HomeಚಳವಳಿAFSPA ರದ್ದುಗೊಳಿಸಲು ಒತ್ತಡ: ಜ.10 ಮತ್ತು 11ಕ್ಕೆ ನಾಗಾಲ್ಯಾಂಡ್ ಜನರಿಂದ ರ್‍ಯಾಲಿ

AFSPA ರದ್ದುಗೊಳಿಸಲು ಒತ್ತಡ: ಜ.10 ಮತ್ತು 11ಕ್ಕೆ ನಾಗಾಲ್ಯಾಂಡ್ ಜನರಿಂದ ರ್‍ಯಾಲಿ

- Advertisement -

ನಾಗಾಲ್ಯಾಂಡ್‌ನಿಂದ ವಿವಾದಿತ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA) ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯದ ಸಮಾನ ಮನಸ್ಕ ನಾಗರಿಕರು ಜ.10 ಮತ್ತು 11 (ಸೋಮವಾರ, ಮಂಗಳವಾರ) ರ್‍ಯಾಲಿ ಆಯೋಜಿಸಿದ್ದಾರೆ.

ಈಗಾಗಲೇ ಈ ಕಾನೂನನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕಬಹುದೇ ಎಂದು ಅಧ್ಯಯನ ಮಾಡಲು ಒಕ್ಕೂಟ ಸರ್ಕಾರ ಸಮಿತಿಯನ್ನು ರಚಿಸಿದೆ.

ನಾಗಾಲ್ಯಾಂಡ್ ನಾಗರಿಕರು ಕರೆದಿರುವ “AFSPA ವಿರುದ್ಧದ ಮೆರವಣಿಗೆ ” ಸೋಮವಾರ ವಾಣಿಜ್ಯ ಕೇಂದ್ರವಾದ ದಿಮಾಪುರ್‌ನಿಂದ ಪ್ರಾರಂಭವಾಗಲಿದೆ. ಸೂಪರ್‌ಮಾರ್ಕೆಟ್ ದಿಮಾಪುರ್‌ನಿಂದ ರಾಜಭವನ ಕೊಹಿಮಾವರೆಗೆ ಎರಡು ದಿನಗಳಲ್ಲಿ ಸುಮಾರು 70 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲಿದೆ. ಅಲ್ಲಿ ರಾಜ್ಯಪಾಲರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುತ್ತದೆ.

ಇದೊಂದು ಸಾಮೂಹಿಕವಾಗಿ ಸಾರ್ವಜನಿಕರು ಆರಂಭಿಸಿರುವ ಪ್ರತಿಭಟನಾ ಮೆರವಣಿಗೆಯಾಗಿದ್ದು, ಯಾವುದೇ ನಾಗರಿಕ ಸಮಾಜ ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿಲ್ಲ ಎಂದು ರ್‍ಯಾಲಿ ಸಂಘಟಕರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಾಗಾಲ್ಯಾಂಡ್‌ AFSPA ವಿವಾದ; 45 ದಿನಗಳಲ್ಲಿ ‘ಸಕಾರಾತ್ಮಕ ಬೆಳವಣಿಗೆ’: ಅಸ್ಸಾಂ ಸಿಎಂ ಭರವಸೆ

“AFSPA ಅಡಿಯಲ್ಲಿ, ಬಹಳಷ್ಟು ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ. ಓಟಿಂಗ್‌ನಲ್ಲಿ ನಡೆದ ನಾಗರಿಕರ ಹತ್ಯಾಕಾಂಡವು ಈ ಪೈಶಾಚಿಕ ಕೃತ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮತ್ತೆ ನೆನಪಿಸಿದೆ. ನಾವು ಭದ್ರತಾ ಪಡೆಗಳ ಹಿಂದಿನ ಎಲ್ಲಾ ದೌರ್ಜನ್ಯಗಳ ಸಂತ್ರಸ್ತರನ್ನು ಸಹ ನೆನಪಿಸಿಕೊಳ್ಳುತ್ತೇವೆ. ಹತ್ಯಾಕಾಂಡದಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಎಎಫ್‌ಎಸ್‌ಪಿಎಯನ್ನು ಭಾಗಶಃ ತೆಗೆದುಹಾಕುವುದರಿಂದ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ” ಎಂದು ಮೆರವಣಿಗೆಯಲ್ಲಿ ಭಾಗವಹಿಸಲಿರುವ ಸಾಮಾಜಿಕ ಕಾರ್ಯಕರ್ತ ಕೆವಿಥೋ ಕೆರಾ ಅವರನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಉಲ್ಲೇಖಿಸಿದೆ.

“ಸರ್ಕಾರವು ಹೊಸ ಕೊರೊನಾ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಭಾಗವಹಿಸುವವರ ಸಂಖ್ಯೆಯನ್ನು 200 ಕ್ಕೆ ಮಿತಿಗೊಳಿಸಲು ನಮ್ಮಗೆ ಹೇಳಿದೆ. ಆದರೆ ನಾವು ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೇವೆ. ನಾಗಾಲ್ಯಾಂಡ್‌ನ ಹೊರಗಿನ ಜನರು ಸಹ ನಮ್ಮೊಂದಿಗೆ ಸೇರಲು ಬಯಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಭಾಗವಹಿಸುವವರು ತಮ್ಮ ಮಲಗುವ ಚೀಲಗಳು, ಟಾರ್ಚ್‌ಗಳು, ಅಗತ್ಯ ಗ್ಯಾಜೆಟ್‌ಗಳು ಮತ್ತು ಪರಿಕರಗಳನ್ನು ಜೊತೆಗೆ ಒಯ್ಯುಲಿದ್ದಾರೆ. ಯಾವುದೇ ತುರ್ತುಯನ್ನು ಎದುರಿಸಲು ಆಂಬ್ಯುಲೆನ್ಸ್ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ 13 ನಾಗರಿಕರ ಹತ್ಯೆ ಪ್ರರಕಣದ ಹಿನ್ನೆಲೆಯಲ್ಲಿ ವಿವಾದಿತ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ-1958’ (AFSPA) ಯನ್ನು ವಾಪಾಸ್ ಪಡೆಯುವ ಕುರಿತು ನಿರ್ಧರಿಸಲು ಸಮತಿ ರಚಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾರೊಂದಿಗಿನ ಸಭೆಯ ಬಳಿಕ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ತಿಳಿಸಿದ್ದರು.


ಇದನ್ನೂ ಓದಿ: AFSPA ರದ್ದತಿ ಕುರಿತು ಸಮಿತಿ ರಚನೆ: ಅಮಿತ್ ಶಾ ಜೊತೆ ಸಭೆ ನಂತರ ನಾಗಾಲ್ಯಾಂಡ್‌ ಸಿಎಂ ಹೇಳಿಕೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial