Homeಕರ್ನಾಟಕಉದ್ಯೋಗಿಗಳ ಸಾಮೂಹಿಕ ವಜಾ | ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ

ಉದ್ಯೋಗಿಗಳ ಸಾಮೂಹಿಕ ವಜಾ | ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ

- Advertisement -
- Advertisement -

ಉದ್ಯೋಗಿಗಳ ಸಾಮೂಹಿಕ ವಜಾ ಮಾಡಿದ್ದ ಇನ್ಫೋಸಿಸ್‌ನಿಂದ ಕುರಿತು ಟೆಕ್ ಉದ್ಯೋಗಿಗಳ ಸಂಘಟನೆ ನೀಡಿದ್ದ ದೂರನ್ನು ಉಲ್ಲೇಖಿಸಿ, ಕೇಂದ್ರ ಕಾರ್ಮಿಕ ಸಚಿವಾಲಯವು ಗುರುವಾರ ಕರ್ನಾಟಕ ಕಾರ್ಮಿಕ ಇಲಾಖೆಗೆ “ವಿವಾದವನ್ನು ಪರಿಹರಿಸಲು ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಿ” ಎಂದು ನಿರ್ದೇಶನ ನೀಡಿದೆ. ಉದ್ಯೋಗಿಗಳ ಸಾಮೂಹಿಕ ವಜಾ

ಇನ್ಫೋಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ತಿಂಗಳುಗಟ್ಟಲೆ ಮೂಲಭೂತ ತರಬೇತಿ ಪಡೆದ 300 ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಸಂಸ್ಥೆಯು ಕಳೆದ ವಾರ ಒಪ್ಪಿಕೊಂಡಿತ್ತು.

ಆದರೆ, ಈ ಸಂಖ್ಯೆ ಬಗ್ಗೆ ಐಟಿ ವಲಯದ ಸಂಘಟನೆಯಾದ ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಉದ್ಯೋಗಿಗಳ ಸೆನೆಟ್ (NITES) ಆಕ್ಷೇಪ ವ್ಯಕ್ತಪಡಿಸಿದ್ದು, ವಜಾಗೊಳ್ಳಲ್ಪಟ್ಟ ಉದ್ಯೋಗಿಗಳ ಸಂಖ್ಯೆ 700 ಎಂದು ಪ್ರತಿಪಾದಿತ್ತು. ಇನ್ಫೋಸಿಸ್ ವಿರುದ್ಧ ತಕ್ಷಣದ ಹಸ್ತಕ್ಷೇಪ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಸಂಘಟನೆಯು ಅಧಿಕೃತ ದೂರು ಸಲ್ಲಿಸಿತ್ತು. ಉದ್ಯೋಗಿಗಳ ಸಾಮೂಹಿಕ ವಜಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಸಂಘಟನೆ ಸಲ್ಲಿಸಿದ ದೂರಿನಲ್ಲಿ, “ಇನ್ಫೋಸಿಸ್‌ಗೆ ಇತ್ತೀಚೆಗೆ ಸೇರ್ಪಡೆಗೊಂಡ ಕ್ಯಾಂಪಸ್ ನೇಮಕಾತಿದಾರರನ್ನು ಬಲವಂತವಾಗಿ ವಜಾಗೊಳಿಸಲಾಗಿದೆ. ಈ ಎಲ್ಲಾ ಉದ್ಯೋಗಿಗಳು ಸುಮಾರು 2 ವರ್ಷಗಳ ಹಿಂದೆಯೆ ಆಫರ್ ಲೆಟರ್‌ಗಳನ್ನು ಪಡೆದಿದ್ದರು. ಅದಾಗ್ಯೂ, ಅವರನ್ನು ಕೆಲಸಕ್ಕೆ ಸೇರಿಸುವಲ್ಲಿ ಸಂಸ್ಥೆಯು ಎರಡು ವರ್ಷ ವಿಳಂಬ ಮಾಡಿ ಅವರನ್ನು ಕೆಲಸದಿಂದ ವಜಾ ಮಾಡಿದೆ” ಎಂದು ಹೇಳಿದೆ.

