Homeಮುಖಪುಟಉತ್ತರಪ್ರದೇಶದಲ್ಲಿ ಮತ್ತಿಬ್ಬರು ಯುವ ಸಹೋದರಿಯರ ಸಂಶಯಾಸ್ಪದ ಸಾವು: ಕೊಲೆ ಶಂಕೆ

ಉತ್ತರಪ್ರದೇಶದಲ್ಲಿ ಮತ್ತಿಬ್ಬರು ಯುವ ಸಹೋದರಿಯರ ಸಂಶಯಾಸ್ಪದ ಸಾವು: ಕೊಲೆ ಶಂಕೆ

- Advertisement -
- Advertisement -

ಉತ್ತರಪ್ರದೇಶ ರಾಜಧಾನಿ ಲಖನೌದಿಂದ 270 ಕಿ.ಮೀ ದೂರದಲ್ಲಿರುವ ಪಿಲ್ಭಿತ್ ಜಿಲ್ಲೆಯಲ್ಲಿ ಇಬ್ಬರು ಸಹೋದರಿಯರು ನಾಪತ್ತೆಯಾದ ಕೆಲವೇ ಗಂಟೆಗಳ ನಂತರ, ಶವಗಳಾಗಿ ಪತ್ತೆಯಾಗಿದ್ದಾರೆ. ಅವುಗಳಲ್ಲಿ ಒಂದು ಶವ ಮರದಿಂದ ನೇತಾಡುತ್ತಿರುವುದಾಗಿ ಕಂಡುಬಂದಿದೆ.

ಈ ಕುಟುಂಬವು ಉತ್ತರಾಖಂಡ ಮತ್ತು ನೇಪಾಳದ ಗಡಿಯಲ್ಲಿರುವ ಜಿಲ್ಲೆಯ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದು ಅಲ್ಲೇ ವಾಸವಿದೆ.

18 ಮತ್ತು 20 ವರ್ಷ ವಯಸ್ಸಿನ ಈ ಇಬ್ಬರು ಯುವತಿಯರು ನಿನ್ನೆ ಸಂಜೆ ತಮ್ಮ ಮನೆಯಿಂದ ಹೊರಬಂದಿದ್ದರು. ಅವರು ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಅವರನ್ನು ಹುಡುಕಲು ಪ್ರಾರಂಭಿಸಿದರು. ನಂತರ ಅವರಿಗೆ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ಎರಡೂ ದೇಹಗಳು ಗಾಯದ ಗುರುತುಗಳನ್ನು ಹೊಂದಿವೆ. ಆದರೆ ಇದುವರೆಗೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

“ಕುಟುಂಬವು ಮೂರು-ನಾಲ್ಕು ತಿಂಗಳಿನಿಂದ ಇಟ್ಟಿಗೆ ಭಟ್ಟಿಗಳಲ್ಲಿ (ಗೂಡುಗಳಲ್ಲಿ) ಕೆಲಸ ಮಾಡುತ್ತಿತ್ತು. ನಿನ್ನೆ ಸಂಜೆ ಸುಮಾರು 7 ಗಂಟೆಗೆ ಸಹೋದರಿಯರು ಮನೆಯಿಂದ ಹೊರಟರು. ಕುಟುಂಬ ಸದಸ್ಯರು ತಿರುಗಾಡಲು ಹೋಗಿದ್ದಾರೆಂದು ಭಾವಿಸಿದ್ದರು, ಆದರೆ ಯುವತಿಯರು ಹಿಂತಿರುಗದಿದ್ದಾಗ, ಅವರು ಹುಡುಕಲು ಪ್ರಾರಂಭಿಸಿದರು ಎಂದು ಪಿಲಿಭಿತ್ ಪೊಲೀಸ್ ಮುಖ್ಯಸ್ಥ ಜೈ ಪ್ರಕಾಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರಲ್ಲಿ ಒಬ್ಬರು ಶವ ಬೇಗ ದೊರೆಯಿತು. ಆದರೆ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಎರಡನೇ ಮಹಿಳೆಗಾಗಿ ಶೋಧ ಮುಂದುವರೆದಿದೆ ಮತ್ತು ಮಂಗಳವಾರ ಬೆಳಿಗ್ಗೆ ಮರದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ನಂತರ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿತು, ನಾವು ಸ್ಥಳವನ್ನು ಪರಿಶೀಲಿಸಿದ್ದೇವೆ. ಇಲ್ಲಿಯವರೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ದೂರು ಬಂದಿಲ್ಲ, ಅಂತಹ ಕುರುಹು ಕಂಡಿಲ್ಲ. ಸಾವಿಗೆ ಕಾರಣವೇನು ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಇಬ್ಬರೂ ಯುವತಿಯರ ಕುತ್ತಿಗೆಗೆ ಗಾಯದ ಗುರುತುಗಳಿವೆ ಎಂದು ಜೈ ಪ್ರಕಾಶ ಹೇಳಿದರು.

“ನಾವು ಎರಡೂ ದೇಹಗಳನ್ನು ಪರಸ್ಪರ ಹತ್ತಿರದಲ್ಲಿ ಕಂಡುಕೊಂಡಿದ್ದೇವೆ. ಅವರಲ್ಲಿ ಒಬ್ಬರ ದೇಹದ ಪಕ್ಕದಲ್ಲಿ ಮೊಬೈಲ್ ಫೋನ್ ಬಿದ್ದಿತ್ತು. ನಾವು ಬೇರೆ ಪ್ರದೇಶದವರು, ಆದರೆ ನಾವು ಇಲ್ಲಿ ವಾಸಿಸುತ್ತಿದ್ದೇವೆ ಮತ್ತು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತೇವೆ” ಎಂದು ಹುಡುಗಿಯರ ತಾಯಿ ಸ್ಥಳೀಯ ಪತ್ರಕರ್ತರಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶ- ಶಾಲೆಗೆ ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ನಾಪತ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...