆಲ್‌ನಲ್ಲಿ ಇನ್ನೂ ಮೂರು ಬಂಕರ್‌ಗಳನ್ನು ಕೆಡವಲಾಯಿತು.
ಬೆಟ್ಟ ಮತ್ತು ಕಣಿವೆ ಪ್ರದೇಶಗಳ ಜನರು ಹೆಚ್ಚುವರಿ ಸಮಯಕ್ಕಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ, ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಮಾರ್ಚ್ 6 ರಂದು ಸಂಜೆ 4 ಗಂಟೆಯವರೆಗೆ ಲೂಟಿ ಮಾಡಿದ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಶರಣಾಗಿಸುವ ಗಡುವನ್ನು ವಿಸ್ತರಿಸಿದ್ದರು.
ಫೆಬ್ರವರಿ 20 ರಂದು ಭಲ್ಲಾ ಅವರು ಭದ್ರತಾ ಪಡೆಗಳಿಂದ ದೋಚಲಾದ ಶಸ್ತ್ರಾಸ್ತ್ರಗಳು ಮತ್ತು ಇತರ ಅಕ್ರಮವಾಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಏಳು ದಿನಗಳಲ್ಲಿ ಸ್ವಯಂಪ್ರೇರಣೆಯಿಂದ ಶರಣಾಗತಿ ಮಾಡುವಮತೆ ಬಂಡುಕೋರ ಗುಂಪುಗಳನ್ನು ಒತ್ತಾಯಿಸಿದ್ದರು.
ಬೆಟ್ಟ ಮತ್ತು ಕಣಿವೆ ಪ್ರದೇಶಗಳ ಜನರು ಹೆಚ್ಚುವರಿ ಸಮಯಕ್ಕಾಗಿ ಒತ್ತಾಯಿಸಿದ ನಂತರ, ಲೂಟಿ ಮಾಡಿದ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಶರಣಾಗಿಸುವ ಗಡುವನ್ನು ಮಾರ್ಚ್ 6 ರಂದು ಸಂಜೆ 4 ಗಂಟೆಯವರೆಗೆ ಅವರು ವಿಸ್ತರಿಸಿದ್ದರು. ಮೊದಲ ಏಳು ದಿನಗಳ ಅವಧಿಯಲ್ಲಿ, ಪ್ರಾಥಮಿಕವಾಗಿ ಕಣಿವೆ ಜಿಲ್ಲೆಗಳಲ್ಲಿ 300 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕರು ಶರಣಾಗಿಸಿದ್ದರು.
ಈ ಅವಧಿಯೊಳಗೆ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸುವವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಸರ್ಕಾರವು ಜನರಿಗೆ ಭರವಸೆ ನೀಡಿತ್ತು. “ಶಾಂತಿ, ಕೋಮು ಸಾಮರಸ್ಯ, ನಮ್ಮ ಯುವಕರ ಭವಿಷ್ಯ ಮತ್ತು ನಮ್ಮ ಸಮಾಜದ ಭದ್ರತೆಗೆ ಕೊಡುಗೆ ನೀಡಲು ಸಂಬಂಧಪಟ್ಟ ಎಲ್ಲರಿಗೂ ಇದು ಕೊನೆಯ ಅವಕಾಶ” ಎಂದು ಅದು ಒತ್ತಿ ಹೇಳಿತ್ತು.
ಮೇ 2023 ರಿಂದ ಮೈತೇಯಿ ಮತ್ತು ಕುಕಿ-ಝೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರ ಸರ್ಕಾರವು ಫೆಬ್ರವರಿ 13 ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು. 2027 ರವರೆಗೆ ಅಧಿಕಾರಾವಧಿಯನ್ನು ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕ್ಷೇತ್ರ ಪುನರ್ವಿಂಗಡಣೆಯಿಂದ ಪಂಜಾಬ್ ಮತ್ತು ಹರಿಯಾಣ ಕೂಡಾ ಸೀಟುಗಳನ್ನು ಕಳೆದುಕೊಳ್ಳುತ್ತವೆ – ಕಾಂಗ್ರೆಸ್
ಕ್ಷೇತ್ರ ಪುನರ್ವಿಂಗಡಣೆಯಿಂದ ಪಂಜಾಬ್ ಮತ್ತು ಹರಿಯಾಣ ಕೂಡಾ ಸೀಟುಗಳನ್ನು ಕಳೆದುಕೊಳ್ಳುತ್ತವೆ – ಕಾಂಗ್ರೆಸ್