ಇನ್ಫೋಸಿಸ್ ವಿರುದ್ಧ ತನಿಖೆ ನಡೆಸಬೇಕು, ಈ ರೀತಿಯ ವಜಾಗೊಳಿಸುವಿಕೆಯನ್ನು ತಡೆಯಲು ಇನ್ಫೋಸಿಸ್ ವಿರುದ್ಧ ತಡೆಯಾಜ್ಞೆ ಹೊರಡಿಸಬೇಕು. ಜೊತೆಗೆ ವಜಾಗೊಳಿಸಲ್ಪಟ್ಟ ಎಲ್ಲಾ ಉದ್ಯೋಗಿಗಳಿಗೆ ಮತ್ತೆ ಉದ್ಯೋಗ ನೀಡಬೇಕು ಮತ್ತು 1947 ರ ಕೈಗಾರಿಕಾ ವಿವಾದ ಕಾಯ್ದೆ ಮತ್ತು ಇತರ ಅನ್ವಯವಾಗುವ ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಯ ವಿರುದ್ಧ ದಂಡ ವಿಧಿಸಬೇಕು ಎಂದು NITES ಸಲ್ಲಿಸಿದ ದೂರಿನಲ್ಲಿ ಒತ್ತಾಯಿಸಿದೆ.

ಈ ದೂರಿನ ಅನ್ವಯ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕೇಂದ್ರದ ಸೂಚನೆ ಹಿನ್ನಲೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುವಾರ ತಡರಾತ್ರಿ ಕಂಪನಿಗಳ ಬೆಂಗಳೂರು ಮತ್ತು ಮೈಸೂರು ಕ್ಯಾಂಪಸ್‌ಗಳಿಗೆ ಭೇಟಿ ನೀಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂಓದಿ:  ಅಕ್ರಮ ವಲಸೆ | 6 ಟ್ರಾವೆಲ್‌ ಏಜೆನ್ಸಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪಂಜಾಬ್ ಪೊಲೀಸರು

ಅಕ್ರಮ ವಲಸೆ | 6 ಟ್ರಾವೆಲ್‌ ಏಜೆನ್ಸಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪಂಜಾಬ್ ಪೊಲೀಸರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ; ಕೋಟೆ ನಿರ್ಮಿಸಿಕೊಂಡವರನ್ನು ಯಾರಾದಾರೂ ಕೊಲ್ಲಲು ಹೋಗುತ್ತಾರೆಯೇ: ಡಿಕೆ ಶಿವಕುಮಾರ್

"ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ. ಶಾಸಕ...

ಅಗರ್ತಲಾದಲ್ಲಿ ಹಿಂದುತ್ವವಾದಿಗಳಿಂದ ಮುಸ್ಲಿಂ ರಿಕ್ಷಾ ಚಾಲಕನ ಮೇಲೆ ಹಲ್ಲೆ, ಬೆಂಕಿ ಹಚ್ಚಲು ಯತ್ನ

ಗುರುವಾರ ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಮುಸ್ಲಿಂ ರಿಕ್ಷಾ ಚಾಲಕನೊಬ್ಬನನ್ನು ಕೊಲ್ಲುವ ಕ್ರೂರ ಪ್ರಯತ್ನದಲ್ಲಿ, ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ, ಮರಳಿನಲ್ಲಿ ಅರ್ಧದಾರಿಯಲ್ಲೇ ಹೂತುಹಾಕಿ, ಬೆಂಕಿ ಹಚ್ಚಲು ಪ್ರಯತ್ನಿಸಿದೆ ಎಂದು...

ತಮಿಳುನಾಡು| ದೇವಸ್ಥಾನದಲ್ಲಿ ಸಾವರ್ಕರ್ ಪರ ಘೋಷಣೆ ಕೂಗಿದ ಗುಂಪಿನ ವಿರುದ್ಧ ಕೆರಳಿದ ಧಾರ್ಮಿಕ ದತ್ತಿ ಸಚಿವ

ಕನ್ಯಾಕುಮಾರಿಯಲ್ಲಿ ನಡೆದ ದೇವಸ್ಥಾನದ ಉತ್ಸವದಲ್ಲಿ ಗುಂಪೊಂದು ವಿನಾಯಕ ದಾಮೋದರ್ ಸಾವರ್ಕರ್ ಅವರ ಪರ ಘೋಷಣೆ ಕೂಗಿದ್ದು, ಅವರ ಮೇಲೆ ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಸಚಿವ ಶೇಖರ್ ಬಾಬು ಅವರು ಕೆರಳಿದ್ದಾರೆ. ಡಿಸೆಂಬರ್ 25...

ಅಮಾನತುಗೊಂಡ ಮಹೇಶ್ ಜೋಶಿ ನೇತೃತ್ವದಲ್ಲಿ ಅಖಿಲ ಭಾರತ ಚುಟುಕು ಸಾಹಿತ್ಯ ಸಮ್ಮೇಳನ: ನಿಯಮ ಉಲ್ಲಂಘನೆ ಆರೋಪ

ಶೃಂಗೇರಿಯಲ್ಲಿ 2025 ಜನವರಿ 4ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಸ್ವಹಿತಾಸಕ್ತಿ ಗುಂಪು ಆಯೋಜಿಸುತ್ತಿದ್ದು,...

