ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಈಗಾಗಲೇ ಜಾಮೀನಿನ ಮೇಲೆ ಹೊರಗಿರುವ ಮಲಯಾಳಂ ಚಲನಚಿತ್ರ ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ವಿರುದ್ಧ ನಟಿ ಮಂಜು ವಾರಿಯರ್ ಅವರು ಇದೇ ರೀತಿಯ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಶಶಿಧರ್ ಅವರು ಕಿರಕುಳ ನೀಡಿದ್ದಾರೆ ಎಂದು ಆರೋಪಿಸಿ ಮಂಜು ವಾರಿಯರ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಕೊಚ್ಚಿ ಪೊಲೀಸರು ಶಶಿಧರನ್ ವಿರುದ್ದ ಹೊಸ ಪ್ರಕರಣ ದಾಖಲಿಸಿದ್ದಾರೆ.
ಶಶಿಧರನ್ ಪ್ರಸ್ತುತ ಅಮೆರಿಕದಲ್ಲಿ ವಾಸಿಸುತ್ತಿರುವುದರಿಂದ, ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಮನವಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ, ಅವರು ಈಗಾಗಲೇ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಜಾಮೀನಿನ ಮೇಲೆ ಹೊರಗಿರುವ ಶಶಿಧರನ್ ಅವರನ್ನು ಮೇ 2022ರಲ್ಲಿ ಮಂಜು ವಾರಿಯರ್ ಅವರ ದೂರಿನ ಮೇರೆಗೆ ಬಂಧಿಸಲಾಗಿತ್ತು. ಶಶಿಧರನ್ ತನಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಮಂಜು ವಾರಿಯರ್ ದೂರಿದ್ದರು.
ಚಲನಚಿತ್ರ ನಿರ್ಮಾಪಕ ಶಶಿಧರನ್ 2000ರಲ್ಲಿ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿದರು. 2003ರಲ್ಲಿ ಅವರು ಕ್ರೌಡ್‌ಫಂಡಿಂಗ್ ಮಾಡಿ ತಮ್ಮ ಮೊದಲ ಕಿರುಚಿತ್ರವನ್ನು ನಿರ್ಮಿಸಿದ್ದರು. 2014 ರಲ್ಲಿ, ಶಶಿಧರನ್ ತಮ್ಮ ಮೊದಲ ಪೂರ್ಣ ಚಿತ್ರ ‘ಒರಾಲ್‌ಪೋಕಂ’ ಅನ್ನು ನಿರ್ಮಿಸಿದರು. ಈ ಚಿತ್ರವು 2014ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಲಯಾಳಂ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಶಶಿಧರನ್ 2014ರಲ್ಲಿ ಅತ್ಯುತ್ತಮ ನಿರ್ದೇಶಕ ಎಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. 2020ರಲ್ಲಿ ಮಂಜು ವಾರಿಯರ್ ನಟಿಸಿದ್ದ ಅವರ ‘ಕಾಯಾತ್ತಂ’ ಚಿತ್ರವನ್ನು ಹಿಮಾಲಯದಲ್ಲಿ ಐಫೋನ್‌ನಲ್ಲಿ ಶೂಟ್ ಮಾಡಲಾಗಿತ್ತು. ಇದು ಮೆಚ್ಚುಗೆಯನ್ನು ಗಳಿಸಿತ್ತು.
ಮದುವೆಗೆ ಒತ್ತಡ: ಯುವತಿಯ ಕೊಂದು, ದೇಹಕ್ಕೆ ಬೆಂಕಿ ಹಚ್ಚಿ, ಸೂಟ್‌ಕೇಸ್‌ನಲ್ಲಿ ಎಸೆದ ವ್ಯಕ್ತಿ


