ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ 27 ಡಿಆರ್‌ಜಿ (ಜಿಲ್ಲಾ ರಿಸರ್ವ್ ಗಾರ್ಡ್) ಪಡೆಗಳನ್ನು ಹೊತ್ತ ಬಸ್ ಅನ್ನು ಗುರಿಯಾಗಿಸಿ ಮಾವೊವಾದಿಗಳು ನಡೆಸಿದ IED ದಾಳಿಯಲ್ಲಿ ಮೂವರು ಪೊಲೀಸರು ಸಾವನ್ನಪ್ಪಿದ್ದು, 15 ಪೊಲೀಸರು ಗಾಯಗೊಂಡಿದ್ದು, ಅದರಲ್ಲಿ ಐವರ ಸ್ತಿತಿ ಗಂಭಿರವಾಗಿದೆ ಎಂದು ಎನ್‌ಡಿಟಿವಿ ಇದೀಗ ವರದಿ ಮಾಡಿದೆ.
ಮಾವೋವಾದಿ ವಿರೋಧಿ ಕಾರ್ಯಾಚರಣೆ ಮುಗಿಸಿ ಕಡೇನಾರ್ ಮತ್ತು ಕನ್ಹಾರ್ಗಾಂವ್ ನಡುವೆ ಪ್ರಯಾಣಿಸುತ್ತಿದ್ದ ಬಸ್ ಗುರಿಯಾಗಿಸಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸಲಾಗಿದೆ.
ಐಟಿಬಿಪಿಯ 45 ನೇ ಬೆಟಾಲಿಯನ್ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಗಾಯಾಳುಗಳನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿದೆ.
ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ, ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಡಿಜಿಪಿ ಡಿಎಂ ಅವಸ್ಥಿ ಹೇಳಿದ್ದಾರೆ.
2015 ರಲ್ಲಿ ನಾಲ್ವರು ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ ಐವರು ಮಾವೋವಾದಿಗಳನ್ನು ಬಿಜಾಪುರ ಜಿಲ್ಲೆಯ ಎರಡು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದರು.
ಜಿಲ್ಲಾ ಪಡೆ ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಯ ಪ್ರತ್ಯೇಕ ತಂಡಗಳು ಈ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಇದನ್ನೂ ಓದಿ: ಬಾಂಗ್ಲಾದೇಶ: ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ – 15 ಮಂದಿ ಸಾವು, 400 ಮಂದಿ ಕಣ್ಮರೆ