ಕೇಂದ್ರದ ‘ಜಿ-ರಾಮ್‌ಜಿ’ ಕಾಯ್ದೆಯ ವಿರುದ್ಧ ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ಘೋಷಣೆ

ಮನರೇಗಾ ಕಾಯ್ದೆಗೆ ತಿದ್ದುಪಡಿ ಮೂಲಕ ಜಾರಿಗೆ ತಂದಿರುವ ಜಿ-ರಾಮ್‌ಜಿ ಕಾಯ್ದೆಯ ವಿರುದ್ಧ ಜನವರಿ 8 ರಿಂದ ದೇಶಾದ್ಯಂತ ಆಂದೋಲನ ನಡೆಸಲು ಕಾಂಗ್ರೆಸ್ ಶನಿವಾರ ನಿರ್ಧರಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಬಾಂಗ್ಲಾದೇಶ| ಗುಂಪು ದಾಳಿಗೆ ಒಳಗಾಗಿದ್ದ ಹಿಂದೂ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಹೊಸ ವರ್ಷದ ಮುನ್ನಾದಿನದಂದು ಗುಂಪೊಂದು ಇರಿದು ಬೆಂಕಿ ಹಚ್ಚಿದ ಹಿಂದೂ ಉದ್ಯಮಿ ಖೋಕೋನ್ ಚಂದ್ರ ದಾಸ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಢಾಕಾದ ರಾಷ್ಟ್ರೀಯ ಬರ್ನ್ ಇನ್ಸ್ಟಿಟ್ಯೂಟ್‌ನಲ್ಲಿ ಸುಟ್ಟ ಗಾಯಗಳ ವಿಭಾಗದಲ್ಲಿ ಅವರು...

ಅಮೆರಿಕದ ಎಚ್ಚರಿಕೆ ಬೆನ್ನಲ್ಲೇ ವೆನೆಜುವೆಲಾ ರಾಜಧಾನಿಯಲ್ಲಿ ವಿಮಾನಗಳ ಅಬ್ಬರ; ಸರಣಿ ಸ್ಫೋಟ

ಶನಿವಾರ ಮುಂಜಾನೆ ಸಮೀಪದಲ್ಲೇ ವಿಮಾನಗಳು ಘರ್ಜಿಸಿದವು, ಬೀದಿಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಹೊಗೆ ಬುಗ್ಗೆ ಆವರಿಸಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರೆಸ್ ಪ್ರಕಾರ,...

ಉಡುಪಿ: ಹಿಮ್ಮುಕವಾಗಿ ಚಲಿಸಿದ ಕಾರು: ಬೈಕ್ ಸವಾರರು ಮತ್ತು ಆಟೋಗೆ ಡಿಕ್ಕಿ: ಸಿಸಿಟಿವಿ ವಿಡಿಯೋ ವೈರಲ್

ಉಡುಪಿಯಲ್ಲಿ ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹಿಂದಕ್ಕೆ ಸರಿದು ಅಪಘಾತಕ್ಕೆ ಕಾರಣವಾಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೊ ರಸ್ತೆಬದಿಯಲ್ಲಿ ನಿಂತಿದ್ದ ಕಾರನ್ನು ತೋರಿಸುತ್ತದೆ. ಕೆಲವು ಸೆಕೆಂಡುಗಳ ನಂತರ, ಒಬ್ಬ ವ್ಯಕ್ತಿ...

ಕೆಕೆಆರ್‌ ತಂಡದಿಂದ ಬಾಂಗ್ಲಾ ಆಟಗಾರನ ಕೈಬಿಡುವಂತೆ ಬಿಸಿಸಿಐ ಸೂಚನೆ

ಬಾಂಗ್ಲಾದೇಶದ ವಿರುದ್ಧ ದೇಶದಾದ್ಯಂತ ಹೆಚ್ಚುತ್ತಿರುವ ಆಕ್ರೋಶದ ನಂತರ ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಂಸ್ಥೆಗೆ...

ಛತ್ತೀಸ್‌ಗಢ: ಬಸ್ತಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ಕ್ಕೂ ಹೆಚ್ಚು ನಕ್ಸಲರ ಸಾವು

ಸುಕ್ಮಾ/ಬಿಜಾಪುರ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 12 ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಕ್ಮಾದಲ್ಲಿ 10 ಕ್ಕೂ ಹೆಚ್ಚು ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಯಿತು,...