Homeಮುಖಪುಟನಾಗಾಲ್ಯಾಂಡ್‌ AFSPA ವಿವಾದ; 45 ದಿನಗಳಲ್ಲಿ ‘ಸಕಾರಾತ್ಮಕ ಬೆಳವಣಿಗೆ’: ಅಸ್ಸಾಂ ಸಿಎಂ ಭರವಸೆ

ನಾಗಾಲ್ಯಾಂಡ್‌ AFSPA ವಿವಾದ; 45 ದಿನಗಳಲ್ಲಿ ‘ಸಕಾರಾತ್ಮಕ ಬೆಳವಣಿಗೆ’: ಅಸ್ಸಾಂ ಸಿಎಂ ಭರವಸೆ

- Advertisement -
- Advertisement -

ಮುಂದಿನ 45 ದಿನಗಳಲ್ಲಿ ನಾಗಾಲ್ಯಾಂಡ್‌ನಿಂದ ಸಶಸ್ತ್ರ ಪಡೆಗಳ-ವಿಶೇಷ ಪಡೆ-ಕಾಯ್ದೆ ( AFSPA ) ಹಿಂಪಡೆಯುವ ಬೇಡಿಕೆಯ ಕುರಿತು ಕೆಲವು ಸಕಾರಾತ್ಮಕ ಬೆಳವಣಿಗೆಗಳು ನಡೆಯಲಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ.

“ಒಕ್ಕೂಟ ಸರ್ಕಾರ ಈಗಾಗಲೇ ಸಮಿತಿಯನ್ನು ರಚಿಸಿದೆ. ಮುಂದಿನ 45 ದಿನಗಳಲ್ಲಿ ನಾವು ಕೆಲವು ಸಕಾರಾತ್ಮಕ ಬೆಳವಣಿಗೆಗಳನ್ನು ನೋಡಲಿದ್ದೇವೆ” ಎಂದು ಹಿಮಂತ ಶರ್ಮಾ ಗುವಾಹಟಿಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:AFSPA ರದ್ದತಿ ಕುರಿತು ಸಮಿತಿ ರಚನೆ: ಅಮಿತ್ ಶಾ ಜೊತೆ ಸಭೆ ನಂತರ ನಾಗಾಲ್ಯಾಂಡ್‌ ಸಿಎಂ ಹೇಳಿಕೆ

“ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿಧಾನವು ತುಂಬಾ ಸಕಾರಾತ್ಮಕವಾಗಿದೆ. ನಾಗಾಲ್ಯಾಂಡ್‌ನಿಂದ AFSPA ಯನ್ನು ಭಾಗಶಃ ಅಥವಾ ಪೂರ್ಣವಾಗಿ ಹಿಂತೆಗೆದುಕೊಳ್ಳುವ ಬಗ್ಗೆ 45 ದಿನಗಳ ಸ್ಪಷ್ಟ ಗಡುವನ್ನು ಹೊಂದಿರುವ ಸಮಿತಿಯ ರಚನೆ ಮಾಡಿದ್ದು ಬಹಳ ಮುಖ್ಯವಾದ ಹೆಜ್ಜೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಉಪಕ್ರಮವು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ ಮತ್ತು ಅದು ಇತರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ AFSPA ಹೇರಿಕೆಯನ್ನು ಡಿಸೆಂಬರ್ 30 ರಿಂದ ಆರು ತಿಂಗಳವರೆಗೆ ವಿಸ್ತರಿಸಿದ ನಂತರ ನಾಗಾಲ್ಯಾಂಡ್‌ನ ವಿವಿಧ ಬುಡಕಟ್ಟು ಸಂಘಟನೆಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಈ ನಡುವೆ ಮುಖ್ಯಮಂತ್ರಿಯ ಹೇಳಿಕೆ ಹೊರಬಿದ್ದಿದೆ.

ಇದನ್ನೂ ಓದಿ:ನಾಗಾಲ್ಯಾಂಡ್ ಹತ್ಯಾಕಾಂಡ-‘AFSPA ನೆರಳಿನಲ್ಲಿ ಶಾಂತಿ ಮಾತುಕತೆ ಇಲ್ಲ’: ಮಾಜಿ ಬಂಡಾಯ ನಾಗಾ ಸಂಘಟನೆ

AFSPA ಯನ್ನು ವಿಸ್ತರಿಸಿದ ಒಕ್ಕೂಟ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಬುಡಕಟ್ಟು ಸಂಘಟನೆಗಳು, ‘ಡಿಸೆಂಬರ್ 4 ರಂದು ಸೋಮ ಜಿಲ್ಲೆಯಲ್ಲಿ ನಡೆದ ಹತ್ಯಾಕಾಂಡದಿಂದ ಉಂಟಾದ ಗಾಯಗಳಿಗೆ ಉಪ್ಪು ಸವರುವ ಮತ್ತೊಂದು ಪ್ರಯತ್ನ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಅಸ್ಸಾಂನಲ್ಲಿ AFSPA ಕುರಿತು ಮಾತನಾಡಿದ ಮುಖ್ಯಮಂತ್ರಿ, ಈ ವರ್ಷದಲ್ಲಿ ರಾಜ್ಯವು ಅಂತಿಮವಾಗಿ ಕೆಲವು ತರ್ಕಬದ್ಧತೆಯನ್ನು ನೋಡಲಿದೆ ಎಂದು ಬಹಿರಂಗಪಡಿಸಿದ್ದಾರೆ.

“ಐದರಿಂದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಅಸ್ಸಾಂನಿಂದ ಸೇನೆಯನ್ನು ವಾಸ್ತವಿಕವಾಗಿ ಹಿಂಪಡೆಯಲಾಗಿದೆ. AFSPA ಪರಿಶೀಲನೆಗೆ ಬಂದಾಗ ಅಸ್ಸಾಂ ಸರ್ಕಾರವು ರಾಜ್ಯದ ಗೃಹ ಇಲಾಖೆಯೊಂದಿಗೆ ಸಮಾಲೋಚಿಸಿ ಕೆಲವು ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ” ಎಂದು ಹಿಮಂತ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ:ಇರೋಮ್ ಶರ್ಮಿಳಾರ ಉಪವಾಸ, Indian Army Rape us ಎಂಬ ಮಹಿಳೆಯರ ಬೆತ್ತಲೆ ಪ್ರತಿಭಟನೆ ಮತ್ತು ಕರಾಳ AFSPA

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...